ಧರ್ಮಸ್ಥಳ (Dharmasthala) : ನಮ್ಮೊಳಗಿನ ಆಧ್ಯಾತ್ಮ ಮೌಲ್ಯಗಳು ಜಾಗೃತವಾಗಿ ಜಗತ್ತಿನ ಧರ್ಮಕ್ಕೆ ಶಕ್ತಿ ನೀಡಲು ನಾವು ಇನ್ನಷ್ಟು ಬಲಿಷ್ಠರಾಗಬೇಕು ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Shri) ಪಟ್ಟಾಭಿಷೇಕದ ವರ್ಧಂತಿ (Coronation Vardhanti) ಕಾರ್ಯಕ್ರಮದಲ್ಲಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ತಮ್ಮ ಪಟ್ಟಾಭಿಷೇಕದ ೧೬ನೇ ವರ್ಧಂತ್ಯುತ್ಸವ (Coronation Vardhanti) ಸಮಾರಂಭದಲ್ಲಿ ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ನೆರೆದ ಭಕ್ತರಿಗೆ ಆಶೀರ್ವಚನ ನೀಡಿದರು. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವುದರಿಂದ ಅಭ್ಯುದಯ ಉಂಟಾಗುತ್ತದೆ. ಧರ್ಮರಕ್ಷಣೆಗೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕು ಸಾಗಿಸಬೇಕು ಎಂದರು.
ಇದನ್ನೂ ಓದಿ : ಕಾರವಾರ ಶೈಕ್ಷಣಿಕ ಜಿಲ್ಲೆಯ ೧೫ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ
ಸಂಸ್ಕಾರ, ಮೌಲ್ಯಗಳನ್ನು ಪಸರಿಸುವ ಅಗತ್ಯವಿದೆ. ಮುಂದಿನ ಜನಾಂಗಕ್ಕೆ ಧರ್ಮ ಪ್ರಚಾರ ಮಾಡುವ ಜವಾಬ್ದಾರಿ ಎಲ್ಲರಿಗಿದೆ. ಜಾತಿ, ರಾಜಕೀಯ ಸಮಸ್ಯೆ ದೂರ ಮಾಡಿ ನಮ್ಮತನವನ್ನು ಸೃಷ್ಟಿಸಿಕೊಂಡು ಲೋಕಕಲ್ಯಾಣ ಕಾರ್ಯಗಳನ್ನು ಮಾಡಬೇಕು. ದ್ವೇಷ, ಅಸೂಯೆ, ಸಂಶಯ, ಸಿಟ್ಟು ಬಿಟ್ಟಾಗ ಆನಂದ ಸಿಗುತ್ತದೆ. ಸ್ವಾರ್ಥದಿಂದ ಭೇದಭಾವ ಉಂಟಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಸೆ.೪ರಂದು ೨ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ
ಬಂದರು ಮತ್ತು ಮೀನುಗಾರಿಕೆ ಸಚಿವ (fisheries minister) ಮಾಂಕಾಳ ಎಸ್. ವೈದ್ಯ (Mankal Vaidya) ಮಾತನಾಡಿ, ನಮ್ಮೊಳಗೆ ವ್ಯತ್ಯಾಸವಾದಾಗ ಸರಿದಾರಿಗೆ ತರುವ ಕೆಲಸಗಳು ಮಠಗಳಿಂದ ನಡೆಯುತ್ತದೆ. ಸ್ವಾಮೀಜಿಗಳ ಉದ್ದೇಶ ಶಿಷ್ಯರ ಉನ್ನತಿ. ಇಲ್ಲಿನ ಗುರುಗಳ ಆಶಯದಂತೆ ಒಂಭತ್ತು ಶಾಖಾಮಠಗಳು ನಿರ್ಮಾಣವಾಗಲಿ. ಮುಂದಿನ ಚಾತುರ್ಮಾಸ್ಯವನ್ನು(Chaturmasya) ಕೂಡ ಭಟ್ಕಳದಲ್ಲೇ (Bhatkal) ನಡೆಸಲು ಭಕ್ತರು ಆಶಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : Grand welcome/ ವಿಶ್ವ ಚಾಂಪಿಯನ್ ಧನ್ವಿತಾಗೆ ಅದ್ದೂರಿ ಸ್ವಾಗತ
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಮಾತನಾಡಿ, ಸನಾತನ ಪರಂಪರೆಯಲ್ಲಿ ಗುರು ಪರಂಪರೆಗೆ ವಿಶಿಷ್ಟ ಸ್ಥಾನಮಾನ, ಮನ್ನಣೆ ಇದೆ. ಬದುಕಿನಲ್ಲಿ ಬೆಂದಿರುವ ಮಂದಿಗೆ ದಾರಿದೀಪವಾಗುವ ಶಕ್ತಿ ಗುರುವಿನಲ್ಲಿದೆ. ಗುರು ಭಕ್ತಿಯಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು. ಕಿಯೋನಿಕ್ಸ್ (keonics)ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶಕ್ಕೆ ಸಂತರು ಅನಿವಾರ್ಯ. ದೇವರು, ಗುರುಗಳು ಒಲಿಯಲು ಭಕ್ತಿಯೇ ಮಾರ್ಗ ಎಂದು ಹೇಳಿದರು.
ಇದನ್ನೂ ಓದಿ : ಮುರ್ಡೇಶ್ವರ ಪಿಎಸ್ಐ ಮಂಜುನಾಥ ಅಮಾನತು
ಅಯೋಧ್ಯೆಯ (Ayodhya) ಕೇಶವದಾಸ ಮಹಾರಾಜ, ಮಂಗಳೂರು (mangaluru) ಉತ್ತರ ಕ್ಷೇತ್ರದ ಶಾಸಕ ಡಾ.ಭರತ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ, ಭಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಭಟ್ಕಳ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಹೊನ್ನಾವರ (Honnavar) ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ ನಾಯ್ಕ ಮಂಕಿ, ಭಟ್ಕಳ ಶಾರದಾಹೊಳೆ ನಾಮಧಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್. ಕೆ. ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಕುಮಟಾ (Kumta) ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್. ಜಿ. ನಾಯ್ಕ, ಕೃಷ್ಣ ನಾಯ್ಕ ಶಿರಾಲಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂಓದಿ : ಸೆಪ್ಟೆಂಬರ್ ೩ರಂದು ವಿವಿಧೆಡೆ ಅಡಿಕೆ ಧಾರಣೆ
ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ ಸ್ವಾಗತಿಸಿದರು. ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕೆಲ್ಲಡ್ಕ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆಗಳು ಜರುಗಿದವು. ಸ್ವಾಮೀಜಿಯವರ ಪಾದ ಪೂಜೆ ನಡೆಯಿತು.
ಇದನ್ನೂ ಓದಿ : ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ