ಭಟ್ಕಳ (Bhatkal): ಕೃಷಿಕನೋರ್ವ ತೋಟದಲ್ಲಿ ಕೆಲಸ ಮುಗಿಸಿ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಮಂಗಳವಾರ ನಾಪತ್ತೆಯಾಗಿದ್ದರು (farmer missing). ಇವರ ಮೃತ ದೇಹ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ವ್ಯಕ್ತಿ ರಾಮಯ್ಯ ಕೃಷ್ಣ ಗೊಂಡ (52) ಎಂದು ತಿಳಿದು ಬಂದಿದೆ. ಇವರು ಮಂಗಳವಾರದಂದು ತಮ್ಮ ತೋಟದ ಕೆಲಸಕ್ಕೆ ಹೋಗಿ ಸಂಜೆ ವೇಳೆ ಕೆಲಸ ಮುಗಿಸಿ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾಗಿದ್ದರು (farmer missing). ಬಳಿಕ ಮೃತ ದೇಹದ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಶೋದ ಕಾರ್ಯ ನಡೆಸಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಬೆಳಿಗ್ಗೆ ಅದೇ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ : ಅಕ್ಟೋಬರ್‌ ೩ರಂದು ವಿವಿಧೆಡೆ ಅಡಿಕೆ ಧಾರಣೆ

ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತರ ಸಹೋದರ ಮಾಸ್ತಿ ಗೊಂಡ ದೂರು ನೀಡಿದ್ದಾರೆ. ಗ್ರಾಮೀಣ ಠಾಣೆಯ ಎ. ಎಸ್.ಐ. ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು (case registered) ತನಿಖೆ ಕೈಗೊಂಡಿದ್ದಾರೆ.

ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ಪ್ಲಾಸ್ಟಿಕ್‌ ಮುಕ್ತ ಬೀಚ್‌ ಅಭಿಯಾನ ಕೈಗೊಂಡ ಎನ್‌ಎಸ್‌ಎಸ್‌