ಭಟ್ಕಳ (Bhatkal) : ಗೂಡ್ಸ್ ರಿಕ್ಷಾ ಡಿಕ್ಕಿ (collision) ಹೊಡೆದ ಪರಿಣಾಮ ಬಾಲಕಿ ಸಹಿತ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಜಾಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ಚಲಾಯಿಸುತ್ತಿದ್ದ ಶಿರಾಲಿ ಚಿತ್ರಾಪುರದ ಲೋಕೇಶ ಸತೀಶ ನಾಯ್ಕ (೨೫) ಮತ್ತು ಹಿಂಬದಿ ಕುಳಿತಿದ್ದ ಕಾರಗದ್ದೆಯ ಆಲಿಯಾ ಸಮ್ರೀನ್ ನಿಸಾರ್ ಅಹ್ಮದ್ (೧೦) ಗಾಯಗೊಂಡವರು. ಗೂಡ್ಸ್ ರಿಕ್ಷಾ ಚಾಲಕ, ಬೆಳ್ನಿಯ ಸಂತೋಷ ಮಾಸ್ತಪ್ಪ ನಾಯ್ಕ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ. ತೆಂಗಿನಗುಂಡಿ ಕ್ರಾಸ್‌ನಿಂದ ಜಾಲಿ ಕ್ರಾಸ್ ಕಡೆಗೆ ರಸ್ತೆಯ ಬಲ ಬದಿಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಗೂಡ್ಸ್ ರಿಕ್ಷಾ ಚಲಾಯಿಸಿಕೊಂಡು ಬಂದಿರುವುದಾಗಿ ದೂರಲಾಗಿದೆ. ಏಕಾಏಕಿ ಎಡಕ್ಕೆ ಗೂಡ್ಸ್ ರಿಕ್ಷಾ ತಿರುಗಿಸಿದ್ದರಿಂದ ಭಟ್ಕಳದ ಸಂಶುದ್ದೀನ್ ವೃತ್ತದಿಂದ ತೆಂಗಿನಗುಂಡಿ ಕ್ರಾಸ್ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ (collision) ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : compete / ಜಾಲಿ ಪಪಂ ಕಟ್ಟಡ; ಕ್ರೆಡಿಟ್‌ಗಾಗಿ ಹಾಲಿ-ಮಾಜಿ ಶಾಸಕರ ಪೈಪೋಟಿ