ಭಟ್ಕಳ (Bhatkal) : ತಾಲೂಕಿನ ಜಾಲಿ ಪಟ್ಟಣ ಪಂಚಾಯತ ನೂತನ ಕಟ್ಟಡ ಇಂದು ಉದ್ಘಾಟನೆಯಾಗಿದೆ. ವಿಷಯ ಇದಲ್ಲ. ಈ ನೂತನ ಕಟ್ಟಡದ ಕೊಡುಗೆ ಯಾರದ್ದು? ಕಾಂಗ್ರೆಸ್‌ ಸರ್ಕಾರದ್ದೊ, ಬಿಜೆಪಿಯದ್ದೊ? ಮಾಜಿ ಶಾಸಕ ಸುನೀಲ ನಾಯ್ಕರದ್ದೊ, ಹಾಲಿ ಶಾಸಕ, ಸಚಿವ ಮಂಕಾಳ ವೈದ್ಯರದ್ದೊ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವೂ ಇದೆ. ಜಾಲಿ ಪಟ್ಟಣ ಪಂಚಾಯತ ಕ್ರೆಡಿಟ್‌ಗಾಗಿ ಮಾಜಿ ಮತ್ತು ಹಾಲಿ ಶಾಸಕರು ಪೈಪೋಟಿಗಿಳಿದಂತಿದೆ (compete).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಿಂದಿನ ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ಶಾಸಕರಾಗಿದ್ದ ಬಿಜೆಪಿಯ (BJP) ಸುನೀಲ ನಾಯ್ಕ ತಮ್ಮ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿದ್ದಂದ್ರೆ, ಉಸ್ತುವಾರಿ ಸಚಿವರೂ ಆಗಿರುವ ಹಾಲಿ ಶಾಸಕ ಮಂಕಾಳ ವೈದ್ಯ (Mankal Vaidya) ಇದರ ಸಂಪೂರ್ಣ ಕ್ರೆಡಿಟ್‌ ತಮ್ಮದು ಎಂದಿದ್ದಾರೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ ಮಾಡಿರುವ ಮಾಜಿ ಶಾಸಕ ಸುನೀಲ ನಾಯ್ಕ, ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ್‌ ಕಟ್ಟಡವು ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಗಮನಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ೧ ಕೋಟಿ ರೂ. ಅನುದಾನ (grant) ಬಿಡುಗಡೆಗೊಳಿಸಿ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿತ್ತು. ಚುನಾವಣೆ ಸಮಯದಲ್ಲಿ ಉದ್ಘಾಟನೆ ವಿಳಂಬವಾಗಿತ್ತು ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : Honnavar/ ಸಚಿವ ಮಂಕಾಳ ವೈದ್ಯ ವಿರುದ್ಧ ಬಾಲಕಿ ಆಕ್ರೋಶ

ಈ ಪೋಸ್ಟ್‌ಗೆ ಅವರು, ಐದು ವರ್ಷಗಳ ಹಿಂದೆ ೨೦೨೦ರ ಜು.೧೩ರಂದು ತಾವು ಮಾಡಿರುವ ಪೋಸ್ಟ್‌ ಟ್ಯಾಗ್‌ ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಜಾಲಿ ಪಟ್ಟಣ ಪಂಚಾಯತ್‌ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಅಂದಾಜು ಮೊತ್ತ ೧ ಕೋಟಿ ರೂಪಾಯಿ ಎಂದು ಬರೆದುಕೊಂಡಿದ್ದರು. ಅಲ್ಲದೇ ಪಿಲ್ಲರ್‌ಗಾಗಿ ಗುಂಡಿತೋಡಿರುವ ಸ್ಥಳ ವೀಕ್ಷಣೆಯ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದರು.

ಇದನ್ನೂ ಓದಿ : Police Raid/ ಇಸ್ಪೀಟ್‌ ಅಡ್ಡೆಗೆ ಭಟ್ಕಳ ಪೊಲೀಸರ ದಾಳಿ

ಇದೀಗ, ಕಟ್ಟಡ ಉದ್ಘಾಟಿಸಿರುವ ಸಚಿವ (Minister) ಮಂಕಾಳ ವೈದ್ಯ, ತಮ್ಮ ಸರ್ಕಾರದಿಂದ ಈ ಕಟ್ಟಡ ನಿರ್ಮಾಣಗೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಸಚಿವ ಮಂಕಾಳ ವೈದ್ಯ,  ೫ ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರಕ್ಕೆ ಕಟ್ಟಡ ಪೂರ್ಣಗೊಳಿಸುವ ಶಕ್ತಿ ಇರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಉದ್ಘಾಟನೆಯ ಫೋಟೋಗಳನ್ನು ಅಪ್ಲೋಡ್‌ ಮಾಡಿರುವ ಅವರು, ಈ ಹಿಂದೆ ತಾವು ಶಾಸಕರಾಗಿದ್ದಾಗ ಕಾಂಗ್ರೆಸ್‌ (Congress) ಸರ್ಕಾರದಿಂದ ೧ ಕೋಟಿ ರೂ. ಅನುದಾನದಲ್ಲಿ ಕಟ್ಟಡವನ್ನು ಮಂಜೂರು ಮಾಡಿಸಿಕೊಂಡು ಬರಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ : Murdeshwar/ ಕಾರು ಡಿಕ್ಕಿಯಾಗಿ ಮೋಟರ್‌ ಸೈಕಲ್‌ ಸವಾರಗೆ ಗಾಯ

ದಿನಾಂಕ ೬-೧೨-೨೦೧೭ರಂದು ಅಂದಿನ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಅಮೃತ ಹಸ್ತದಿಂದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇಂದು ಮತ್ತೆ ಅಧಿಕಾರಕ್ಕೆ ಬಂದ ತಮ್ಮಕಾಂಗ್ರೆಸ್‌ ಸರ್ಕಾರ (Congress Government) ಹಾಗೂ ತಾವು ಕೂಡಲೇ ಇದರ ಬಗ್ಗೆ ಗಮನಹರಿಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆಗ ಚರ್ಚಿಸಿ ಶೀಘ್ರವಾಗಿ ಕಟ್ಟಡವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು ಎಂದು ಸಚಿವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Gathering/ ನಿವೃತ್ತರಿಗೆ, ಸಾಧಕರಿಗೆ ಸನ್ಮಾನ; ಮಕ್ಕಳಿಂದ ನೃತ್ಯ ವೈಭವ

ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹಾಲಿ-ಮಾಜಿಗಳ ಪೈಪೋಟಿ (compete) ಕ್ಷೇತ್ರದ ಜನತೆಯಲ್ಲಿ ಗೊಂದಲ ಮೂಡುವಂತೆ ಮಾಡಿದೆ. ಹಾಲಿ-ಮಾಜಿಗಳು ಕೇವಲ ಹೇಳಿಕೆ ಕೊಡುವುದನ್ನು ಬಿಟ್ಟು, ಕಾಮಗಾರಿ ಮಂಜೂರಿ ಮತ್ತು ಅನುದಾನ ಬಿಡುಗಡೆಯ ಆದೇಶ ಪ್ರತಿಯನ್ನು ಬಿಡುಗಡೆಮಾಡುವ ಧೈರ್ಯ ತೋರಲಿ. ಆಗ, ಯಾರು ಹೇಳಿದ್ದು ಖರೆ, ಯಾರು ಹೇಳಿದ್ದು ಸುಳ್ಳು ಎಂಬುದು ಬಹಿರಂಗಗೊಳ್ಳಲಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Shejjeshwar/ ಶ್ರೀ ಶೆಜ್ಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ