ಭಟ್ಕಳ (Bhatkal) : ಐವರ ಮೇಲೆ ಏಕಾಏಕಿ ಹೆಜ್ಜೇನು (honeybees) ದಾಳಿ ಮಾಡಿರುವ ಘಟನೆ ತಾಲೂಕಿನ ಬೆಳೆಕೆ ಜನತಾ ಕಾಲೋನಿ ಸಮೀಪ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪರಮೇಶ್ವರಿ ಮಂಜುನಾಥ ಮೊಗೇರ (60), ಮಂಜುನಾಥ ಮಾಸ್ತಿ ಮೊಗೇರ (70), ಭರತ ರಾಮಚಂದ್ರ ಮೊಗೇರ (21) ಸತೀಶ ಕರಿಯಪ್ಪ ನಾಯ್ಕ ಸೇರಿದಂತೆ ಐವರ ವಿರುದ್ಧ ಹೆಜ್ಜೇನು ದಾಳಿ ನಡೆಸಿತ್ತು. ಇವರು ತಮ್ಮ ಮನೆಯ ಗೇಟ್ ಬಳಿ ನಿಂತಿದ್ದ ವೇಳೆ ಎಲ್ಲಿಂದಲೋ ಏಕಾಏಕಿ ಹೆಜ್ಜೇನು (honeybees) ದಾಳಿ ಮಾಡಿತ್ತು. ಅಸ್ವಸ್ಥಗೊಂಡವರು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದು, ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪೈಕಿ ಮಂಜುನಾಥ ಮೊಗೇರ, ಭರತ ಮೊಗೇರ ಮತ್ತೋರ್ವನನ್ನು ತುರ್ತು ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೈಕ್ ಅಪಘಾತದಲ್ಲಿ ಓರ್ವ ಸಾವು, ಇನ್ನೊಬ್ಬಗೆ ಗಾಯ