ಶಿರಸಿ: ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳ(Daivajna Shri) 39ನೇ ವರ್ಷದ ಚಾತುರ್ಮಾಸ್ಯ(Chathurmasya) ಹಾಗೂ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳವರ ಪ್ರಥಮ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಗುರುಪೂರ್ಣಿಮೆ(guru poornima) ದಿನ ಜು. ೨೧ ರಂದು ಶಿರಸಿ(Sirsi) ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಶ್ರೀಗಳವರಿಂದ ವ್ಯಾಸಪಂಚಕ ಪೂಜೆ ಮೂಲಕ ಚಾತುರ್ಮಾಸ್ಯ ವ್ರತ ಪೂಜೆ ಆರಂಭಗೊಂಡಿತು. ನಂತರ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀಗಳ(Daivajna Shri) ಪಾದುಕಾ ಪೂಜೆ, ಸಭಾ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ, ವ್ಯಾಸಕ್ಷತೆ ನಡೆಯಿತು. ೧೨.೩೦ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : ಮಂಗಳೂರಿನಲ್ಲಿ ಚಿತ್ರಾಪುರ ಶ್ರೀಗಳ ಚಾತುರ್ಮಾಸ್ಯ
ಸೆ.೧೮ರಂದು ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಆರಂಭ