ಭಟ್ಕಳ (Bhatkal): ರಕ್ತದಾನ (Blood Donation) ಮಹಾದಾನ, ನೀವು ನೀಡಿದ ರಕ್ತ ಇನ್ನೊಬ್ಬರ ಪ್ರಾಣವನ್ನು ಉಳಿಸಬಹುದು. ಆರೋಗ್ಯವಂತ ಜನರು ತಮ್ಮ ರಕ್ತ ದಾನ ಮಾಡಬಹುದು ಎಂದು ಟಿಎಚ್‌ಒ ಡಾ. ಸವಿತಾ ಕಾಮತ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಆರೋಗ್ಯ ಇಲಾಖೆ ಭಟ್ಕಳ, ಗೌಡ ಸಾರಸ್ವತ ಬ್ರಾಹ್ಮಣ (GSB) ಸಮಾಜ ಭಟ್ಕಳ, ಉಡುಪಿ (Udupi) ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಭಟ್ಕಳದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ನಡೆದ ರಕ್ತದಾನ (Blood Donation) ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೇವಲ ರಕ್ತ ಮಾತ್ರವಲ್ಲ ಅಂಗಾಂಗ ದಾನಗಳ ಕುರಿತು ಭಾರತದಲ್ಲಿ ಜನರಿಗೆ ಅಷ್ಟೊಂದು ಅರಿವು ಇಲ್ಲ. ವಿದೇಶಗಳಲ್ಲಿ ೬೦ರ ಹರೆಯದಲ್ಲೂ ಕಿಡ್ನಿ  ಟ್ರಾನ್ಸಪ್ಲಾಂಟ್‌ನಂತಹ (Kidney transplant) ಚಿಕಿತ್ಸೆಗಳು ನಿರಾಯಾಸವಾಗಿ ನಡೆಯುತ್ತದೆ. ಅಲ್ಲಿ ಮೃತನಾದ ಸ್ವಸ್ಥ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ : Mankal Vaidya/ ಉತ್ತರ ಕನ್ನಡ ಜಿಲ್ಲೆಗೆ ಭರಪೂರ ಯೋಜನೆಗಳು

ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಜಿಎಸ್‌ಎಸ್ ಅಧ್ಯಕ್ಷ ಗಿರಿಧರ ನಾಯಕ, ಮುಖ್ಯ ಅತಿಥಿ ನಾಗೇಶ ಭಟ್ ಮಾತನಾಡಿದರು. ರಕ್ತದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಸುನಿತಾ ಪೈ ಇದ್ದರು. ಬೆಳಿಗ್ಗೆ ೯.೩೦ಕ್ಕೆ ರಕ್ತದಾನ ಶಿಬಿರ ಆರಂಭವಾಗಿ ೨ ಗಂಟೆಗೆ ಕೊನೆಗೊಂಡಿತು. ಒಟ್ಟ ೬೪ ಯುನಿಟ್ ರಕ್ತ ಶೇಖರಿಸಿ ಉಡುಪಿ ಬ್ಲಡ್ ಬ್ಯಾಂಕಿಗೆ ಕಳುಹಿಸಲಾಯಿತು. ಗುರುದಾಸ ಪ್ರಭು ನಿರ್ವಹಿಸಿದರು. ದೀಪಕ ನಾಯಕ ಸಹಕರಿಸಿದರು.

ಇದನ್ನೂ ಓದಿ : Kaadumale/ ಉ.ಕ.ದಲ್ಲಿ ಚಿತ್ರೀಕರಣದ ವೇಳೆ ಜಿಗಣೆ, ಹಾವು ಕಾಟ