ಭಟ್ಕಳ (Bhatkal) : ತಾಲೂಕಿನ ಆರ್.ಎನ್.ಎಸ್. (RNS) ಪದವಿ ಪೂರ್ವ ಕಾಲೇಜಿನಲ್ಲಿ (PU College) ನಡೆದ ಪಿಯು ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜು ಸತತ ೩ ನೇ ಬಾರಿ ಸಮಗ್ರ ವೀರಾಗ್ರಣಿ (Veeragrani), ಸಮಗ್ರ ಬಾಲಕರ ವೀರಾಗ್ರಣಿ ಮತ್ತು ಸಮಗ್ರ ಬಾಲಕಿಯರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಾಲಕರ ವಿಭಾಗದಲ್ಲಿ ಧನರಾಜ ಎನ್. ನಾಯ್ಕ ೧೦೦ ಮೀ. ಓಟದಲ್ಲಿ ಪ್ರಥಮ, ೧೧೦ ಮೀ. ಹರ್ಡಲ್ಸ್ ನಲ್ಲಿ ದ್ವಿತೀಯ, ೪*೧೦೦ ಮೀ. ರೀಲೆ ಪ್ರಥಮ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ. ಹಿತೇಶ ಎಮ್. ನಾಯ್ಕ ೨೦೦ ಮೀ. ಓಟದಲ್ಲಿ ದ್ವಿತೀಯ, ೪*೧೦೦ ಮೀ. ರೀಲೆ ಪ್ರಥಮ, ೪*೪೦೦ ಮೀ. ರೀಲೆ ಪ್ರಥಮ, ಟ್ರಿಪಲ್ ಜಂಪ್ ತೃತೀಯ ಸ್ಥಾನ ಗಳಿಸಿದ್ದಾರೆ. ಗುರುರಾಜ ಗಣಪತಿ ನಾಯ್ಕ ೪೦೦ ಮೀ. ಓಟದಲ್ಲಿ ಪ್ರಥಮ, ೪*೧೦೦ ಮೀ ರೀಲೆ ಪ್ರಥಮ, ೪*೪೦೦ ಮೀ ರೀಲೆ ಪ್ರಥಮ, ಟ್ರಿಪಲ್ ಜಂಪ್ ದ್ವಿತೀಯ, ಗುಡ್ಡಗಾಡು ಓಟ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೇಶವ ಎಮ್ ನಾಯ್ಕ ೪೦೦ ಮೀ. ಓಟದಲ್ಲಿ ದ್ವಿತೀಯ, ೮೦೦ ಮೀ. ಓಟದಲ್ಲಿ ದ್ವಿತೀಯ, ಗುಡ್ಡಗಾಡು ಓಟ ಪ್ರಥಮ, ೪*೪೦೦ ಮೀ ರೀಲೆ ಪ್ರಥಮ ಪಡೆದಿದ್ದಾರೆ.
ಇದನ್ನೂ ಓದಿ : ಶರಾವತಿ ಉದ್ದೇಶಿತ ಯೋಜನೆಗಳ ವಿರುದ್ಧ ಹೋರಾಟಕ್ಕೆ ಸಜ್ಜು
ಜಾಕ್ಷನ್ ಡಿಸೋಜಾ ೩೦೦೦ ಮೀ. ಓಟದಲ್ಲಿ ಪ್ರಥಮ, ಗುಡ್ಡಗಾಡು ಓಟ ಪ್ರಥಮ ಸ್ಥಾನ ಗಳಿಸಿದ್ದಾರೆ. ದೀಪಕ ಪಿ. ನಾಯ್ಕ ೪೦೦ ಮೀ. ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ, ೪*೪೦೦ ಮೀ. ರೀಲೆ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ ಗಳಿಸಿದ್ದಾರೆ. ರಕ್ಷಿತ ನಾಯ್ಕ ೪*೧೦೦ ಮೀ. ರೀಲೆ ಪ್ರಥಮ ಪಡೆದಿದ್ದಾರೆ. ವಿನೋದ ನಾಯ್ಕ ೪೦೦ ಮೀ. ಹರ್ಡಲ್ಸ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಲೋಹಿತ್ ಮರಾಠಿ ಗುಂಡು ಎಸೆತ ದ್ವಿತೀಯ, ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಕೇಶ ಉಟಗಿ ಈಟಿ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕರ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ ಹಾಗೂ ತ್ರೋಬಾಲ್ ಅಟದಲ್ಲಿ ಕಾಲೇಜು ಪ್ರಥಮ ಸ್ಥಾನ ಮತ್ತು ಶಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ.
ಇದನ್ನೂ ಓದಿ : ದಿನಕರ ದೇಸಾಯಿ ಸಂಸ್ಮರಣೆ ಯಶಸ್ವಿ
ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ ೮೦೦ ಮೀ., ೧೫೦೦ ಮೀ., ೩೦೦೦ ಮೀ., ೪*೧೦೦ಮೀ. ರೀಲೆ, ೪*೪೦೦ಮೀ ರೀಲೆ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ. ಪವಿತ್ರ ಮಡಿವಾಳ ೧೦೦ ಮೀ. ಓಟದಲ್ಲಿ ತೃತೀಯ, ೪*೧೦೦ ಮೀ. ರೀಲೆ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸಿಂಚನಾ ಈಶ್ವರ ನಾಯ್ಕ ೮೦೦ ಮೀ. ಓಟದಲ್ಲಿ ದ್ವಿತೀಯ, ೪೦೦ ಮೀ. ಹರ್ಡಲ್ಸ ದ್ವಿತೀಯ, ೪*೪೦೦ ಮೀ. ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಆಶೀತಾ ವೆಂಕಟೇಶ ನಾಯ್ಕ ೩೦೦೦ ಮೀ. ದ್ವಿತೀಯ, ೧೫೦೦ ಮೀ. ದ್ವಿತೀಯ, ೪*೪೦೦ ಮೀ. ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ಪ್ರಥಮ ಪಡೆದಿದ್ದಾರೆ.
ಇದನ್ನೂ ಓದಿ : ಅರಣ್ಯ ಇಲಾಖೆ ವಾಹನ ಚಾಲಕಗೆ ಶೌರ್ಯ ಪ್ರಶಸ್ತಿ
ಭವ್ಯ ದೇವಾಡಿಗ ೧೦೦ ಮೀ. ಹರ್ಡಲ್ಸ ದ್ವಿತೀಯ, ೪*೪೦೦ ಮೀ. ರೀಲೆ ಪ್ರಥಮ, ಉದ್ದ ಜಿಗಿತ ತೃತೀಯ, ಎತ್ತರ ಜಿಗಿತ ಪ್ರಥಮ ಸ್ಥಾನ ಪಡೆದಿದ್ದಾರೆ. ನಂದಿನಿ ನಾಯ್ಕ ೪೦೦ ಮೀ. ದ್ವಿತೀಯ, ೪೦೦ ಹರ್ಡಲ್ಸ ಪ್ರಥಮ, ಗುಡ್ಡಗಾಡು ಓಟದಲ್ಲಿ ಪ್ರಥಮ ಗಳಿಸಿದ್ದಾರೆ. ರೇಶ್ಮಾ ನಾಯ್ಕ ೪*೪೦೦ ಮೀ. ರೀಲೆ ಪ್ರಥಮ, ಈಟಿ ಎಸೆತ ಪ್ರಥಮ, ಗುಡ್ಡಗಾಡು ಓಟದಲ್ಲಿ ಪ್ರಥಮ ಪಡೆದಿದ್ದಾರೆ. ರೂಪಾಕ್ಷಿ ಮೊಗೇರ ಚಕ್ರ ಎಸೆತ ಪ್ರಥಮ, ಈಟಿ ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ. ದೀಪಶ್ರೀ ನಾಯ್ಕ ೪*೧೦೦ ಮೀ. ರೀಲೆ ಪ್ರಥಮ ಗಳಿಸಿದ್ದಾರೆ. ಚಂದ್ರಕಲಾ ನಾಯ್ಕ ಎತ್ತರ ಜಿಗಿತದಲ್ಲಿ ತೃತೀಯ ಬಂದಿದ್ದಾರೆ. ಸಾಧನಾ ರಾಮಕೃಷ್ಣ ನಾಯ್ಕ ೩ ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ತೃತೀಯ ಪಡೆದಿದ್ದಾರೆ. ಮೋನಿಕಾ ದೇವಾಡಿಗ ೪೦೦ಮೀ. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಸೆಪ್ಟೆಂಬರ್ ೧೩ರಂದು ವಿವಿಧೆಡೆ ಅಡಿಕೆ ಧಾರಣೆ
ಯೋಗ ಸ್ಪರ್ಧೆಯಲ್ಲಿ ಶಾಂಭವಿ ಮೊಗೇರ, ಶ್ರೇಯಾ ನಾಯ್ಕ, ಸಂಜನಾ ನಾಯ್ಕ ಹಾಗೂ ಹರ್ಷ ಮೊಗೇರ , ಕರಾಟೆ ಸ್ಪರ್ಧೆಯಲ್ಲಿ ಪ್ರತ್ಯಕ್ಷ ನಾಯ್ಕ, ವಿನುತಾ ನಾಯ್ಕ, ರಾಧಿಕಾ ಗೊಂಡ, ನೀಶಾ ನಾಯ್ಕ, ಅನನ್ಯ ಕಿಣಿ, ರಕ್ಷಾ ಖಾರ್ವಿ, ಲಾವಣ್ಯ ದೇವಾಡಿಗ, ಚೆಸ್ ಸ್ಪರ್ಧೆಯಲ್ಲಿ ಕಾವ್ಯ ನಾಯ್ಕ, ತನುಶ್ರೀ ಮೊಗೇರ, ಲೋಹಿತ ಮಾರಾಠಿ, ಅಂಕಿತ ನಾಯ್ಕರ, ಹೆಚ್. ಆರ್ . ಪರಮೇಶ್ವರ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇದನ್ನೂ ಓದಿ : ಮದ್ಯದ ಅಮಲಿನಲ್ಲಿ ಬಾವಿಗೆ ಬಿದ್ದು ಯುವಕ ಮೃತ್ಯು
ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ತ್ರೋಬಾಲ್ , ಕಬಡ್ಡಿ ಹಾಗೂ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಮತ್ತು ವಾಲಿಬಾಲ್ ಆಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಆರ್.ಜಿ. ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಬಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.