ಭಟ್ಕಳ (Bhatkal) : ತಾಲೂಕಿನ ಜಾಲಿ ಗ್ರಾಮದ ಹರ್ನಗದ್ದೆಯಲ್ಲಿ ಏ.೨೦ರಂದು ರವಿವಾರ ರಾತ್ರಿ ೭.೩೦ರ ಸುಮಾರಿಗೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ಕು ಜನರನ್ನು ಬಂಧಿಸಿ (arrest) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಾಲಿ ಗುಡಿಹಿತ್ತಲದ ಗಣೇಶ ಮಾಸ್ತಯ್ಯ ನಾಯ್ಕ (೪೩), ಜಾಲಿಕೋಡಿ ನಿವಾಸಿ ಶ್ರೀಧರ ಹೊನ್ನಪ್ಪ ನಾಯ್ಕ (೪೯), ಮಾರುಕೇರಿ ಕೋಟಖಂಡದ ನಾರಾಯಣ ಮಂಜು ಗೊಂಡ (೫೨) ಮತ್ತು ಬೆಳಕೆಯ ದುರ್ಗಪ್ಪ ಹೊನ್ನಪ್ಪ ನಾಯ್ಕ (೫೨) ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿತರು (arrest). ಇವರು ಹರ್ನಗದ್ದೆಯ ದೇವೇಂದ್ರ ಕುಪ್ಪಯ್ಯ ಗೊಂಡ ಅವರ ಮನೆಯ ಹತ್ತಿರ ಅರಣ್ಯ ಹಾಡಿ ಜಾಗದಲ್ಲಿ ಕೋಳಿ ಅಂಕ ಆಟವಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : arrested/ ಭಟ್ಕಳದಲ್ಲಿ ಸರಗಳ್ಳತನ ಮಾಡಿ ಶಿರಸಿಯಲ್ಲಿ ಸಿಕ್ಕಿಬಿದ್ದರು !
ತಮ್ಮ ಸ್ವಂತ ಲಾಭಕ್ಕೋಸ್ಕರ ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥಕಟ್ಟಿ ಜೂಗಾರಾಟ ಆಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿತರಿಂದ ೧೬೯೦ ರೂ. ನಗದು, ೪ ಹುಂಜ, ೧ ಕೋಳಿ ಕತ್ತಿ ಮತ್ತು ನಾಲ್ಕು ದಾರದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.
ಇದನ್ನೂ ಓದಿ : accident/ ಬೈಕ್ ಸವಾರ ಸ್ಥಳದಲ್ಲೇ ಸಾವು