ಹುಬ್ಬಳ್ಳಿ (Hubballi): ವಿಮಾನದಲ್ಲಿ (aeroplane) ಒಮ್ಮೆಯಾದರೂ ಹೋಗಬೇಕು. ಪ್ರಯಾಣ ಮಾಡಿದ ಅನುಭವ ಅನುಭವಿಸಬೇಕು. ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ (aviation) ಬೆಳೆಸಬೇಕು ಎಂಬ ಕನಸು ಕಾಣುತ್ತಿದ್ದ ಸರ್ಕಾರಿ ಶಾಲೆಯ (government school) ಮಕ್ಕಳ (school children) ಕನಸು ಇದೀಗ ನನಸಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೌದು, ಹುಬ್ಬಳ್ಳಿಯ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ‘ಸಪನೋ ಕೀ ಉಡಾನ್ ಫ್ಲೈಟ್ ಆಫ್ ಫ್ಯಾಂಟಸಿ’ ಕಾರ್ಯಕ್ರಮದ ಮೂಲಕ ಹುಬ್ಬಳ್ಳಿಯ ಉಣಕಲ್’ನ ಆಶ್ರಯ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ಮತ್ತು ಏಳನೇ ತರಗತಿಯ ೧೯ ವಿದ್ಯಾರ್ಥಿಗಳು, ನಾಲ್ಕು ಶಿಕ್ಷಕರನ್ನು ವಿಮಾನದಲ್ಲಿ ಪ್ರವಾಸಕ್ಕೆ (aviation) ಕರೆದುಕೊಂಡು ಹೋಗಿದ್ದಾರೆ.
ಇದನ್ನು ಓದಿ : NIA team/ ಮತ್ತೊಮ್ಮೆ ಯುವಕರಿಬ್ಬರ ವಶಕ್ಕೆ ಪಡೆದ ಎನ್ಐಎ
ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ (airport) ಬೆಳಿಗ್ಗೆ ವಿಮಾನದಲ್ಲಿ ಬೆಂಗಳೂರಿಗೆ (Bengaluru) ಹೋಗಿದ್ದಾರೆ. ಮಕ್ಕಳು ಮತ್ತು ಶಿಕ್ಷಕರು ಬೆಂಗಳೂರಿನ ವಿಧಾನಸೌಧ(vidhanasoudha), ಹೈಕೋರ್ಟ್(High court), ವಿಶ್ವೇಶ್ವರಯ್ಯ ಮ್ಯೂಸಿಯಂ (museum), ನೆಹರು ತಾರಾಲಯ (planetarium), ಬನ್ನೇರುಘಟ್ಟ (bannerughatta) ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.
ಇದನ್ನು ಓದಿ : Vardhanthi / ನಾಗಬನ ದೇವರ ದ್ವಿತೀಯ ವರ್ಧಂತಿ ಸಂಪನ್ನ
ರೌಂಡ್ ಟೇಬಲ್ ಇಂಡಿಯಾ ಚೇರ್ಮನ್ ಅರ್ಜುನ ಮಹಾಜನ್ ಮಾತನಾಡಿ, ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಲ್ಲವನ್ನೂ ತೋರಿಸಬೇಕು ಕಲಿಕೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಮಾಡಿಸಲಾಗಿದೆ ಎಂದಿದ್ದಾರೆ.
ಇದನ್ನು ಓದಿ : Rescue of tourists/ ಅರಣ್ಯದಲ್ಲಿ ಸಿಲುಕಿದ ಪ್ರವಾಸಿಗರ ರಕ್ಷಣೆ
ಇನ್ನೂ ಶಾಲೆಯ ಶಿಕ್ಷಕಿ ಅನುಪೂರ್ಣ ಮುದುಗಲ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಬಡಮಕ್ಕಳು ಕಲಿಯುತ್ತಿದ್ದಾರೆ. ಅವರು ಸರಿಯಾಗಿ ರೈಲನ್ನು ನೋಡಿಲ್ಲ. ಆದರೆ ಇದೀಗ ವಿಮಾನಯಾನ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ.
ಇದನ್ನು ಓದಿ : Mariyamma/ ಗಂಜಿ ಮಾರಿಯಮ್ಮ ದೇವಿ ಪ್ರತಿಷ್ಠಾಪನೆ
ಒಟ್ಟಿನಲ್ಲಿ ಮೊದಲ ಬಾರಿ ವಿಮಾನದಲ್ಲಿ ಹಾರಾಟ ಮಾಡುವುದು ವಿದ್ಯಾರ್ಥಿಗಳಲ್ಲಿ ಇನ್ನಿಲ್ಲದ ಸಂತೋಷವನ್ನು ಮೂಡಿಸಿತ್ತು. ಈ ಸಂದರ್ಭದಲ್ಲಿ ಲೇಡಿಸ್ ಸರ್ಕಲ್ ಇಂಡಿಯಾದ ಚೇರ್ ಪರ್ಸನ್ ಸುವರ್ಣ ಜರತಾರ್ಘರ, ರೌಂಡ್ ಟೇಬಲ್ ಇಂಡಿಯಾ ಕಾರ್ಯದರ್ಶಿ ವಿಶ್ವನಾಥ ವಾಳ್ವೇಕರ, ಪೂಜಾ ಮಹಾಜನ, ವಿಶ್ವಾಸ ಜೀವಣ್ಣವರ, ರೋಹಿತ ಲದ್ವಾ, ಮಿಥುನ್ ಜಿಗಳೂರು, ನಿತೇಶ ತೆಲಿಸರ, ಅಕ್ಷಯ ಕೊಟ್ಟೂರಶೆಟ್ಟರ, ಸಂತೋಷ ಕರೆಣ್ಣವರ, ವಿಜೇಶ ಸೈಗಲ್ ಇನ್ನಿತರರು ಇದ್ದರು.
ಮಕ್ಕಳು ವಿಮಾನಯಾನಕ್ಕೆ ಹೊರಟ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.