ದಾಂಡೇಲಿ (Dandeli) : ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಂಡೇಲಿ ಪೊಲೀಸರು ಹುಬ್ಬಳ್ಳಿ (Hubballi) ಮೂಲದ ಮೂವರು ನಕಲಿ ಪತ್ರಕರ್ತರನ್ನು (fake Journalists) ವಶಕ್ಕೆ ಪಡೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹುಬ್ಬಳ್ಳಿ ಮೂಲದ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ ಮತ್ತು ಸತೀಶ್ ಭಾಗವಾನ್ ಕೇದಾರಿ ಬಂಧಿತರು. ಇವರು ದಾಂಡೇಲಿ ನಗರದ ಲೆನಿನ್ ರಸ್ತೆಯಲ್ಲಿ ವೈದ್ಯ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ವ್ಯಕ್ತಿಯೊಬ್ಬರಿಗೆ ಬೆದರಿಕೆಯೊಡ್ಡಿ ಎರಡೂವರೆ ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ದೂರು (Complaint) ದಾಖಲಾಗುತ್ತಿದ್ದಂತೆ ಮೂವರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ : Ankola/ ಊಟ ಸೇರ್ತಿಲ್ಲ…. ನಿದ್ದೆನೂ ಬರ್ತಿಲ್ಲ…
ಅಶೋಕ ಶಂಭು ಪರಬ್ ಎಂಬುವವರು ಕಳೆದ ಹಲವು ವರ್ಷಗಳಿಂದ ಪ್ರಕೃತಿ ಚಿಕಿತ್ಸಕರಾಗಿ (Naturopathy) ಕ್ಲಿನಿಕ್ ನಡೆಸುತ್ತಿದ್ದಾರೆ. ಇವರ ಬಳಿ ಬಂದ ಆರೋಪಿತರು ತಾವು ಹುಬ್ಬಳ್ಳಿಯ ವಿಜಯ9 ನ್ಯೂಸ್ ನವರೆಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದರು. ನೀನು ನಕಲಿ ವೈದ್ಯನಿದ್ದೀ. ನಿನ್ನ ಬಗ್ಗೆ ನ್ಯೂಸ್ ಮಾಡಿ ನಮ್ಮ ಚಾನೆಲ್ ನಲ್ಲಿ ಹಾಕುತ್ತೇವೆ ಅಂತ ಹೇಳಿ ಹೆದರಿಸಿ ವಿಜಯ 9 ನ್ಯೂಸ್ ಎಂದು ಯೂಟ್ಯೂಬ್ ಚಾನೆಲ್ ನಲ್ಲಿ ವರದಿ ಪ್ರಸಾರ ಮಾಡಿದ್ದಾರೆ.
ಇದನ್ನೂ ಓದಿ : NIA Arrested/ ಬೇಹುಗಾರಿಕೆ ಪ್ರಕರಣದಲ್ಲಿ ೮ ಜನರನ್ನು ಬಂಧಿಸಿದ ಎನ್‌ಐಎ
ಆನಂತರ ಅಶೋಕ ಶಂಭು ಪರಬ್ ಅವರಿಗೆ ಕರೆ ಮಾಡಿ ಈಗಾಗಲೇ ಸಣ್ಣ ಚಾನೆಲ್ ನಲ್ಲಿ ಸುದ್ದಿ ಪ್ರಸಾರ ಮಾಡಿದ್ದೇವೆ. ನೀನು ನಮಗೆ ೨.೫ ಲಕ್ಷ ರೂ. ಕೊಡದಿದ್ದರೆ ದೊಡ್ಡ ದೊಡ್ಡ ಚಾನೆಲ್‌ಗಳಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು (Police Superintendent) ಹಾಗೂ ಗೃಹ ಸಚಿವರಿಗೆ (Home Minister) ವಿಡಿಯೋ ಕಳುಹಿಸಿ ನಿನ್ನ ಜೀವನವನ್ನು ಹಾಳು ಮಾಡುತ್ತೇವೆ ಅಂತ ಪದೇಪದೇ ಕರೆ ಮಾಡಿ ಹಣ ಕೊಡುವಂತೆ ಹೆದರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : nominees / ಭಟ್ಕಳ ಪುರಸಭೆಗೆ ಐವರು ನಾಮನಿರ್ದೇಶಕರು
ಅದೇ ರೀತಿ ಭಾನುವಾರ ಮಧ್ಯಾಹ್ನ ಮತ್ತೆ ಕ್ಲಿನಿಕ್‌ಗೆ ಬಂದು ಹಣ ಕೊಡುವಂತೆ ಹೆದರಿಸಿ ಬೆದರಿಸಿದ್ದಾರೆಂದು ಅಶೋಕ ಶಂಭು ಪರಬ್ ನಗರ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದರು. ದೂರು ಸ್ವೀಕರಿಸಿ ತನಿಖೆಗಿಳಿದ ನಗರ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ಕಿರಣ ಬಿ. ಪಾಟೀಲ ತಕ್ಷಣವೇ ಈ ಮೂವರು ನಕಲಿ ಪತ್ರಕರ್ತರನ್ನು ((fake Journalists) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : Bhatkal/ ಗೆಳೆಯರಿಂದಲೇ ಯುವಕನಿಗೆ ಚಾಕು ಇರಿತ