ಭಟ್ಕಳ (Bhatkal) : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಲಾರಿ ಮತ್ತು ಶಾಲಾ ವಾಹನ (School van) ಮುಖಾಮುಖಿ ಡಿಕ್ಕಿ (Accident) ಹೊಡೆದ ಘಟನೆಗೆ ಸಂಬಂಧಿಸಿದಂತೆ ಶಾಲಾ ವಾಹನ ಚಾಲಕನ ವಿರುದ್ಧ ದೂರು (Complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಮದೀನಾ ಕಾಲೋನಿಯ ರೆಹಮತಾಬಾದ ನಿವಾಸಿ ಮೊಹಮ್ಮದ ಇಶಾಮ್ ತಂದೆ ಅಬ್ದುಲ್ ರಹೀಮ್ ಟೇಲರ್ (೨೨) ವಿರುದ್ಧ ದೂರು ದಾಖಲಾಗಿದೆ. ಲಾರಿ ಚಾಲಕ ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ತಾಲೂಕಿನ ಬರಡೋಲ್ ನಿವಾಸಿ ದಸ್ತಗೀರ ಮೊಹಮ್ಮದ್ ಮುಲ್ಲಾ (೩೪) ದೂರು (Complaint) ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ,ಅತಿ ವೇಗ ಮತ್ತು ಅಜಾಗರೂತೆಯಿಂದ ಶಾಲಾ ವಾಹನ ಚಲಾಯಿಸಿಕೊಂಡು ಬಂದು ರಸ್ತೆಯ ಬಲಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : School Van Accident/ ಶಾಲಾ ವಾಹನ ಅಪಘಾತ
ಭಟ್ಕಳ ಕಡೆಯಿಂದ ಮಂಗಳೂರು (Mangaluru) ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿನಿಂದ ಬಂದ ಶಾಲಾ ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಶಾಲಾ ವಾಹನ ಪಲ್ಟಿಯಾಗಿ ಶಾಲಾ ವಾಹನದಲ್ಲಿದ್ದ ಮುಗಳಿಹೊಂಡ ನಿವಾಸಿ ಶೈನಾಜ್ ಫಯಾಜ್ ಮೊಹಮ್ಮದ್ ಆದಂ (೩೦) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಶಾಲಾ ವಾಹನ ಚಾಲಕ ಮೊಹಮ್ಮದ್ ಇಶಾಮ್ ಕೂಡ ಗಾಯಗೊಂಡಿದ್ದರು. ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : Good Deed/ ಹೀಗೊಂದು ಪುಣ್ಯ ಕಾರ್ಯ…