ಭಟ್ಕಳ (Bhatkal): ಕನ್ನಡ ರಾಜ್ಯೋತ್ಸವದ (Kannada rajyotsava) ಸಂದರ್ಭದಲ್ಲಿ ಭುವನೇಶ್ವರಿಗೆ (Bhuvaneshwari) ಪುಷ್ಪಾರ್ಚನೆ ಮಾಡದ ಜನಪ್ರತಿನಿಧಿಯ ವರ್ತನೆಗೆ ಕನ್ನಡ ಸಾಹಿತ್ಯ ಪರಿಷತ್ ಖಂಡನೆ (Condemn) ವ್ಯಕ್ತಪಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಕುರಿತು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಭಟ್ಕಳದಲ್ಲಿ ನಡೆದ ಕನ್ನಡ‌ರಾಜ್ಯೋತ್ಸವದ ಸಂದರ್ಭದಲ್ಲಿ ಜನಪ್ರತಿನಿದಿಯಾಗಿ‌ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲು ಹಿಂದೇಟು ಹಾಕಿದ ಜಾಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷರ ವರ್ತನೆಗೆ ಎಲ್ಲೆಡೆಯಿಂದ ತೀವ್ರ ವಿರೋಧ (Condemn) ವ್ಯಕ್ತವಾಗುತ್ತಿದೆ. ಸಾರ್ವಜನಿಕ ಸಮಾರಂಭವಾದ ರಾಷ್ಟ್ರೀಯ ದಿನಾಚರಣೆಗಳ ವೇದಿಕೆಯಲ್ಲಿ‌ ಅವರ ಈ ವರ್ತನೆ ಸ್ವೀಕಾರಾರ್ಹವಲ್ಲ‌ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :  ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ !

ನಾವೆಲ್ಲರೂ ಭಾರತವನ್ನು, ಕರ್ನಾಟಕವನ್ನು (Karnataka) ಬರಿಯ ನೆಲವಾಗಿ ಕಾಣುವುದಿಲ್ಲ. ಹೊತ್ತ ತಾಯಿಯಂತೆ ಕಾಣುತ್ತೇವೆ. ಭುವನೇಶ್ವರಿಯ ಅರ್ಚನೆ ನಮ್ಮ‌ ತಾಯಿಯನ್ನು ಪೂಜಿಸಿದಂತೆ. ಕನ್ನಡಮಾತೆಗೆ ಪುಷ್ಪಾರ್ಚನೆ ಮಾಡಿದಲ್ಲಿ ಅದು ಅವರ ಧರ್ಮ ಬಾಹೀರ ಆಚರಣೆಯಾಗುತ್ತದೆ ಎಂದು ಅವರು ಯಾವ ಸಂದರ್ಭದಲ್ಲಿಯೂ ಭಾವಿಸಬಾರದು. ನಾಡದೇವಿಯನ್ನು ಪೂಜಿಸುವುದು ಸಮಾಜ ಒಪ್ಪಿತವಾದ ಸಂಸ್ಕಾರ ಎಂದು ಗಂಗಾಧರ ನಾಯ್ಕ ಹೇಳಿದ್ದಾರೆ.

ಇದನ್ನೂ ಓದಿ :  ಕೇವಲ ಧರ್ಮ ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು?

ದೇವರು ಸಹ ಮೆಚ್ಚಿಕೊಳ್ಳುವ ಎತ್ತರದ ಮೌಲ್ಯ ಮತ್ತು ಚಿಂತನೆ. ಹೆತ್ತ ತಾಯಿಯನ್ನು, ನಮ್ಮನ್ನು ಹೊತ್ತ ತಾಯಿಯಾದ ಈ ನೆಲವನ್ನು ಪೂಜಿಸಿದರೆ ನಾವೆಲ್ಲರೂ ನಮ್ಮ ನಮ್ಮ ಧರ್ಮಗಳನ್ನೂ ಪಾಲಿಸುವುದರ ಜೊತೆಗೆ ನಾಡಧರ್ಮವನ್ನೂ, ರಾಷ್ಡ್ರಧರ್ಮವನ್ನೂ ಪಾಲಿಸಿದಂತಾಗುತ್ತದೆ. ಈ ದಿಸೆಯಲ್ಲಿ ಪ್ರಾಂಜಲ ಮನಸಿನಿಂದ ಯೋಚಿಸಬೇಕಿದೆ. ತಮ್ಮ ಆಲೋಚನೆ ಮತ್ತು ತಿಳುವಳಿಕೆಯ ಪರಿಧಿಯನ್ನೂ ವಿಸ್ತರಿಸಿಕೊಳ್ಳಬೇಕಿದೆ ಎಂದು ಗಂಗಾಧರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಜಾಲಿ ಪಪಂ‌ ಅಧ್ಯಕ್ಷೆಯಿಂದ ಕನ್ನಡ ಭುವನೇಶ್ವರಿಗೆ ಅಗೌರವ