ಕುಮಟಾ (Kumta) : ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿದ ಹಣದಲ್ಲಿ ಹೇಳಿದಷ್ಟು ಲಾಭಾಂಶ ಬಾರದಿರುವುದಕ್ಕೆ ಓರ್ವ ಮಹಿಳೆ ಸಹಿತ ಇಬ್ಬರು ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ ತಾಲೂಕಿನ ದೀವಳಿಯ ನಾಥಾಲಿನ್ ಡುಮಿಂಗ್ ಕರ್ನಲ್ (೬೫) ಮತ್ತು ಅವರ ಮಗಳು ಪ್ರಿಯಾ ಹಲ್ಲೆಗೊಳಗಾದವರು. ಸೆ.೨೨ರಂದು ಬೆಳಿಗ್ಗೆ ೯.೧೫ಕ್ಕೆ ಈ ಘಟನೆ ನಡೆದಿದ್ದು, ಒಂದು ತಿಂಗಳ ನಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ತಿಳಿಸಿರುವಂತೆ, ಮುರ್ಡೇಶ್ವರದ (Murdeshwar) ಹೆಲೆನ್ ಫ್ರಾನ್ಸಿಸ್ ಗೋಮ್ಸ್ (೫೦), ಇನ್ನೋರ್ವ ೪೦ ವರ್ಷ ವಯಸ್ಸಿನ ಅಪರಿಚಿತ ಪುರುಷನೋರ್ವ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.
ಇದನ್ನೂ ಓದಿ : AITM ಕಾಲೇಜಿನಲ್ಲಿ ಒಂದು ದಿನದ ಹ್ಯಾಕಥಾನ್ ಯಶಸ್ವಿ
ಆರೋಪಿ ಹೆಲೆನ್ ಅವರು ನಾಥಾಲಿನ್ ಅವರಿಗೆ ಹೊಡೆದು ತಳ್ಳಿ ಹಾಕಿದ್ದಾರೆ. ತಡೆಯಲು ಬಂದ ನಾಥಾಲಿನ್ ಮಗಳು ಅವರಿಗೆ ಅಪರಿಚಿತ ವ್ಯಕ್ತಿ ದೂಡಿದ್ದಾರೆ. ಹೆಲೆನ್ ಅವರು ನಾಥಾಲಿನ್ ಅವರ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದಾರೆ. ನಿನ್ನ ಮಗ ಮತ್ತು ಅವನ ಸ್ನೇಹಿತ ಷೇರು ಮಾರುಕಟ್ಟೆಯಲ್ಲಿ ಹೂಡಿದ ಹಣದಲ್ಲಿ ಹೇಳಿದಷ್ಟು ಲಾಭಾಂಶ ನೀಡಿಲ್ಲ. ಹಣ ನೀನೇ ಕೊಡಬೇಕು. ಕೊಡದಿದ್ದರೆ ನಿನ್ನ ಮತ್ತು ನಿನ್ನ ಮಗಳನ್ನು ಕೊಂದು ಬಿಡುತ್ತೇವೆ. ಪುನಃ ಮನೆಗೆ ನುಗ್ಗಿ ಹೊಡೆದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ರೋಟರಾಕ್ಟ್, ಇಂಟರಾಕ್ಟ್ ಪದಗ್ರಹಣ ಸಮಾರಂಭ
ಅತಿ ಹೆಚ್ಚು ಲಾಭದಾಸೆಗೆ ೫೦.೭೩ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಈಗಾಗಲೇ ಕಾರವಾರದ (Karwar) ಸಿಇಎನ್ (CEN) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುರ್ಡೇಶ್ವರದ (Murudeshwar) ಹೆಲೆನ್ ಗೋಮ್ಸ್ ಅವರು ದಿವಳ್ಳಿಯ ನಾಥಾಲಿನ್ ಕರ್ನಲ್ ಅವರ ಪುತ್ರ ಸಚಿನ್ ಕರ್ನಲ್ ಮತ್ತು ಗುರುರಾಜ ಎಂಬುವವರ ವಿರುದ್ಧ ದೂರು (Complaint) ದಾಖಲಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಅತಿ ಹೆಚ್ಚು ಲಾಭದಾಸೆಗೆ ೫೦.೭೩ ಲಕ್ಷ ರೂ. ಕಳೆದುಕೊಂಡ ಮುರ್ಡೇಶ್ವರದ ಗೃಹಿಣಿ