ಭಟ್ಕಳ (Bhatkal) : ಯುರೋಪಿನ (Europe) ಹಂಗೇರಿಯಲ್ಲಿ (Hangeri) ನಡೆದ ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ (gold medal) ಗೆದ್ದು ತವರಿಗೆ ಆಗಮಿಸಿದ ಭಟ್ಕಳದ ಧನ್ವಿತಾ ವಾಸು ಮೊಗೇರ, ಬೆಳ್ಳಿ ಪದಕ ಗೆದ್ದ ಅವನಿ ರಾವ್ ಹಾಗೂ ಕೋಚ್ ನಾಗಶ್ರೀ ನಾಯ್ಕ ಅವರನ್ನು ತಾಲೂಕಿನ ವಿವಿಧ ಸಂಘ ಸಂಸ್ಥೆಗಳಿಂದ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು (grand welcome).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರೈಲ್ವೆ ನಿಲ್ದಾಣದಿಂದ ತೆರೆದ ಜೀಪ್ ನಲ್ಲಿ ಮೆರವಣಿಗೆ ನಡೆಸಲಾಯಿತು. ಪುಷ್ಪಾಂಜಲಿ ಟಾಕೀಸ್ ರಸ್ತೆ, ಮಣ್ಕುಳಿ, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಶುದ್ದೀನ್ ಸರ್ಕಲ್ ಗೆ ಮೆರವಣಿಗೆ ಬಂದು ತಲುಪಿತು. ನಂತರ ಅಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಸನ್ಮಾನಿಸಿದರು. ಬಳಿಕ ಅಲ್ಲಿಂದ ಧನ್ವಿತಾ ವಾಸು ಮೊಗೇರ ವಿದ್ಯಾಭ್ಯಾಸ ಮಾಡುತ್ತಿರುವ ಆನಂದಾಶ್ರಮ ಶಾಲೆಗೆ ಮೆರವಣಿಗೆ ತಲುಪಿತು. ಅಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಕೂಡ ಅದ್ದೂರಿಯಾಗಿ ಸ್ವಾಗತ ಮಾಡಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಮುರ್ಡೇಶ್ವರ ಪಿಎಸ್ಐ ಮಂಜುನಾಥ ಅಮಾನತು
ಇದಕ್ಕೂ ಪೂರ್ವ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಸ್ವಾಗತ ಮಾಡಿ ಮಾತನಾಡಿದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪುಟಾಣಿ ಧ್ವನಿತಾ ಶ್ರೇಷ್ಠ ಸಾಧನೆ ಮಾಡಿದ್ದಾಳೆ. ಕೇವಲ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ ಮಟ್ಟದಲ್ಲಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾಳೆ. ಕಿಕ್ ಬಾಕ್ಸಿಂಗ್ ನಲ್ಲಿ ಮೊಟ್ಟ ಮೊದಲು ಚಿನ್ನ ಬೆಳ್ಳಿ ಗೆದ್ದಿರುವುದು ಭಟ್ಕಳ ತಾಲೂಕಿಗೆ ಹೆಮ್ಮೆ ಸಂಗತಿ. ಈ ಸಾಧನೆಗೆ ಈಕೆಯ ಕೋಚ್ ನಾಗಶ್ರೀ ನಾಯ್ಕ ಶ್ರಮ ಕೂಡ ಮುಖ್ಯ ಪಾತ್ರವಾಗಿದೆ ಎಂದರು.
ಇದನ್ನೂ ಓದಿ : ಸೆಪ್ಟೆಂಬರ್ ೩ರಂದು ವಿವಿಧೆಡೆ ಅಡಿಕೆ ಧಾರಣೆ
ಬಳಿಕ ಉತ್ತರ ಕನ್ನಡ ಜಿಲ್ಲೆ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹಾಗೂ ರಾಜ್ಯ ಅಮೇಚ್ಯೂರ್ ಕಬಡ್ಡಿ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಶ್ರೀಧರ ನಾಯ್ಕ ಮುಟ್ಟಳ್ಳಿ ಮಾತನಾಡಿದರು. ಈ ಬೈಕ್ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್,ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ