ಭಟ್ಕಳ: ತಾಲೂಕಿನ ಮುರ್ಡೇಶ್ವರ ಬೀಚ್‌ನಲ್ಲಿ (Murudeshwar beach) ಪ್ರತಿ ನಿತ್ಯ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಮಾರುತ್ತಿರುವ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರ್ಡೇಶ್ವರದ (Murdeshwar) ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ ಹಂಚನಾಳ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೋಳಿ ಹಬ್ಬದ ನಿಮಿತ್ತ ಮುರ್ಡೇಶ್ವರ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಸಂಚರಣೆಯಲ್ಲಿರುವಾಗ ಭಟ್ಕಳದ ಒಬ್ಬ ತೆಳ್ಳಗಿನ ಮೈಕಟ್ಟು ಇರುವ ಸಣ್ಣ ದಾಡಿಯುಳ್ಳ ವ್ಯಕ್ತಿಯು ಕಳೆದೊಂದು ವಾರದಿಂದ ಗಾಂಜಾ ಮಾರುತ್ತಿರುವ ಬಗ್ಗೆ ಬಾತ್ಮಿದಾರರೊಬ್ಬರು ಮಾಹಿತಿ ನೀಡಿದ್ದಾರೆ. ಪ್ರತಿದಿನ ಮಧ್ಯಾಹ್ನ ೧೨:೩೦ ಗಂಟೆಯಿಂದ ೧:೩೦ ಗಂಟೆ ಹಾಗೂ ಸಾಯಂಕಾಲ ೬ ಗಂಟೆಯಿಂದ ೭ ಗಂಟೆಯವರೆಗೆ ಒಂದು ಕೆಂಪು ಮರೂನ್ ಬಣ್ಣದ ಸ್ಕೂಟಿಯ ಮೇಲೆ ಮುರ್ಡೇಶ್ವರ ಗಾಲ್ಫ್ ಬೀಚ್ (Murudeshwar beach) ಹತ್ತಿರ ಬರುತ್ತಾನೆ. ಗಾಂಜಾ ಮಾದಕ ವಸ್ತುವನ್ನು ಸಣ್ಣ ಸಣ್ಣ ಪ್ಯಾಕೇಟಗಳಲ್ಲಿ ಹಾಕಿ ಮುರ್ಡೇಶ್ವರದ ಕಾಲೇಜ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ಕೆಲವು ವ್ಯಕ್ತಿಗಳಿಗೆ ನೀಡಿ ಒಂದು ಪ್ಯಾಕೇಟಗೆ ೫೦೦ ರೂಪಾಯಿಯಂತೆ ವ್ಯಾಪಾರ ಮಾಡುತ್ತಾನೆ ಎಂಬ ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.



