ಭಟ್ಕಳ: ಹೊಸದಾಗಿ ಸ್ಥಳಾಂತರಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಮುರಿನಕಟ್ಟೆ (Murinakatte)ಯನ್ನು ನಾಶಪಡಿಸಿದವರ ಮೇಲೆ ಕಾನೂನಿನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ (DC Lakshmi Priya) ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನಗರ ಮೂಲಕ ಹಾಯ್ದು ಹೋಗುವ ರಾ ಹೆ ೬೬ರ ಪಕ್ಕದಲ್ಲಿ ಶಿರಸಿ (Sirsi) ಮಾರಿಕಾಂಬೆ ದೇವಸ್ಥಾನಕ್ಕೆ (marikamba Temple) ಹೋಗುವ ಹೊರೆಯನ್ನಿಡುವ ಸ್ಥಳವಿದ್ದು, ಅದನ್ನು ಸ್ಥಳೀಯವಾಗಿ ಮುರಿನಕಟ್ಟೆ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಸದ್ರಿ ಸ್ಥಳ ರಾ ಹೆ (National Highway) ೬೬ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ವಾಹನ ಸಂಚಾರಕ್ಕೆ /ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ಹಾಗೆ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ರವರಿಂದ ROW ವ್ಯಾಪ್ತಿಯಲ್ಲಿ ಲಭ್ಯ ಸರ್ಕಾರಿ ಜಮೀನಿನಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮೇ ೨೪ರಂದು ಕೆಂಪು ಕಲ್ಲಿನಿಂದ ಕಟ್ಟಿದ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಏಕಾಏಕಿಯಾಗಿ ನಾಶಪಡಿಸಿರುವುದು ಕಂಡುಬಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
police custody/ ಮಧ್ಯರಾತ್ರಿ ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಮುರಿನಕಟ್ಟೆಯು ದೇವಸ್ಥಾನದ ಕಟ್ಟಡವಾಗಿರದೆ ಅಮ್ಮನವರ ಹೊರೆಯನ್ನಿಡುವ ಕಟ್ಟೆ ಇದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗುತ್ತಿರುವ ಮೂಲ ಸ್ಥಳವೂ ಯಥಾಸ್ಥಿತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ನಗರ ವ್ಯಾಪ್ತಿಯ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಎನ್ಎಸ್ಎಸ್ ಕಾಯ್ದೆ ಕಾಲಂ ೧೬೩ರಂತೆ ಪ್ರತಿಬಂಧ ತಡೆಯಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ (DC Lakshmi Priya) ಪ್ರಕಟಣೆಯಲ್ಲಿ ತಿಳಿಸಿದ್ದಾರೆ .



