ಸಿದ್ದಾಪುರ (Siddapur): ಸ್ಥಳೀಯ ಆಧಾರ ಸಂಸ್ಥೆ (ರಿ.) ಆಶ್ರಯದಲ್ಲಿ ಮಂಗಳೂರು (Mangaluru) ಹಾರ್ಟ ಸ್ಕ್ಯಾನ್ ಫೌಂಡೇಶನ್ ಹಾಗೂ ಒಮೇಗಾ ಹಾಸ್ಪಿಟಲ್ ಆಶ್ರಯದಲ್ಲಿ ಫೆ.೧೬ ರಂದು ಪಟ್ಟಣದ ಎಂ.ಎಚ್.ಪಿ.ಎಸ್. ಬಾಲಿಕೊಪ್ಪದಲ್ಲಿ ದಿ. ಡಿ.ಎನ್. ಶೇಟ ಸ್ಮರಣಾರ್ಥ ಬೃಹತ್ ಉಚಿತ ಹೃದಯ ತಪಾಸಣಾ (Heart check up) ಶಿಬಿರ ಆಯೋಜಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಲವು ವರ್ಷಗಳ ನಂತರ ತಾಲೂಕಿನಲ್ಲಿ ನಡೆಯುತ್ತಿರುವ ಈ ಬೃಹತ್ ಉಚಿತ ಹೃದಯ ತಪಾಸಣಾ (Heart check up) ಶಿಬಿರದಲ್ಲಿ ಖ್ಯಾತ ಹೃದಯರೋಗ ತಜ್ಞರಾದ ಡಾ. ಕೆ. ಮುಕುಂದ, ಡಾ. ಅಮಿತ್ ಕಿರಣ ಹಾಗೂ ಡಾ. ಮೇಘನಾ ಮುಕುಂದ ಪಾಲ್ಗೊಂಡು ಹೃದಯ ತಪಾಸಣೆ ನಡೆಸಲಿದ್ದಾರೆ.

ಇದನ್ನು ಓದಿ : Book Release/ ಮಧುರಗಾನ ಪುಸ್ತಕ ಬಿಡುಗಡೆ

ಶಿಬಿರದಲ್ಲಿ ಹೃದಯರೋಗ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಇ.ಸಿ.ಜಿ. ಹಾಗೂ ಇ.ಸಿ.ಎಚ್.ಒ. ಪರೀಕ್ಷೆ ನಡೆಸಲಾಗುವುದು. ಅಲ್ಲದೆ ಮಧುಮೇಹ ರಕ್ತ ಪರೀಕ್ಷೆ ನಡೆಸಲಾಗುವುದು.

ಇದನ್ನು ಓದಿ : Vardhanthi / ನಾಗಮಾಸ್ತಿ ದೇವರ ಪ್ರಥಮ ವರ್ಧಂತ್ಯುತ್ಸವ ಸಂಪನ್ನ

ತಪಾಸಣೆ ಶಿಬಿರಕ್ಕೆ ಬರುವಾಗ ಈ ಹಿಂದೆ ತಪಾಸಣೆ ಮಾಡಿದ್ದರೆ ಇತ್ತೀಚಿಗೆ ನಡೆಸಲಾದ ವೈದ್ಯಕೀಯ ತಪಾಸಣಾ ದಾಖಲೆಗಳನ್ನು ಹಾಗೂ ನೀಡಲಾದ ಔಷಧಿಗಳ ಮಾಹಿತಿಯನ್ನು ತರುವುದು ಕಡ್ಡಾಯವಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಫೆಬ್ರವರಿ ೧೫ರ ಒಳಗೆ ಹೆಸರನ್ನು ಕೆಳಗಿನ ದೂರವಾಣಿ ಸಂಖ್ಯೆಗೆ ಕರೆಮಾಡಿ ನೊಂದಾಯಿಸಿಕೊಳ್ಳಬೇಕು. ನಾಗರಾಜ ನಾಯ್ಕ ಮಾಳ್ಕೋಡ (೮೧೦೫೪೦೬೫೧೩), ಪ್ರಶಾಂತ ಡಿ. ಶೇಟ (೯೪೪೮೩೪೭೫೭೦), ಧರ್ಮ ಅಂಬಿಗ (೮೮೬೭೧೪೪೦೯೨), ಸುರೇಶ ಮಡಿವಾಳ ಕಡಕೇರಿ (೯೯೪೫೭೭೪೫೪೮).

ವಿಡಿಯೋ ಸಹಿತ ಇದನ್ನು ಓದಿ : Protest / ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಆರಂಭ 

ತಪಾಸಣಾ ಶಿಬಿರವು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆಯ ವರೆಗೆ ನಡೆಯಲಿದೆ. ಸಾರ್ವಜನಿಕರು, ಆಸಕ್ತರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಹಾಗೂ ಶಿಬಿರದ ಸಂಯೋಜಕ ಧರ್ಮ ಅಂಬಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : matsyagandha express/ ಮತ್ಸ್ಯಗಂಧ ಎಕ್ಸಪ್ರೆಸ್‌ಗೆ ಎಲ್‌ಎಚ್‌ಬಿ ಕೋಚ್‌