ಭಟ್ಕಳ (Bhatkal) : ಧರ್ಮಸ್ಥಳದ (Dharmasthala) ನಿತ್ಯಾನಂದ ನಗರದಲ್ಲಿರುವ ಶ್ರೀರಾಮ ಕ್ಷೇತ್ರದಲ್ಲಿ (Shri Ram Kshethra) ಮಾ.೩೦ರಿಂದ ಏ.೬ರ ತನಕ ೬೫ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ (Festival) ವಿಜೃಂಭಣೆಯಿಂದ ನಡೆಯಲಿದೆ. ಭಟ್ಕಳದ ಆಸರಕೇರಿಯ ನಿಚ್ಛಲಮಕ್ಕಿ ವೆಂಕಟ್ರಮಣ ಸಭಾಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಭಟ್ಕಳ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ ಮಾಹಿತಿ ನೀಡಿದರು
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಾಮಧಾರಿ (Namadhari) ಕುಲಗುರು ಶ್ರೀರಾಮಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ (Brahmanand Swamiji) ನೇತೃತ್ವದಲ್ಲಿ ಮಾ.೩೦ರಂದು ವಾರ್ಷೀಕ ಪ್ರತಿಷ್ಠಾ ಮಹೋತ್ಸವ, ಮಾ.೩೧ರಂದು ಶ್ರೀಗುರುದೇವ ಉತ್ಸವ ಮೂರ್ತಿಗಳಿಗೆ ಬಲಿ ಉತ್ಸವ ಪೂಜೆ ನಡೆಯಲಿದೆ. ಏ.೧ರಂದು ಶ್ರೀರಾಮ ದೇವರ ರಜತ ಪಾಲಕಿ ಉತ್ಸವ, ೨ರಂದು ಶ್ರೀ ಅನ್ನಪೂರ್ಣೆಶ್ವರಿ ದೇವಿಯ ಪುಷ್ಪ ರಥೋತ್ಸವ, ೩ರಂದು ಶ್ರೀ ದುರ್ಗಾಪರಮೇಶ್ವರಿ ದೇವಿಯ ಚಂದ್ರಮಂಡಲ ರಥೋತ್ಸವ ಜರುಗಲಿದೆ. ಏ.೪ರಂದು ಶ್ರೀಗೋಪಾಲಕೃಷ್ಣ ದೇವರ ಬೆಳ್ಳಿ ರಥೋತ್ಸವ, ೫ರಂದು ಶ್ರೀ ಹನುಮಾನ ದೇವರ ರಥೋತ್ಸವ ಹಾಗೂ ೬ರಂದು ಮಹಾ ಬ್ರಹ್ಮರಥೋತ್ಸವ, ನೇಮೋತ್ಸವ ನಡೆಯಲಿದೆ. ಪ್ರತಿ ದಿವಸ ಅನ್ನಸಂತರ್ಪಣೆ, ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಧರ ನಾಯ್ಕ ಮಾಹಿತಿ ನೀಡಿದರು.
ಇದನ್ನೂ ಓದಿ : tv9 ನೆಟ್ವರ್ಕ್ ಶೃಂಗಸಭೆಯಲ್ಲಿ ನರೇಂದ್ರ ಮೋದಿ
ಭಟ್ಕಳ ನಾಮಧಾರಿ ಸಮಾಜದ ಗೌರವ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಹಾಗೂ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಶ್ರೀರಾಮ ಕ್ಷೇತ್ರದಲ್ಲಿ ನಡೆಯುವ ಎಂಟು ದಿನಗಳ ಕಾರ್ಯಕ್ರಮದಲ್ಲಿ (Festival) ಜಿಲ್ಲೆಯ ನಾಮಧಾರಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡು ಶ್ರೀರಾಮನ ಸೇವೆ ಮಾಡಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ಕೋರಿಕೊಂಡರು. ಭಟ್ಕಳ ಸಾಮಧಾರಿ ಸಮಾಜದ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಕಾರ್ಯದರ್ಶಿ ಡಿ.ಎಲ್.ನಾಯ್ಕ, ಸದಸ್ಯರಾದ ಶಿವರಾಮ ನಾಯ್ಕ, ಮಹಾಬಲೇಶ್ವರ ನಾಯ್ಕ, ವಿಠ್ಠಲ ನಾಯ್ಕ, ಪ್ರಕಾಶ ನಾಯ್ಕ, ಶ್ರೀರಾಮ ಸೇವಾ ಸಮಿತಿ ಸದಸ್ಯರಾದ ಈರಪ್ಪ ಗರ್ಡೀಕರ, ಪರಮೇಶ್ವರ ನಾಯ್ಕ, ಗಣಪತಿ ನಾಯ್ಕ. ತಿಮ್ಮಪ್ಪ ನಾಯ್ಕ, ಇತರರು ಇದ್ದರು.
ಇದನ್ನೂ ಓದಿ : Police arrest / ಜೂಜಾಡುತ್ತಿದ್ದ ೧೭ ಜನರು ಪೊಲೀಸ್ ವಶಕ್ಕೆ