ಭಟ್ಕಳ (Bhatkal): ತಾಲೂಕು ಛಾಯಾಗ್ರಾಹಕರ (photographers) ಸಂಘದ ವತಿಯಿಂದ ವಿವಿಧ ಸಂಸ್ಥೆಗಳಿಗೆ ನಿತ್ಯ ಉಪಯೋಗಕ್ಕೆ ಬರುವ ವಸ್ತುಗಳನ್ನು ನೀಡುವ ಮೂಲಕ ವಿಶ್ವ ಛಾಯಾಗ್ರಹಣ ದಿನವನ್ನು (photography day) ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣ ಶ್ಯಾನಭಾಗ ನೇತೃತ್ವದಲ್ಲಿ ಕಾರ್ಯಕ್ರಮ (photography day) ನಡೆಯಿತು. ಸಂಘದ ಸದಸ್ಯರು ಮೊದಲು ಹೊನ್ನೆಗದ್ದೆ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳಿ ಕ್ರೀಡಾ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದರು. ಬಳಿಕ ಉತ್ತರಕೊಪ್ಪದಲ್ಲಿ ಇರುವ ವನವಾಸಿ ಕಲ್ಯಾಣ ಸಂಸ್ಥೆಗೆ ಕುರ್ಚಿ, ಊಟದ ಟೇಬಲ್, ಮಿಕ್ಸಿ, ಎಲ್‌ಇಡಿ ಬಲ್ಪ್ ಗಳನ್ನು ದೇಣಿಗೆಯಾಗಿ ನೀಡಿದರು.
ಇದನ್ನೂ ಓದಿ : ಪತ್ರಕರ್ತ ಮನಮೋಹನ್ ನಾಯ್ಕರಿಗೆ ಮಾತೃವಿಯೋಗ
ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣದ ಸಂಚಾಲಕ ರಾಮಚಂದ್ರಜಿ ಮಾತನಾಡಿ, ಛಾಯಾಗ್ರಾಹಕ ವೃತ್ತಿಯ ಜೊತೆಗೆ ಕಳೆದ ೧೩ ವರ್ಷಗಳಿಂದ ಪ್ರತಿವರ್ಷ ಛಾಯಾಗ್ರಹಣದ ದಿನ ವಿವಿಧ ಸಂಸ್ಥೆಗಳಿಗೆ ವಸ್ತುಗಳ ರೂಪದಲ್ಲಿ ದೇಣಿಗೆ ನೀಡುತ್ತಿರುವದು ಶ್ಲಾಘನೀಯ. ಈ ಮೂಲಕ ತಾವು ಬೆಳೆಯುವುದಲ್ಲದೆ ಸಂಘ ಸಂಸ್ಥೆಗಳಿಗೆ ಉತ್ತೇಜನ ನೀಡುತ್ತಿರುವದು ಆ ಸಂಸ್ಥೆಗಳಿಗೆ ನೀವು ಮಾಡುತ್ತಿರುವ ನಿಜವಾದ ಸಹಕಾರವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ
ಗೌರವಾಧ್ಯಕ್ಷ ಶ್ರೀನಿವಾಸ ನಾಯ್ಕ ಸರ್ಪನಕಟ್ಟೆ, ಉಪಾಧ್ಯಕ್ಷ ಕಿರಣ ಶೆಟ್ಟಿ ಮುರ್ಡೇಶ್ವರ, ಛಾಯಶ್ರೀ ಪ್ರಶಸ್ತಿ ಪುರಸ್ಕೃತ ಗಜಾನನ ಶೆಟ್ಟಿ ಮುರ್ಡೇಶ್ವರ, ಹಿರಿಯಾ ಛಾಯಗ್ರಾಹಕ ಕೆ.ಪಿ. ಮಣಿ, ರಾಘು ಜೋಗಿ ಭಟ್ಕಳ, ಮಾರುತಿ ನಾಯ್ಕ ಭಟ್ಕಳ, ಇತರರು ಇದ್ದರು.
ಇದನ್ನೂ ಓದಿ : ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪಡೆದ ವಾಸುದೇವ ಮೊಗೇರ