ಹೊನ್ನಾವರ (Honnavar) : ಭಟ್ಕಳದಿಂದ (Bhatkal) ಹೊನ್ನಾವರ ಕಡೆಗೆ ಬರುತ್ತಿದ್ದ ಕಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಕಾರು ಮತ್ತು ಆಟೋ ಜಖಂಗೊಂಡು ಮೂವರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಟೊಂಕಾ ಕ್ರಾಸ್ ಹತ್ತಿರ ನಡೆದಿದೆ (Car-auto accident). ಮಾ.೯ರಂದು ರಾತ್ರಿ ೯.೪೫ರ ಸುಮಾರಿಗೆ ಈ ಅಪಘಾತ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಪಘಾತದಲ್ಲಿ ಕಾರು ಚಾಲಕ ಭಟ್ಕಳ ತಾಲೂಕಿನ ಮುಗ್ದಂ ಕಾಲೋನಿಯ ಮೊಹಮ್ಮದ್ ಸಮೀರ್ ಹಸನ್ ಶಬ್ಬರ್ (೩೦), ಕಾರಿನಲ್ಲಿದ್ದ ಸಹಪ್ರಯಾಣಿಕ ಇಸ್ಮಾಯಿಲ್ ಇಮಶಾದ್ ಮತ್ತು ಆಟೋ ಚಾಲಕ ಹೊನ್ನಾವರ ತಾಲೂಕಿನ ಕಾಸರಕೋಡಿನ ಹಿರೇಮಠ ವಾಸಿ ರಾಜು ಶಾಂತಾರಾಮ ನಾಯ್ಕ (೪೯) ಗಾಯಗೊಂಡವರು. ಕಾರು ಮತ್ತು ಆಟೋ ರಿಕ್ಷಾ ಜಖಂಗೊಂಡಿವೆ.
ಇದನ್ನೂ ಓದಿ : KFD/ ಉತ್ತರ ಕನ್ನಡದಲ್ಲಿ ೧೮ ಮಂಗಗಳ ಸಾವು
ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಚಾಲಕ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅತಿವೇಗ ಮತ್ತು ನಿಷ್ಕಾಜಳಿತನಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿದ್ದರಿಂದ ಡಿಕ್ಕಿ ಹೊಡೆದಿದೆ (Car-auto accident) ಎಂದು ದೂರಲಾಗಿದೆ. ಈ ಕುರಿತು ಆಟೋ ರಿಕ್ಷಾ ಚಾಲಕ ರಾಜು ನಾಯ್ಕ ವಿರುದ್ಧ ಕಾರು ಚಾಲಕ ಮೊಹಮ್ಮದ್ ಸಮೀರ್ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ.
ಇದನ್ನೂ ಓದಿ : Hit and Run/ ಮುರ್ಡೇಶ್ವರದಲ್ಲಿ ಹಿಟ್ ಎಂಡ್ ರನ್ ಪ್ರಕರಣ