ಸಿದ್ದಾಪುರ (Siddapur): ವಿಪರೀತ ಸಾರಾಯಿ ಕುಡಿತಕ್ಕೆ ಅಂಟಿಕೊಂಡಿದ್ದ ಯುವಕನೋರ್ವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ (siddapur crime) ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಿದ್ದಾಪುರ ತಾಲೂಕಿನ ಶೇಲೂರು ಗ್ರಾಮದ ಕಲಗದ್ದೆ ನಿವಾಸಿ ಶ್ರೀಕಾಂತ ನಾಗಾ ದೇವಡಿಗ (೩೫) ಸಾವಿಗೆ ಶರಣಾದ ಯುವಕ. ವಿಪರೀತ ಸಾರಾಯಿ ಕುಡಿತದ ದಾಸನಾಗಿದ್ದ ಶ್ರೀಕಾಂತ ಕಳೆದ ನಾಲ್ಕೈದು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಈತ ರಾತ್ರಿ ಹೊತ್ತಿನಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡುವುದು, ಅವರು ಬಂದರು, ಇವರು ಅಂತ ಹೇಳಿ ಹೆದರುತ್ತಿದ್ದ.

ಇದನ್ನೂ ಓದಿ :  ಓಸಿ, ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ಬಂಧನ

ಮಾನಸಿಕ ಅವಸ್ಥೆಯಲ್ಲಿದ್ದ ಈತ ನಿನ್ನೆ ಸೋಮವಾರ ಬೆಳಿಗ್ಗೆ ೫ರಿಂದ ನಾಪತ್ತೆಯಾಗಿದ್ದ. ಸಾಯಂಕಾಲ ೪ ಗಂಟೆಯ ಸುಮಾರಿಗೆ ಈತ ಬೂರನಬೆಟ್ಟದ ಮರವೊಂದಕ್ಕೆ ಸೀರೆ ಕಟ್ಟಿ, ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂಮದಿದೆ. ಈ ಕುರಿತು ಮೃತನ ತಂದೆ ನಾಗಾ ತಿಮ್ಮ ದೇವಾಡಿಗ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (siddapur crime). ಪ್ರಕರಣ ದಾಖಲಿಸಿಕೊಂಡ (Case Registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಮೀನುಗಾರ ಮುಖಂಡ ರಾಜು ತಾಂಡೇಲ ನಿಧನ