ಭಟ್ಕಳ (Bhatkal) : ರೌಡಿಶೀಟರ್ ಪರೇಡ್ ವೇಳೆಯಲ್ಲಿ ಹಿಂದೂ ಕಾರ್ಯಕರ್ತನ (hindu activist) ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹಲ್ಲೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ (social media) ಸುಳ್ಳು ಸುದ್ದಿ ಹರಡಿ ರಾತೋರಾತ್ರಿ ಹೆದ್ದಾರಿ ತಡೆದಿದ್ದಲ್ಲದೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ಮೇಲೆ ಎರಡು ಪ್ರತ್ಯೇಕ ದೂರು (FIR) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ನವೀನ ಎಸ್.ನಾಯ್ಕ ಮತ್ತು ತಿಮ್ಮಪ್ಪ ಬೇಡುಮನೆ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿದ್ದಾರೆ. ಒಟ್ಟು ೨೧ ಜನರ ಹೆಸರನ್ನು ಎಫ್‌ಐಆರ್ ನಲ್ಲಿ (FIR) ದಾಖಲಿಸಲಾಗಿದೆ. ಇನ್ನಷ್ಟು ಜನರ ಹೆಸರು ಆರೋಪ ಪಟ್ಟಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : overnight protest/ ಭಟ್ಕಳದಲ್ಲಿ ರಾತೋರಾತ್ರಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಏ ೮.ರಂದು ಶಿರಸಿಯಲ್ಲಿ ರೌಡಿ ಶೀಟರ್ ಅವರನ್ನ ಪರೇಡ್ ನಡೆಸಿದ ವೇಳೆ ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಸೇರಿ ಹತ್ತು ಮಂದಿಗೆ ಕಾನೂನು ಸುವ್ಯವಸ್ಥೆ ಕುರಿತಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ವಿಚಾರಣೆ ನಡೆಸಿದ್ದರು. ಈ ವಿಚಾರಣೆ ಮುಗಿಸಿ ಶಿರಸಿಯಿಂದ ಭಟ್ಕಳಕ್ಕೆ ಬಂದ ಶ್ರೀನಿವಾಸ ನಾಯ್ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ವಿಚಾರಣೆಗೆ ಕರೆಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ : Uttara Kannada SP / ʼಠಾಣೆ ಮುತ್ತಿಗೆ, ಹೆದ್ದಾರಿ ಬಂದ್ ಮಾಡಿದವರ ಮೇಲೆ ಕ್ರಮʼ
ಈ ಸುದ್ದಿ ಎಲ್ಲೆಡೆ ಹರಡಿ ರಾತೋರಾತ್ರಿ ಹಿಂದೂ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದ್ದಲ್ಲದೆ, ಮರುದಿನ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಎಂ.ನಾರಾಯಣ ಮಾಧ್ಯಮಕ್ಕೆ ತಿಳಿಸಿದ್ದರು. ಅದರಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ.
ಇದನ್ನೂ ಓದಿ : Bhatkal Update/ ಭಟ್ಕಳಕ್ಕೆ ಬಂದ ಎಸ್ಪಿ ಎಂ.ನಾರಾಯಣ
ಏ.೮ರಂದು ರಾತ್ರಿ ೧೧ ರಿಂದ ೧೧.೪೫ರವರೆಗೆ ಹೆದ್ದಾರಿ ತಡೆ ನಡೆಸಿದ ಸಂಚಾರಕ್ಕೆ ಅಡೆ ತಡೆ ನಡೆಸಿದ ಆರೋಪದ ಮೇಲೆ ಪಿಎಸೈ ನವೀನ ಎಸ್.ನಾಯ್ಕ ದಾಖಲಿಸಿದ ಪ್ರಕರಣದಲ್ಲಿ ೧೧ ಜನರನ್ನು ಹೆಸರಿಸಲಾಗಿದೆ. ಜಾಲಿ ತಲಗೇರಿ ನಿವಾಸಿ ನಾಗರಾಜ ವೆಂಕಟಪ್ಪ ನಾಯ್ಕ, ಹನುಮಾನ ನಗರದ ಅಭಿಷೇಕ ತಿಮ್ಮಪ್ಪ ನಾಯ್ಕ, ಹೊನ್ನೆಗದ್ದೆಯ ನಾಗೇಶ ನಾರಾಯಣ ನಾಯ್ಕ, ಹೆರೂರ ಎಳೆಬಾರ ನಿವಾಸಿ ನಾಗೇಂದ್ರ ಶಂಕರ ನಾಯ್ಕ, ಮುಂಡಳ್ಳಿಯ ಲೋಕೇಶ ರವಿ ದೇವಾಡಿಗ, ಸೋನಾರಕೇರಿಯ ರವಿಕುಮಾರ ಶಶಿಕಾಂತ ಶೇಟ, ತಲಾಂದ ಅಪ್ಪುಮನೆ ವಾಸಿ ಈಶ್ವರ ದುರ್ಗಪ್ಪ ನಾಯ್ಕ, ಕರಿಕಲ್ ಗ್ರಾಮದ ಜಗದೀಶ ನಾರಾಯಣ ನಾಯ್ಕ, ಮುಟ್ಟಳ್ಳಿಯ ಕೃಷ್ಣ ಮಾದೇವ ನಾಯ್ಕ, ಕರಿಕಲ್ ಜಕಣಿಮನೆ ನಿವಾಸಿ ನಾಗರಾಜ ಮಾದೇವ ಮೊಗೇರ, ಬೆಣಂದೂರಿನ ಜಗದೀಶ ಸೋಮಯ್ಯಾ ನಾಯ್ಕ ಹಾಗೂ ಉಳಿದ ೨೫-೩೦ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Yasin Bhatkal/ ಯಾಸಿನ್ ಭಟ್ಕಳ ಸಹಿತ ಐವರಿಗೆ ಮರಣದಂಡನೆ
ಮರುದಿನ ಏ.೯ರಂದು ಬೆಳಿಗ್ಗೆ ೧೧ ಗಂಟೆಗೆ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಿಎಸ್‌ಐ ತಿಮ್ಮಪ್ಪ ಬೇಡುಮನೆ ದಾಖಲಿಸಿದ ದೂರಿನಲ್ಲಿ ೧೦ ಜನರನ್ನು ಹೆಸರಿಸಲಾಗಿದೆ. ಜಾಲಿ ತಲಗೇರಿಯ ನಾಗರಾಜ ವೆಂಕಟಪ್ಪ ನಾಯ್ಕ, ಹನುಮಾನ ನಗರದ ಅಭಿಷೇಕ ತಿಮ್ಮಪ್ಪ ನಾಯ್ಕ, ಹೊನ್ನೆಗದ್ದೆಯ ನಾಗೇಶ ನಾರಾಯಣ ನಾಯ್ಕ, ಹೆರೂರ ಹೆಳಬಾರ ನಿವಾಸಿ ನಾಗೇಂದ್ರ ಶಂಕರ ನಾಯ್ಕ, ಮುಂಡಳ್ಳಿ ಲೋಕೇಶ ರವಿ ದೇವಾಡಿಗ, ಸೋನಾರಕೇರಿಯ ರವಿಕುಮಾರ ಶಶಿಕಾಂತ ಶೇಟ, ತಲಾಂದ ಅಪ್ಪುಮನೆಯ ಈಶ್ವರ ದುರ್ಗಪ್ಪ ನಾಯ್ಕ, ಕಂಡೆಕೋಡ್ಲು ದೇವೇಂದ್ರ ಮಾಸ್ತಪ್ಪ ನಾಯ್ಕ, ಕೋಕ್ತಿ ನಗರದ ನಾರಾಯಣ ಗೊಂಡ, ಮುರ್ಡೇಶ್ವರ (Murdeshwar) ಕಾಯ್ಕಿಣಿಯ ರಾಜೇಂದ್ರ ಸೂರ್ಯಕಾಂತ ನಾಯ್ಕ ಹಾಗೂ ಉಳಿದ ೩೦-೩೫ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : vascular treatment/ ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಸಾಧನೆ