ಭಟ್ಕಳ (Bhatkal): ಕ್ರಿಸ್ತರಾಜರ ದೇವಾಲಯ (Church) ಕಟ್ಟಡದ ಪುನರ್ ನಿರ್ಮಾಣ ಹಾಗೂ ನವೀಕರಣಕ್ಕೆ ಮುರುಡೇಶ್ವರ (Murudeshwar) ಮಾವಳ್ಳಿ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ಗುರುವಾರದಂದು ಧರ್ಮಗುರುಗಳನ್ನು ಭೇಟಿ ಮಾಡಿ ೧೦ ಸಾವಿರ ರೂ. ಧನ ಸಹಾಯ ಮಾಡಿದ್ದಾರೆ (funding).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇತ್ತೀಚೆಗೆ ನಡೆದ ಮುರುಡೇಶ್ವರ (Murdeshwar) ಮಾವಳ್ಳಿ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘ ಸಾಮಾನ್ಯ ಸಭೆಯಲ್ಲಿ ಕ್ರಿಸ್ಚಿಯನ್ ಸಮುದಾಯದ ರಿಕ್ಷಾ ಚಾಲಕರಾದ ಜೋಸೆಫ್ ಶಾಂತಾ ಲೂಯಿಸ್ ಅವರು ನಮ್ಮ ಸಮುದಾಯದ ಕ್ರಿಸ್ತರಾಜರ ದೇವಾಲಯ ಕಟ್ಟಡದ ಪುನರನಿರ್ಮಾಣ ಹಾಗೂ ನವಿಕರಣಕ್ಕೆ ಧನ ಸಹಾಯಕ್ಕೆ ಪ್ರಸ್ತಾವನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿತ್ತು.
ಇದನ್ನೂ ಓದಿ : ಕಾಸರಕೋಡನಲ್ಲಿ ಅಳವೆಯಲ್ಲಿ ಸಿಲುಕಿದ ಬೋಟ್
ನಿನ್ನೆ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಚರ್ಚ್ ಗೆ ತೆರಳಿ, ನೀಡಿ ಕ್ರಿಸ್ಚಿಯನ್ ಧರ್ಮ ಗುರುಗಳನ್ನು ಭೇಟಿ ಮಾಡಿ ೧೦ ಸಾವಿರ ರೂಪಾಯಿಯ ಧನಸಹಾಯವನ್ನು ಚೆಕ್ ಮುಖಾಂತರ ನೀಡಿ (funding) ಶುಭ ಹಾರೈಸಿದ್ದಾರೆ. ಈ ಸಂದರ್ಭ ಹಿರಿಯ ಚಾಲಕರಾದ ಸುರೇಶ್ ಶೆಟ್ಟಿ, ಸಂಘದ ಅಧ್ಯಕ್ಷ ಶ್ರೀಧರ ಎಲ್ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಕಾರ್ಯದರ್ಶಿ ಸಂತೋಷ ನಾಯ್ಕ, ಸದಸ್ಯರಾದ ಪ್ರಮೋದ ಸಾವಂತ, ಕೃಷ್ಣ ನಾಯ್ಕ ಪಾವ್ಲು, ಜೋಸೆಫ್ ಉಪಸ್ಥಿತರಿದ್ದರು.
ಇದನ್ನೂ ಓದಿ : ದುರ್ಗಪ್ಪ ಗುಡಿಗಾರ ಯಕ್ಷಗಾನ ಟ್ರಸ್ಟ್ ವಾರ್ಷಿಕೋತ್ಸವ