ಭಟ್ಕಳ (Bhatkal) : ಕೋಲ್ಕತ್ತಾದ (Kolkata) ಆ‌ರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಹೇಯ ಕೃತ್ಯದ ವಿರುದ್ಧ ಭಟ್ಕಳದಲ್ಲಿ ವೈದ್ಯರಿಂದ ಪ್ರತಿಭಟನೆ (Doctors protest) ನಡೆಯಿತು. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ತಾಲೂಕಿನ ಖಾಸಗಿ ವೈದ್ಯರ ತಂಡದಿಂದ ಪ್ರತಿಭಟನಾ ಮೆರವಣಿಗೆ ನಡೆದು, ಬಳಿಕ ತಾಲೂಕು ಆಡಳಿತಸೌಧಕ್ಕೆ ಬಂದು  ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯು ಮಾನವ ಜಗತ್ತು ತಲೆ ತಗ್ಗಿಸುವಂತಹ ಘಟನೆಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರ ಆತ್ಮಸ್ಥೆರ್ಯವನ್ನು ಕುಂದುವಂತೆ ಮಾಡಿದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಯಾವುದೇ ರಕ್ಷಣೆಯಿಲ್ಲದೆ ಕ್ರೂರಿಗಳ ದುಷ್ಟ ಅಟ್ಟಹಾಸಕ್ಕೆ ಒಳಗಾಗಿರುವುದು ಅತೀ ಭಯಾನಕ ವಿಷಯ. ಇಂತಹ ಘಟನೆಗಳಿಂದಾಗಿ ಸಾರ್ವಜನಿಕ ಸೇವೆ ನೀಡುವುದು ಇತ್ತೀಚಿನ ದಿನಗಳಲ್ಲಿ ಕಠಿಣ ಹಾದಿಯತ್ತ ಸಾಗುವಂತಾಗಿದೆ. ಇದು ಸಮಾಜದ ಒಳಿತಿನ ದೃಷ್ಟಿಯಿಂದ ಉತ್ತಮವಾದ ನಡೆಯಾಗಿರುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಬಾವಿಗೆ ಹಾರಿ ಯುವಕ ಸಾವಿಗೆ ಶರಣು

ಸಮಾಜದಲ್ಲಿನ ಇಂತಹ ದುಷ್ಟರಿಗೆ ಶಿಕ್ಷೆಯು ಅತ್ಯಂತ ಕಠಿಣವಾದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಬಹುದು. ಆ ನಿಟ್ಟಿನಲ್ಲಿ ಘನ ಸರ್ಕಾರ ಸೂಕ್ತ ಕಾನೂನುಗಳನ್ನು ರೂಪಿಸಬೇಕು. ಈ ಆ‌ರ್.ಜಿ.ಕರ್ ವೈದ್ಯಕೀಯ ಕಾಲೇಜಿಲ್ಲಿ ನಡೆದ ಈ ಘಟನೆಯನ್ನು ನಾವೆಲ್ಲರೂ ಸಾಮೂಹಿಕವಾಗಿ ಖಂಡಿಸುತ್ತಿದ್ದೇವೆ ಹಾಗೂ ಈ ಘಟನೆಗೆ ಕಾರಣವಾದ ಎಲ್ಲರನ್ನೂ ಶಿಕ್ಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ :  ಜೆಸಿಬಿ ನಿಲ್ಲಿಸಿದ್ದಕ್ಕೆ ಅವಾಚ್ಯ ಶಬ್ದಗಳ ಬೈಗುಳ

ಈ ಸಂದರ್ಭ ಮಾತನಾಡಿದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಕೋಲ್ಕತ್ತಾದಲ್ಲಿ ನಡೆದ ಈ ಘಟನೆ ನಮ್ಮೆಲ್ಲರಿಗೂ ನೋವಿನ ಸಂಘತಿಯಾಗಿದೆ. ವೈದ್ಯೋ ನಾರಾಯಣ ಹರಿ ಎನ್ನುವುದನ್ನು ಬಿಟ್ಟು ನಮ್ಮನ್ನು ಬದುಕಲು ಬಿಡಿ ಎನ್ನುವ ಪರಿಸ್ಥಿತಿ ಬಂದೊದಗಿದೆ. ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ಆಗಿನ ಹಿರಿಯರು ಹೇಳುತ್ತಿದ್ದರು ಆದರೆ, ಎಷ್ಟೇ ವಿದ್ಯಾಭ್ಯಾಸ ಮಾಡಿದರು ಕೂಡ ಯಾರಿಂದಲೂ ನಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎನ್ನುವ ಸತ್ಯ ಈ ಘಟನೆಯಿಂದ ನಮಗೆ ತಿಳಿದು ಬಂದಿದೆ. ನಾಗರಿಕ ಸಮಾಜದಲ್ಲಿ ಬದುಕುತ್ತಿರುವವರಿಗೆಲ್ಲ ಇಂತಹ ಘಟನೆ ತಲೆ ತಗ್ಗಿಸುವ ವಿಷವವಾಗಿದೆ. ಈ ಕೃತ್ಯ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು ಮತ್ತು ಈ ಕಠಿಣ ಕ್ರಮ ಕೈಗೊಳ್ಳುದರಿಂದ ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮಾಡಲು ಹಿಂದೆ ಮುಂದೆ ನೋಡಬೇಕು ಎಂದರು.

ಇದನ್ನೂ ಓದಿ : ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರಗೆ ಗಾಯ

ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತೆ ಡಾ. ನಯನ, ಇಂತಹ ಘಟನೆ ನಡೆಯಬಾರದಿತ್ತು. ಈ ಪ್ರತಿಭಟನೆ ವೈದರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ನಾಗರಿಕರು ವೈದ್ಯರೊಂದಿಗೆ ಕೈಜೋಡಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮಹಿಳೆಯರಿಗೆ ಸುರಕ್ಷಿತೆ ಎಲ್ಲ ಎನ್ನುವುದಕ್ಕೆ ಈ ಹಿಂದೆ ತುಂಬಾ ಘಟನೆಗಳು ನಡೆದಿವೆ. ಇದು ವೈದ್ಯರ ಮೇಲೆ ಆಗಿರುವ ಘಟನೆ ಅಲ್ಲ. ಇದು ಒಂದು ಮಹಿಳೆ ಮೇಲೆ ನಡೆದ ದುರ್ಘಟನೆ. ಇದರ ವಿರುದ್ಧದ ಹೋರಾಟಕ್ಕೆ ನಾವೆಲ್ಲ ಕೈ ಜೋಡಿಸೋಣ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮನೆಯಿಂದ ಹೋದ ಗಂಡ ನಾಪತ್ತೆ

ಇದಕ್ಕೂ ಪೂರ್ವದಲ್ಲಿ ತಾಲೂಕು ಆಸ್ಪತ್ರೆಯಿಂದ ಸುಧೀಂದ್ರ ಕಾಲೇಜು ರಸ್ತೆ, ಶಂಶುದ್ದಿನ್ ಸರ್ಕಲ್ ಮಾರ್ಗವಾಗಿ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಈ ಸುದ್ದಿ ಸಂಬಂಧಿಸಿದ ವಿಡಿಯೋ ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿವೀ ಕ್ಷಿಸಬಹುದು.