ಭಟ್ಕಳ (Bhatkal) : ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಚರಂಡಿ ಹಾಗೂ ಪಾದಚಾರಿ ತಿರುಗಾಡುವ ಒತ್ತುವರಿ ಜಾಗವನ್ನು (Enchroachment) ಖುಲ್ಲಾ ಪಡಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಶನಿವಾರದಂದು ಜಾಲಿ ಪಟ್ಟಣ ಪಂಚಾಯತಗೆ ಡಬ್ಲೂ.ಎಚ್. ಆರ್. ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದ ಜಿಲ್ಲಾ ಮತ್ತು ತಾಲೂ ಘಟಕದಿಂದ ಮನವಿ ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಜಾಲಿ ಪಟ್ಟಣ ಪಂಚಾಯತಿ ಭಾಗದ ಜಾಲಿ ಕ್ರಾಸ್ನಿಂದ ಹಿಡಿದು ನಗರದ ಬಹುತೇಕ ಭಾಗದಲ್ಲೂ ಪಾದಚಾರಿ ಮಾರ್ಗವು ಒತ್ತುವರಿಯಾಗಿದೆ (Enchroachment). ಚರಂಡಿಗಳನ್ನು ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಶಾಲಾ ಮಕ್ಕಳು ಸೈಕಲ್ ನಲ್ಲಿ ಶಾಲೆಗೆ ಸಂಚರಿಸಲಾಗುತ್ತಿಲ್ಲ. ಜಾಲಿ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ಕಿರಿದಾದ ಮಾರ್ಗ ಇದೆ. ಇಲ್ಲಿ ಒಂದು ಬಸ್ ಸಂಚರಿಸಲು ಮಾತ್ರ ಮಾರ್ಗವಿದೆ. ಏಕೆಂದರೆ ಜಾಲಿ ಕ್ರಾಸ್ನಿಂದ ದೇವಿನಗರದ ತನಕ ಎರಡು ಕಡೆಗಳಲ್ಲೂ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಇದರ ಜೊತೆಗೆ ಚರಂಡಿಗಳನ್ನು ಕೂಡ ಮುಚ್ಚಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ಗೂಡಂಗಡಿಗಳ ಸ್ಥಳಾಂತರಕ್ಕೆ ಆಗ್ರಹ
ರಸ್ತೆ ಮೇಲಿನ ತನಕ ‘ಇಂಟರಲಾಕ್’ ಅಳವಡಿಸಿ ತಮ್ಮ ಖಾಸಗಿ ಸ್ಥಳಗಳನ್ನಾಗಿ ಪರಿವರ್ತಿಸಲಾಗಿದೆ ಇದರಿಂದಾಗಿ ಮಕ್ಕಳಿಗೆ ಸೈಕಲ್ ಚಾಲನೆ ಮತ್ತು ನಡೆದುಕೊಂಡು ಹೋಗಲು ತೊಂದರೆ ಆಗುತ್ತಿದೆ. ಅಪಘಾತಗಳು ಸಂಭವಿಸುವ ಮುನ್ಸೂಚನೆಯೂ ಇದೆ. ಪಾದಚಾರಿಗಳ ಸ್ಥಿತಿ ಹೇಳುವುದೇ ಬೇಡ. ರಸ್ತೆ ಯಾವುದು? ಚರಂಡಿ ಯಾವುದು? ನಾವು ಸಾಗುವ ಮಾರ್ಗ ಯಾವುದು ಎಂದು ತಿಳಿಯದೇ ಜೀವ ಗಟ್ಟಿ ಹಿಡಿದು ದಿನನಿತ್ಯ ಹೆದರಿ ನಡೆಯುವ ಸ್ಥಿತಿ ಜಾಲಿ ಭಾಗದಲ್ಲಿ ನಿರ್ಮಾಣವಾಗಿದೆ. ವಯೋವೃದ್ಧರಂತೂ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ : ಚಿತ್ರಕಲಾ ಶಿಕ್ಷಕಗೆ “ಶಿಕ್ಷಣ ರತ್ನ” ರಾಜ್ಯ ಪ್ರಶಸ್ತಿ
ಈ ಬಗ್ಗೆ ಸಂಬಂಧಪಟ್ಟ ಜಾಲಿ ಪಂಚಾಯತ ಮುಖ್ಯಾಧಿಕಾರಿಗೆ ಹಲವು ಬಾರಿ ಮೌಖಿಕವಾಗಿ ಮತ್ತು ವಾಟ್ಸಪ್ ಮೂಲಕ ಮನವಿ ಕೊಟ್ಟರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ. ಬೇಜವಾಬ್ದಾರಿ ತೋರಿಸುತ್ತಿದ್ದುದು ನಮಗೆ ಸ್ವಷ್ಟವಾಗಿದೆ. ಸ್ಥಳ ಪರಿಶೀಲನೆ ನಡೆಸಬೇಕು. ಸರ್ಕಾರಕ್ಕೆ ಸಂಬಂಧಪಟ್ಟ ಚರಂಡಿ ಹಾಗೂ ಪಾದಚಾರಿ ತಿರುಗಾಡುವ ಜಾಗವನ್ನು ಖುಲ್ಲಾ ಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಹಿಂದಿ ಶಿಕ್ಷಕಗೆ ಡಾಕ್ಟರೇಟ್ ಪದವಿ ಪ್ರದಾನ
ಈ ಸಂದರ್ಭದಲ್ಲಿ ಡಬ್ಲೂ.ಎಚ್. ಆರ್. ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಅರ್ಚನಾ ಜಯಪ್ರಕಾಶ ನಾಯಕ, ಜಿಲ್ಲಾ ಘಟಕದ ಪ್ರಮುಖ ಥೆರೆಸಾ ಡಿಸೋಜಾ ಶಿರಸಿ, ತಾಲೂಕು ಘಟಕದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ನಾಯ್ಕ, ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, ಸದಸ್ಯರಾದ ಪಾಂಡು ನಾಯ್ಕ, ದಿನೇಶ ನಾಯ್ಕ ಇದ್ದರು.
ಇದನ್ನೂ ಓದಿ : ಕೃಷಿ ಭೂಮಿಗೆ ಆಧಾರ ಲಿಂಕ್ ಯಾಕೆ?