ಭಟ್ಕಳ(Bhatkal): ಸ್ವಚ್ಛತಾ ಕಾರ್ಯವನ್ನು ದೇವರೆಂದು ನಂಬಿ, ಪ್ರತಿ ನಿತ್ಯ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವವರು ಪೌರ ಕಾರ್ಮಿಕರು(Civil workers). ದೇಶದ ಜನರ ಆರೋಗ್ಯವನ್ನು ಕಾಪಾಡುತ್ತ ಪರಿಸರವನ್ನು ಕಾಪಾಡಲು ದುಡಿಯುವ ಇವರೂ ನಮ್ಮ ದೇಶದ ಯೋಧರು ಎಂದು ಮೀನುಗಾರಿಕೆ (Fisheries), ಬಂದರು ಒಳನಾಡು ಜಲಸಾರಿಗೆ ಸಚಿವ (Minister) ಮಂಕಾಳ ವೈದ್ಯ (Mankal Vaidya) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ತಾಲೂಕು ಕ್ರೀಡಾಂಗಣದ ಎದುರಿನ ಬಿಲಾಲ್ ಸಭಾಭವನದಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು. ಪೌರ ಕಾರ್ಮಿಕರನ್ನು (Civil workers) ಉತ್ತೇಜಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೂ ಹಾಗೂ ಅವರ ಮಕ್ಕಳಿಗೆ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ನಮ್ಮ ಸರಕಾರ ಕೂಡಾ ಸದಾ ಪೌರ ಕಾರ್ಮಿಕರಿಗೆ ಸಹಕಾರಕ್ಕೆ ಜೊತೆಯಾಗಿ ನಿಂತಿದೆ. ಪೌರ ಕಾರ್ಮಿಕರ ಮಕ್ಕಳು ಯಾವುದೆ ಉನ್ನತ ಶಿಕ್ಷಣ ಪಡೆಯುವದಾದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಇದನ್ನೂಓದಿ:  ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

ಭಟ್ಕಳ ಮತ್ತು ಜಾಲಿ ಪಟ್ಟಣ ಪಂಚಾಯಿತಿಯ ೭೦ ಪೌರಕಾರ್ಮಿಕರಿಗೆ ಸಚವರು ಸರ್ಕಾರದ ವತಿಯಿಂದ ನೀಡಲಾಗುವ ವಿಶೇಷ ಭತ್ಯೆಯ ಚೆಕ್ಕನ್ನು ಸಾಂಕೇತಿಕವಾಗಿ ವಿತರಿಸಿದರು. ಪೌರಕಾರ್ಮಿಕರನ್ನು ಸಚಿವರು ಸನ್ಮಾನಿಸಿದರು. ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೌರಕಾರ್ಮಿಕರಿಂದ ವಿವಿಧ ಮನೋರಂಜನೆ ಕಾರ್ಯಕ್ರಮ, ಸ್ಪರ್ಧೆ ಸೇರಿಸದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ :  ಸಿಡಿಲು ಬಡಿದು ಸತ್ತವರ ಸಂಖ್ಯೆ ಐದಕ್ಕೇರಿಕೆ

ಜಾಲಿ ಪ.ಪಂ ಅಧ್ಯಕ್ಷೆ ಖಾಜೀಯಾ ಆಪ್ಸಾ, ಉಪಾಧ್ಯಕ್ಷ ಸೈಯ್ಯದ್‌ ಇಮ್ರಾನ್‌ ಲಂಕಾ, ಭಟ್ಕಳ ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ ಮಾತನಾಡಿದರು. ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಸ್ವಾಗತಿಸಿದರು. ಪರಿಸರ ಅಭಿಯಂತ ವೆಂಕಟೇಶ ನಾವುಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಲಿ ಪ.ಪಂ ಮುಖ್ಯಾಧಿಕಾರಿ ಮಂಜಪ್ಪ ಎನ್. ವಂದಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರು.

ವಿಡಿಯೋ ಸಹಿತ ಇದನ್ನೂ ಓದಿ : ಯಮುನಾ ನಾಯ್ಕ ಪ್ರಕರಣದ ಆರೋಪಿ ಶಿಕ್ಷೆಗೆ ಮನವಿ