ಹೊನ್ನಾವರ (Honnavar): ಭಕ್ತರಿಗೂ, ಭಗವಂತನಿಗೂ ಅವಿನಾಭಾವ ಸಂಬಂಧವಿದೆ. ಭಕ್ತರಿಲ್ಲದೆ ಭಗವಂತನೇ ಇಲ್ಲ. ಭಗವಂತನ ಅಸ್ತಿತ್ವ ಇರುವುದೇ ಭಕ್ತರಲ್ಲಿ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ (Bangaramakki) ಶ್ರೀ ವೀರಾಂಜನೇಯ (Veeranjaneya) ದೇವಸ್ಥಾನದ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ (Maruti Guruji) ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಹೊನ್ನಾವರ ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ‍್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಗೇರಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ, ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇದನ್ನೂ ಓದಿ : Bangaramakki/ ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ದೇವಸ್ಥಾನಗಳು ಒಂದು ಧರ್ಮ, ಒಂದು ಕೋಮು ಅಥವಾ ಮತಕ್ಕೆ ಸೀಮಿತ ಅಲ್ಲ. ಅವು ದೇವರ ಆವಾಸ ಸ್ಥಾನವಾಗಿವೆ. ಸಮಾಜವನ್ನು ಉದ್ಧರಿಸುವ ಜವಾಬ್ದಾರಿಯುತ ಸ್ಥಾನ ದೇವಸ್ಥಾನದ ಮೇಲಿದೆ. ಸಮಾಜ ಹಾಗೂ ಸಮಾಜದಲ್ಲಿರುವ ವ್ಯಕ್ತಿಗಳು ದಾರಿ ತಪ್ಪಿದಾಗ ತಿದ್ದಿ ಹೇಳುವ ವ್ಯವಸ್ಥೆ ದೇವಸ್ಥಾನಗಳಲ್ಲಿರಬೇಕು. ದೇವಸ್ಥಾನಗಳು ಕೇವಲ ಪೂಜೆ ಪುನಸ್ಕಾರಕ್ಕೆ ಅಷ್ಟೆ ಸೀಮಿತವಲ್ಲ. ಎಲ್ಲ ಆಗುಹೋಗುಗಳಿಗೆ ಸ್ಪಂದಿಸಿ ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯುವ ಕೆಲಸ ದೇವಸ್ಥಾನಗಳದ್ದು ಎಂದು ಶ್ರೀ ಮಾರುತಿ ಗುರೂಜಿ ಹೇಳಿದರು.
ಇದನ್ನೂ ಓದಿ : Poetry collection/ ಶಿರಾಲಿಯಲ್ಲೊಂದು ಚಿಕ್ಕ ಚೊಕ್ಕ ಕಾರ್ಯಕ್ರಮ
ಗದಗಿನ (Gadag) ಪ್ರಾಚಾರ್ಯ ವಸಂತ ಅಗಸಿಮನಿ ಮಾತನಾಡಿ, ಧಾರ‍್ಮಿಕತೆ, ಭಾಷೆಗೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯ (Bangaramakki) ಕೊಡುಗೆ ಅಪಾರವಾಗಿದೆ. ಕಲೆ, ಸಂಸ್ಕೃತಿಗೆ ವಿಶೇಷ ಆದ್ಯತೆಯನ್ನು ಕ್ಷೇತ್ರ ನೀಡಿದೆ. ಮಾರುತಿ ಗುರೂಜಿ ಅವರ ದೂರದೃಷ್ಟಿ, ಸಾಮಾಜಿಕ ಕಾಳಜಿ ನಿಜಕ್ಕೂ ಮಾದರಿಯಾಗಿದೆ. ಕ್ಷೇತ್ರದ ಪ್ರಾಣದೇವರು ಬಂಗಾರಮಕ್ಕಿ ವೀರಾಂಜನೇಯನ ಕೀರ್ತಿ ದೇಶದಾದ್ಯಂತ ಹರಡಿದೆ. ಈ ಮೂಲಕ ಹೆಸರಿಗೆ ತಕ್ಕಂತೆ ಭಕ್ತರ ಪಾಲಿನ ಬಂಗಾರವೇ ಬಂಗಾರಮಕ್ಕಿಯಾಗಿದೆ ಎಂದರು.
ಇದನ್ನೂ ಓದಿ : Vardhanti/ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಉತ್ಸವ
ಪತ್ರಕರ್ತ ಮಂಜುನಾಥ ಹಳ್ಳೇರ, ಗ್ರಾಪಂ ಅಧ್ಯಕ್ಷೆ ಪುಷ್ಪಾ ನಾಯಕ ಮಾತನಾಡಿದರು. ನಗರಬಸ್ತಿ ಗ್ರಾಪಂ ಸದಸ್ಯೆ ಗಣತಿ ಹಳ್ಳೇರ ವೇದಿಕೆ ಮೇಲಿದ್ದರು. ಮಂಜುನಾಥ ಸ್ವಾಗತಿಸಿದರು. ಗೋಪಾಲಕೃಷ್ಣ ಕುಮಟಾ ನಿರೂಪಿಸಿದರು. ವೈಶಾಲಿ ಗೌಡ ವಂದಿಸಿದರು.
ಇದನ್ನೂ ಓದಿ : Bike crashes/ ಹೂವಿನ ಅಂಗಡಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು