ಕಾರವಾರ (Karwar): ಜಿಪಿಎಸ್ ಹೊಂದಿದ ರಣಹದ್ದು (vulture) ಕೋಡಿಭಾಗದ ನದಿಭಾಗದಲ್ಲಿ ಭಾನುವಾರ ಹಾರಾಟ ನಡೆಸಿದ್ದು ಜನರಲ್ಲಿ ಆತಂಕ ಮೂಡಿಸಿತ್ತು. ಮೂರು ದಿನದಿಂದ ಅದು ಕಾರವಾರ ಸುತ್ತಲು ಹಾರಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಹದ್ದು ಗೂಢಚಾರಿಕೆ ನಡೆಸಿದ ಅನುಮಾನದ ಹಿನ್ನಲೆ ಜನ ಆತಂಕಕ್ಕೆ ಒಳಗಾಗಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಗರದ ವಿವಿಧ ಭಾಗದಲ್ಲಿ ಭಾನುವಾರ ಈ ಹಕ್ಕಿ ಹಾರಾಟ ನಡೆಸಿತು. ಹಕ್ಕಿಯ ಕಾಲಿಗೆ ಇಲೆಕ್ಟ್ರಾನಿಕ್ ಚಿಪ್ ಅಳವಡಿಸಿದ್ದರಿಂದ ಜನ ಅನುಮಾನ ವ್ಯಕ್ತಪಡಿಸಿದರು. ಪಕ್ಷಿಯ ಎರಡೂ ಕಾಲುಗಳಿಗೆ ಬಣ್ಣದ ಸ್ಟಿಕರ್ ಅಳವಡಿಸಲಾಗಿದೆ. ಆಂಗ್ಲ ಭಾಷೆಯ ಅಕ್ಷರಗಳನ್ನು ಬರೆಯಲಾಗಿತ್ತು. ಕೆಲ ಸಂಖ್ಯೆಗಳು ಸಹ ಗೋಚರಿಸುತ್ತಿದ್ದವು. ಪಕ್ಷಿಯ ಬೆನ್ನ ಮೇಲೆ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಇರುವುದರಿಂದ ಜನ ಗೊಂದಲಕ್ಕೆ ಒಳಗಾಗಿದ್ದರು.
ಇದನ್ನೂ ಓದಿ : ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ
ಕಾರವಾರ ಭಾಗದಲ್ಲಿ ಕೈಗಾ (Kaiga) ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ (kadamba naval base), ಅಣೆಕಟ್ಟುಗಳ (Dam) ಸಹಿತ ಹಲವು ಯೋಜನೆಗಳು ಇರುವುದರಿಂದ ರಹಸ್ಯ ಕಾರ್ಯಾಚರಣೆಯ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದರು. ಜನರ ದೂರಿನ ಅನ್ವಯ ಅಧಿಕಾರಿಗಳು ಹಕ್ಕಿ ಪರಿಶೀಲನೆ ನಡೆಸಿದರು. ಜಿಪಿಎಸ್ ಟ್ರ್ಯಾಕರ್ ಮೇಲೆ ಮಹಾರಾಷ್ಟ್ರ ಅರಣ್ಯ ಇಲಾಖೆಯ ಹೆಸರು ಕಾಣಿಸಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ಸಂಶೋಧನೆಗೆ ಒಳಪಟ್ಟಿದ್ದ ಈ ರಣಹದ್ದು (vulture) ಚಳಿಗಾಲದಲ್ಲಿ ವಲಸೆ ಬಂದಿದೆ ಎಂಬ ಮಾಹಿತಿಯನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ತರಕಾರಿಗೆ ಉಗುಳಿದ ವ್ಯಾಪಾರಿ ಬಂಧನ
ಮಹಾರಾಷ್ಟ್ರದ (Maharashtra) ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ ಸಂಶೋಧನೆ ನಡೆಯುತ್ತಿದೆ. ೫ ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಇಲ್ಲಿಗೆ ಬಂದಿದೆ. ಯಾವುದೇ ಗೂಢಚಾರಿಕೆ ಅಲ್ಲ’ ಎಂದು ಡಿಎಫ್ಒ ರವಿಶಂಕರ್ ಸ್ಪಷ್ಠಪಡಿಸಿದ್ದಾರೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.