ಸಿದ್ದಾಪುರ (Siddapura) : ಪಟ್ಟಣದ ರವೀಂದ್ರನಗರದ ಎಂ.ಎಚ್.ಪಿ.ಎಸ್ ಬಾಲಿಕೊಪ್ಪ ಶಾಲಾ ಆವರಣದಲ್ಲಿ ಸಿದ್ದಾಪುರದ ಆಧಾರ ಸಂಸ್ಥೆ( ರಿ) ಆಶ್ರಯದಲ್ಲಿ ನಡೆದ ಬೃಹತ್ ಉಚಿತ ಹೃದಯ ತಪಾಸಣಾ (heart checkup) ಶಿಬಿರದಲ್ಲಿ ೨೬೩ ಜನರ ಹೃದಯ ತಪಾಸಣೆ ಮಾಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಗಳೂರಿನ (Mangaluru) ಒಮೇಗಾ ಆಸ್ಪತ್ರೆ (Omega hospital) ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಡಿ.ಎನ್.ಶೇಟ ಸ್ಮರಣಾರ್ಥ ಈ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಮಹಿಳೆಯರ ಸಂಖ್ಯೆ ಎದ್ದು ಕಾಣುತ್ತಿತ್ತು. ಒಟ್ಟು ೨೬೩ ರಲ್ಲಿ ಪುರುಷರು-೧೧೫, ಮಹಿಳೆಯರು ೧೪೮ ಇದ್ದರು. ಇವರಲ್ಲಿ ವರ್ಷದ ಒಳಗಿನ ೧೮ ಮಕ್ಕಳು ಭಾಗವಹಿಸಿದ್ದರು. ೫೬ ಜನರಿಗೆ ಹೃದಯ ಸಂಬಂಧಿ ತೊಂದರೆ ಇರುವುದು ತಿಳಿದುಬಂದಿದೆ.
ವಿಡಿಯೋ ಸಹಿತ ಇದನ್ನು ಓದಿ : Aviation/ ಸರ್ಕಾರಿ ಶಾಲೆ ಮಕ್ಕಳ ವಿಮಾನಯಾನ
ಬೆಳಿಗ್ಗೆ ೯ ಗಂಟೆಯಿಂದ ನಡೆದ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ (medical test), ಮಧುಮೇಹ (diabetic) ರಕ್ತ ತಪಾಸಣೆ (blood test), ಇ.ಸಿ.ಜಿ. (ECG) ಪರೀಕ್ಷೆ, ಎಕೋ (echo) ತಪಾಸಣೆಯು ಸಾಯಂಕಾಲ ೩.೩೦ರವರೆಗೆ ನಡೆಯಿತು.
ಇದನ್ನು ಓದಿ : NIA team/ ಮತ್ತೊಮ್ಮೆ ಯುವಕರಿಬ್ಬರ ವಶಕ್ಕೆ ಪಡೆದ ಎನ್ಐಎ
ಈ ಶಿಬಿರದಲ್ಲಿ ಮಂಗಳೂರಿನ ಖ್ಯಾತ ಹೃದಯ ರೋಗ ತಜ್ಞ ಡಾ. ಕೆ. ಮುಕುಂದ, ಶಸ್ತ್ರಚಿಕಿತ್ಸಾ ತಜ್ಞ ಡಾ. ಅಮಿತ ಕಿರಣ, ಡಾ. ಅಭಿಜಿತ ಪಾಟೀಲ, ಮಂಗಳೂರು ಒಮೇಗಾ ಆಸ್ಪತ್ರೆಯ ಎಚ್.ಆರ್.ನಾಗರಾಜ, ಟಿ.ಇಬ್ರಾಹಿಂ, ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ನ ಬಾಲಕೃಷ್ಣ ಮಟ್ಟು, ಸುದೀಪ ಬಲ್ಯ, ಮುಟ್ಟಂ, ಆಸ್ಪತ್ರೆಯ ಸಿಬ್ಬಂದಿ, ಶಿರಸಿಯ ಲತಾ ರಾಧಾಕೃಷ್ಣ ಶೇಟ, ಗಾಯತ್ರಿ ವಿ.ಶೇಟ, ಅರ್ಚನಾ ಮುಲ್ಲೂರ ಸಿದ್ದಾಪುರ, ಪ್ರದೀಪ ತಿರುಮಲೈ, ಸಿದ್ದಾರೂಢ ಮತ್ತು ಆಶಾ ಕಾರ್ಯಕರ್ತೆಯರಾದ ಪ್ರಭಾವತಿ ಎಸ್.ಅಂಬಿಗ, ಭಾರತಿ ನಾಯ್ಕ ಈ ಶಿಬಿರಕ್ಕೆ ಸಹಕರಿಸಿದ್ದರು.
ಇದನ್ನು ಓದಿ : Vardhanthi / ನಾಗಬನ ದೇವರ ದ್ವಿತೀಯ ವರ್ಧಂತಿ ಸಂಪನ್ನ
ನಾವು ಸಂಘಟಿಸಿದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ೫೬ ಜನರಿಗೆ ಹೃದಯ ಸಂಬಂಧಿ ತೊಂದರೆ ಇರುವುದು ತಿಳಿದಿದೆ. ಅದರಲ್ಲಿ ಕೆಲವು ಪ್ರಕರಣ ಹಳೆಯದಿದೆ. ಕೆಲ ಹೊಸಬರಿಗೂ ಪರೀಕ್ಷೆಯಿಂದ ತಿಳಿದಿದೆ. ಅವರ ಮುಂದಿನ ಚಿಕಿತ್ಸೆಗೆ ಅಗತ್ಯ ಇದ್ದವರಿಗೆ ನಮ್ಮಿಂದ ಹಾಗೂ ಇತರರಿಂದ ಸಹಕಾರ ಮಾಡಿಸಲಾಗುವುದು.
– ನಾಗರಾಜ ನಾಯ್ಕ, ಮಾಳ್ಕೊಡ, ಅಧ್ಯಕ್ಷರು, ಆಧಾರ ಸಂಸ್ಥೆ, ಸಿದ್ದಾಪುರ.
ಇದನ್ನು ಓದಿ : Siddapura/ ಉಚಿತ ಹೃದಯ ತಪಾಸಣಾ ಶಿಬಿರ ಯಶಸ್ವಿ
ಸಿದ್ದಾಪುರದಲ್ಲಿ ಉಚಿತವಾಗಿ ನಡೆಸಿದ ಹೃದಯ ತಪಾಸಣೆ ಶಿಬಿರ ದಾಖಲೆ ಎನ್ನಬಹುದು. ಉತ್ತಮ ಸಂಘಟನೆ ಆಗಿದೆ. ಇಲ್ಲಿ ಪರೀಕ್ಷೆ ಮಾಡಿಕೊಂಡವರಿಗೆ ಹಾಗೂ ಇತರರಿಗೆ ಮುಂದಿನ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು.
– ಬಾಲಕೃಷ್ಣ ಮಟ್ಟು,, ಪಿ.ಆರ್.ಓ., ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್.