ಭಟ್ಕಳ (Bhatkal) : ಸ್ಕೂಟರ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ (collision of scooters) ಸವಾರರಿಬ್ಬರೂ ಗಾಯಗೊಂಡ ಘಟನೆ ಭಟ್ಕಳ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಪುರವರ್ಗದ ಬೃಂದಾವನ ಹೊಳೆ ಹತ್ತಿರ ಈ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಬೆಳಕೆ ಜನತಾ ಕಾಲೋನಿ ನಿವಾಸಿ ನಾಗರಾಜ ತಿಮ್ಮಪ್ಪ ಮೊಗೇರ (೩೯) ಎಂಬುವವರು ಸುಜುಕಿ ಅಕ್ಸೆಸ್‌ ಸ್ಕೂಟರ್‌ ಚಲಾಯಿಸಿಕೊಂಡು ಭಟ್ಕಳ ಕಡೆಯಿಂದ ಬೆಳಕೆ ಕಡೆಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಬೆಳಕೆ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಟಿವಿಎಸ್‌ ಜುಪಿಟರ್‌ ಸ್ಕೂಟರ್‌ ಡಿಕ್ಕಿ ಹೊಡೆದಿದೆ (collision of scooters). ಇಬ್ಬರೂ ಸವಾರರು ಸ್ಕೂಟರ್‌ ಸಮೇತ ರಸ್ತೆಯ ಮೇಲೆ ಬಿದ್ದು, ಗಾಯಗೊಂಡಿದ್ದಾರೆ. ಟಿವಿಎಸ್‌ ಜುಪಿಟರ್‌ ಸ್ಕೂಟರ್‌ ಸವಾರ ಪುರವರ್ಗದ ಪ್ರದೀಪ ಮಾಸ್ತಪ್ಪ ನಾಯ್ಕ ವಿರುದ್ಧ ದೂರು (complaint) ದಾಖಲಾಗಿದೆ.

ಇದನ್ನೂ ಓದಿ : Garuda Gang/ ಗರುಡಾ ಗ್ಯಾಂಗ್‌ ಹೆಡೆಮುರಿ ಕಟ್ಟಿದ ಭಟ್ಕಳ ಪೊಲೀಸರು