ಭಟ್ಕಳ: ತಾಲೂಕಿನ ಅಳಿವೆಕೋಡಿ ಪಳ್ಳಿಹೊಳೆಯಲ್ಲಿ ರವಿವಾರ ಸಂಭವಿಸಿದ ದುರಂತದಲ್ಲಿ (Bhatkal tragedy) ಸಮುದ್ರದ ಭರತಕ್ಕೆ ಸಿಲುಕಿ ನೀರು ಪಾಲಾಗಿದ್ದ ಮತ್ತೊಬ್ಬನ ಶವ ಪತ್ತೆಯಾಗಿದೆ. ಈ ಘಟನೆಯಲ್ಲಿ ಒಟ್ಟು ೧೧ ಮಂದಿ ಮೃತಪಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿರುಪಾಲಾಗಿದ್ದ (Bhatkal tragedy) ೧೧ ಮಂದಿಯಲ್ಲಿ ಹತ್ತು ಜನರ ಶವ ನಿನ್ನೆ ರವಿವಾರ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಪಡುಶಿರಾಲಿಯ ಮಾದೇವ ಬೈರಪ್ಪ ನಾಯ್ಕ (೫೨) ಶವವಾಗಿ ಪತ್ತೆಯಾಗಿದ್ದಾರೆ. ಉಳಿದಂತೆ ಸಾರದಹೊಳೆಯ ಪಡುಶಿರಾಲಿಯ ಲಕ್ಷ್ಮಿ ಮಾದೇವ ನಾಯ್ಕ (೩೮), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಮ ನಾಯ್ಕ (೩೯), ಉಮೇಶ ಮಂಜುನಾಥ ನಾಯ್ಕ (೨೫), ಮಾಸ್ತಮ್ಮ ಮಂಜುನಾಥ ನಾಯ್ಕ (೪೩), ಲಕ್ಷ್ಮಿ ಅಣ್ಣಪ್ಪ ನಾಯ್ಕ (೪೪), ಮಾಲತಿ ಜಟ್ಟಪ್ಪ ನಾಯ್ಕ (೩೮), ಮಂಜಮ್ಮ ಗೊಯ್ದಾ ನಾಯ್ಕ (೫೦), ನಾಗರತ್ನ ಪರಮೇಶ್ವರ ನಾಯ್ಕ (೪೦) ಹಾಗೂ ಸಾರದಹೊಳೆಯ ಹೀರೆಹಿತ್ಲುವಿನ ಜ್ಯೋತಿ ನಾಗಪ್ಪ ನಾಯ್ಕ (೩೭) ಮೃತಪಟ್ಟವರು. ಅಸ್ವಸ್ಥರಾಗಿ ಉಡುಪಿ (Udupi) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗರತ್ನ ಈಶ್ವರ ನಾಯ್ಕ, ಮಾದೇವಿ ನಾಯ್ಕ ಹಾಗೂ ಲಲಿತಾ ಜಗದೀಶ ನಾಯ್ಕ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Bhatkal tragedy/ ಭಟ್ಕಳದ ಭೀಕರ ದುರಂತಕ್ಕೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ತೀವ್ರ ಸಂತಾಪ

ಘಟನಾ ಸ್ಥಳಕ್ಕೆ ಪೊಲೀಸರು, ಎನ್ ಡಿ ಆರ್ ಎಫ್ (NDRF), ಕರಾವಳಿ ಭದ್ರತಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ಕೈಗೊಂಡಿದ್ದರು. ಈಶ್ವರ ಮಲ್ಪೆ  (Eshwar Malpe) ತಂಡ ರವಿವಾರ ರಾತ್ರಿ ಸ್ಥಳಕ್ಕೆ ಆಗಮಿಸಿ, ಕತ್ತಲಲ್ಲೂ ಕಾರ್ಯಾಚರಣೆ ನಡೆಸಿತ್ತು. ಇಂದು ಬೆಳಿಗ್ಗೆ ಶವವನ್ನು ಮೇಲಕ್ಕೆತ್ತಿದೆ.

Bhatkal tragedy/ ಭಟ್ಕಳ ಸಂತ್ರಸ್ತರಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ