ಭಟ್ಕಳ (Bhatkal) : ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ೨೦೨೫ನೇ ಇಸ್ವಿಯ ಕ್ಯಾಲೆಂಡರನ್ನು (Calender) ಬುಧವಾರ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಬಿಡುಗಡೆಗೊಳಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕ್ಯಾಲೆಂಡರನ್ನು (Calender)  ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಸಂಘದ ಧ್ಯೇಯೋದ್ದೇಶ ಮತ್ತು ಮುಂದಿನ ಕಾರ್ಯಯೋಜನೆ ಬಗ್ಗೆ ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಉಪಾಧ್ಯಕ್ಷರಾದ ವಿಷ್ಣು ದೇವಾಡಿಗ, ಎಂ ಆರ್ ಮಾನ್ವಿ, ಖಚಾಂಚಿ ಮೋಹನ ನಾಯ್ಕ, ಸಹ ಕಾರ್ಯದರ್ಶಿ ಪ್ರಸನ್ನ ಭಟ್ಟ, ಸಂಘದ ಸದಸ್ಯರಾದ ಸತೀಶಕುಮಾರ ನಾಯ್ಕ, ಸುಬ್ರಹ್ಮಣ್ಯ ದಾಸನಕುಡಿಗೆ, ಭಾಸ್ಕರ ನಾಯ್ಕ, ನಸೀಮುಲ್ ಘನಿ, ಅತೀಕುರ್ರೆಹಮಾನ ಶಾಬಂದ್ರಿ, ಪೈಯಾಜ್ ಮುಲ್ಲಾ, ಮುಬಾಶ್ಯೀರ್ ಹಲ್ಲಾರೆ, ಉದಯ ನಾಯ್ಕ, ಶೈಲೇಶ ವೈದ್ಯ, ಈಶ್ವರ ನಾಯ್ಕ, ಲೋಕೇಶ ನಾಯ್ಕ ಮುಂತಾದವರಿದ್ದರು.

ಇದನ್ನೂ ಓದಿ : Ginger growers / ಕಣ್ಣೀರು ಸುರಿಸುತ್ತಿರುವ ಶುಂಠಿ ಬೆಳೆಗಾರರು