ಮುಂಬೈ (Mumbai) : ವಿಮಾನದ ಶೌಚಾಲಯದ (Aircraft toilet) ಲೈಟ್‌ ಪ್ಯಾನೆಲ್‌ನಲ್ಲಿ ೨.೧೦ ಕೋ.ರೂ. ಮೌಲ್ಯದ ೩ ಕೆಜಿ ಚಿನ್ನ (Gold) ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕರ್ನಾಟಕ (Karnataka) ರಾಜ್ಯದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ಮೂಲದ ಇನಾಮುಲ್‌ ಹಸನ್‌ ಬಂಧಿತ ಆರೋಪಿ. ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್‌ನ ಏರ್‌ ಇಂಟೆಲಿಜೆನ್ಸ್‌ ಘಟಕದ ಅಧಿಕಾರಿಗಳು ಮಾಲ್ಡೀವ್ಸ್‌ನ (Maldives) ಮಾಲೆಯಿಂದ ಮುಂಬೈಗೆ ಬಂದಿಳಿದ  ಇನಾಮುಲ್‌ ಹಸನ್‌ನನ್ನು ತಡೆಹಿಡಿದಿದ್ದಾರೆ. ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಅವರ ದೇಹ ಮತ್ತು ಸಾಮಾನುಗಳನ್ನು ಪರಿಶೀಲಿಸಿದಾಗ ಏನೂ ಪತ್ತೆಯಾಗಿಲ್ಲ. ನಂತರ  ಅಧಿಕಾರಿಗಳು ವಿಮಾನದ ಶೌಚಾಲಯವನ್ನು (Aircraft toilet) ಪರಿಶೀಲಿಸಿದಾಗ, ಮುಂಭಾಗದ ಶೌಚಾಲಯದ ಲೈಟ್ ಪ್ಯಾನೆಲ್‌ನಲ್ಲಿ ಕಪ್ಪು ಬಣ್ಣದ ಅಂಟಿಕೊಳ್ಳುವ ಟೇಪ್‌ನಿಂದ ಸುತ್ತಿದ ೧೩ ಆಯತಾಕಾರದ ಪೌಚ್‌ಗಳು ಕಂಡುಬಂದಿವೆ.  ತೆರೆದಾಗ ೨.೧೦ಕೋಟಿ ಮೌಲ್ಯದ ಸುಮಾರು ೩ ಕೆಜಿ ೨೪ ಕೆ.ಜಿ. ಚಿನ್ನದ ತುಂಡುಗಳು ಪತ್ತೆಯಾಗಿವೆ.

ಇದನ್ನೂ ಓದಿ :   ಮುರುಡೇಶ್ವರ ಕಡಲತೀರ ಪ್ರವಾಸಿಗರಿಗೆ ಮುಕ್ತ

ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಹಣದ ಆಸೆಗೆ ಸಿಂಡಿಕೇಟ್‌ಗಾಗಿ ಚಿನ್ನ ಕಳ್ಳಸಾಗಣೆ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಚಿನ್ನ ಬಚ್ಚಿಟ್ಟಿರುವ ಫೋಟೊ ತೆಗೆದು ಸಿಂಡಿಕೇಟ್‌ಗೆ ಕಳುಹಿಸಲಾಗುತ್ತದೆ. ಅದರ ಮೂಲಕ ವಿಮಾನ ಗುರುತಿಸಲಾಗುತ್ತದೆ. ಆ ವಿಮಾನ ದೇಶೀಯ ಸೇವೆಗೆ ರವಾನಿಸಿದ ನಂತರ, ರಹಸ್ಯವಾಗಿ ಚಿನ್ನವನ್ನು ಅಲ್ಲಿಂದ ತೆಗೆಯುವ ಯೋಜನೆ ರೂಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಪ್ರಶಸ್ತಿ ಪಡೆದ ಪತ್ರಕರ್ತರ ಬಗ್ಗೆ ನಿಮಗೆ ಗೊತ್ತಾ?