ಭಟ್ಕಳ (Bhatkal): ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಟ್ರೋಫಿ (Deepavali Trophy) ೨೦೨೪-೨೫ರ ತಾಲೂಕು ಮಟ್ಟದ ಲೆದರ್ ಬಾಲ್ ಕ್ರಿಕೆಟ್ (cricket) ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಬಾಗವಹಿಸಿದ್ದವು. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ವೈಕಿಂಗ್ಸ್ ಭಟ್ಕಳ ವಿರುದ್ಧ ವಿನಾಯಕ ಶೆಟ್ಟಿ ಮಾಲಕತ್ವದ ಅನ್ವಿ ಕ್ರಿಕೆಟರ್ಸ್  ಜಯಗಳಿಸುವುದರ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಬಳಿಕ ಎರಡನೇ ಸಮಿಫೈನಲ್ ಪಂದ್ಯದಲ್ಲಿ ಹೊನ್ನಾವರದ (Honnavar) ಯಕ್ಷೆ ಚೌಡೇಶ್ವರಿ ವಿರುದ್ಧ ಮಾವಿನಕಟ್ಟೆಯ ಎಸ್. ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್  ತಂಡ ಜಯಗಳಿಸುವುದರ ಮೂಲಕ ಫೈನಲ್ ಪ್ರವೇಶಿಸಿತು.

ಇದನ್ನೂ ಓದಿ :  ಜಾಮೀನು ಸಿಕ್ಕ ಖುಷಿಯಲ್ಲಿ ಕಾಂಗ್ರೆಸ್ ಶಾಸಕ ಸತೀಶ ಸೈಲ್

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅನ್ವಿ ಕ್ರಿಕೆಟರ್ಸ್ ತಂಡ ೨೦ ಓವರ್ ನಲ್ಲಿ ಮಹೇಶ ಭಟ್ಟ ಅರ್ಧ ಶತಕ ಹಾಗೂ ಕೇಶವ ನಾಯ್ಕ ೪೬ ರನ್ ಸಹಾಯದಿಂದ ೧೮೧ ರನ್ ಗಳಿಸಿತು. ೧೮೨ ಓಟಗಳ ಗುರಿ ಬೆನ್ನಟ್ಟಿದ ಮಾವಿನಕಟ್ಟೆಯ ಎಸ್. ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್ ೧೩೯ ರನ್ ಗಳಿಸಿ ಆಲ್ ಔಟ್ ಆಗುವ ಮೂಲಕ ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇದನ್ನೂ ಓದಿ :  ಸಿಡಿದೆದ್ದ ಕೂಲಿ ಕಾರ್ಮಿಕರು, ಭುಗಿಲೆದ್ದ ಆಕ್ರೋಶ

ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟ್ಸಮನ್ ಹೊನ್ನಾವರ ತಂಡದ ರಾಜೇಶ ದೇವಾಡಿಗ, ಬೆಸ್ಟ್ ಬೌಲರ್ ಅನ್ವಿ ತಂಡದ ಶೇಖರ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅನ್ವಿ ತಂಡದ ಆಟಗಾಟ ಮಹೇಶ ಭಟ್ಟ ಪಡೆದುಕೊಂಡರು. ಪಂದ್ಯಾವಳಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದ ಅನ್ವಿ ಕ್ರಿಕೆಟರ್ಸ್ ತಂಡಕ್ಕೆ ೫೫,೫೫೫ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ರನ್ನರ್ ಅಪ್ ತಂಡವಾದ ಎಸ್. ಎಸ್ ಎಸ್. ಸ್ಪೋರ್ಟ್ಸ್ ಕ್ಲಬ್ ಗೆ ೩೩,೩೩೩ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.

ಇದನ್ನೂ ಓದಿ :  ೧೬ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ