ಭಟ್ಕಳ: ಗಾಂಜಾ ಸೇವಿಸಿದ ಆರೋಪದ ಮೇಲೆ ತಾಲೂಕಿನ ಕಾಯ್ಕಿಣಿ ತೆರ್ನಮಕ್ಕಿಯ ಯುವಕನೊಬ್ಬನ ವಿರುದ್ಧ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ಪಿಎಸೈ ಲೋಕನಾಥ ರಾಥೋಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿಲ್ಪಿ ಕೆಲಸ ಮಾಡುವ ಶಿವರಾಜ ತಂದೆ ರಾಮಚಂದ್ರ ದೇವಾಡಿಗ (೨೦) ಆರೋಪಿಯಾಗಿದ್ದಾನೆ (Youth arrested). ಈತ ಮಾ ೪ರಂದು ಬೆಳಿಗ್ಗೆ ೧೦-೩೦ ಗಂಟೆಯ ಸುಮಾರಿಗೆ ಮುರ್ಡೇಶ್ವರದ (Murudeshwar )ಕಾಯ್ಕಿಣಿಯ ತೆರ್ನಮಕ್ಕಿ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ಪಿಎಸೈ ಲೋಕನಾಥ ರಾಥೋಡ ವಶಕ್ಕೆ ಪಡೆದಿದ್ದರು. ಆತನನ್ನು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Murudeshwar/ ಮುರ್ಡೇಶ್ವರ ಬೀಚ್‌ನಲ್ಲಿ ಪ್ರತಿ ದಿನ ಗಾಂಜಾ ಮಾರಾಟ