ಭಟ್ಕಳ (Bhatkal): ಬುಧವಾರ ಗಣೇಶ ವಿಸರ್ಜನೆ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶದಲ್ಲಿ (sensitive place) ಹದ್ದಿನ ಕಣ್ಣಿಟ್ಟಿದೆ. ಕಾರವಾರದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ (bomb squad) ಅಂಕೋಲಾದಿಂದ (Ankola) ಭಟ್ಕಳದವರೆಗೆ ನಡೆಸುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರ (Murudeshwar) ರೈಲೆ ನಿಲ್ದಾಣ (railway station), ದೇವಸ್ಥಾನಗಳು, ಪ್ರಮುಖ ಸಾರ್ವಜನಿಕ ಗಣೇಶೋತ್ಸವದ (Ganeshotsava) ಸ್ಥಳಗಳು, ಜನನಿಬಿಡ ಪ್ರದೇಶ, ಪ್ರಮುಖ ಬೀದಿಗಳು, ಭಟ್ಕಳದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮುಖ್ಯ ರಸ್ತೆ, ರೈಲ್ವೆ ನಿಲ್ದಾಣಕ್ಕೆ ತೆರಳಿ ತಪಾಸಣೆ ನಡೆಸಿದೆ. ಪೊಲೀಸ್ ಇಲಾಖೆ ಉಭಯ ಕೋಮಿನ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಸಲಹೆ ನೀಡಿದೆ.

ಇದನ್ನೂ ಓದಿ : ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಮತ್ತೊಂದು ರ‍್ಯಾಂಕ್

ಸಾಮಾಜಿಕ ಜಾಲತಾಣಗಳಲ್ಲೂ ನಿಗಾ ಇಟ್ಟಿರುವ ತಂಡ ಅಶಾಂತಿಯನ್ನು ಹರಡುವ, ಕೋಮು ಭಾವನೆ ಕೆರಳಿಸುವ ಗ್ರೂಫ್‌ಗಳ ಮಾಹಿತಿ ಪಡೆದು ನಿರಂತರ ಸಂಪರ್ಕ ಸಾಧಿಸಿ ಅದರ ಚಟುವಟಿಕೆಗಳನ್ನು ಗಮನಿಸುತ್ತಿದೆ. ಜಿಲ್ಲೆಯ ವಿವಿಧ ಕಡೆ ಬಾಂಬ್ ಪತ್ತೆ ದಳ (bomb squad) ದೇವಸ್ಥಾನಗಳಿಗೆ ತೆರಳಿ ತಪಾಸಣೆ ನಡೆಸಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ ೧೦ರಂದು ವಿವಿಧೆಡೆ ಅಡಿಕೆ ಧಾರಣೆ

ಅಧಿಕಾರಿಗಳಾದ ಅರಸಿ ಸಂಜಯ ಬೋವಿ, ಆನಂದ ನಾಯ್ಕ, ಶೇಖು ಪೂಜಾರಿ ಇವರು ಮಾರ್ವೆಲ್ ಎನ್ನುವ ಶ್ವಾನವನ್ನು ತಂದು ಸ್ಥಳೀಯ ಪೊಲೀಸರ ಸಹಾಯದಿಂದ ಎಲ್ಲಡೆ ತಪಾಸಣೆ ನಡೆದಿದ್ದಾರೆ.