ಹೊನ್ನಾವರ (Honnavara) : ಸಂಸ್ಕೃತ ವಿಶ್ವವಿದ್ಯಾಲಯದ (Sanskrit University) ಸಿಂಡಿಕೇಟ್ ಸದಸ್ಯರಾಗಿ (Syndicate member) ಆಯ್ಕೆಯಾದ ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ ಯಾಜಿ ಅವರನ್ನು ವರದಾ ಬಳಗದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು (honored).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವರದಾ ಬಳಗದ ಹಿರಿಯ ಸದಸ್ಯ ಮಲ್ಲಿನಾಥ ಮಾಪಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾರಾಯಣ ಯಾಜಿ ಅವರ ಪತ್ನಿ ಮಂಗಳಾ ಹಾಗೂ ತಾಯಿ ಶಾರದಾ ಯಾಜಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದನ್ನೂ ಓದಿ : ARM ಟ್ರೈಲರ್ ಗೆ ಮೆಚ್ಚುಗೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಯಾಜಿ, ವರದಾ ಬಳಗದ ಸನ್ಮಾನವು ತನ್ನ ಮನೆಯ ಸನ್ಮಾನದಂತೆ ಭಾಸವಾಗಿದೆ. ಇದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು.
ಇದನ್ನೂ ಓದಿ : ಸೆಪ್ಟೆಂಬರ್ ೧೧ರಂದು ವಿವಿಧೆಡೆ ಅಡಿಕೆ ಧಾರಣೆ
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರ್ನಾಟಕ (Karnataka) ಕಾರ್ಯನಿರತ ಪತ್ರಕರ್ತರ (journalist) ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ನಾರಾಯಣ ಯಾಜಿ ಅವರ ಕಾರ್ಯಕ್ಷಮತೆ, ಅವರ ಅಧ್ಯಯನಶೀಲತೆ ಹಾಗೂ ಸಾಮಾಜಿಕ ಕಳಕಳಿಯಿಂದಾಗಿ ಇಂದು ಸರಕಾರ ಗುರುತಿಸಿ ದೊಡ್ಡ ಹುದ್ದೆ ನೀಡಿದೆ. ದೊರೆತ ಹುದ್ದೆಯನ್ನು ಸರಿಯಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿರುವ ಅವರಿಂದ ಹೆಚ್ಚಿನ ಸಂಸ್ಕೃತ ಪಂಡಿತರು, ಸಂಸ್ಕೃತ ಕಾಲೇಜು ಇರುವ ಈ ಜಿಲ್ಲೆಗೆ ಹೆಚ್ಚಿನ ಕೊಡುಗೆ ದೊರೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ : ಕ್ರೀಡಾಕೂಟದಲ್ಲಿ ಆರ್.ಎನ್. ಶೆಟ್ಟಿ ಪಪೂ ಕಾಲೇಜು ಸಾಧನೆ
ನಾರಾಯಣ ಯಾಜಿ ಅವರನ್ನು ಅಭಿನಂದಿಸಿ ಕೃಷ್ಣ ಭಟ್ಟ, ರಘುಪತಿ ಹೆಗಡೆ, ಪಿ.ಎನ್.ಹೆಗಡೆ, ಗಣಪತಿ ಭಾಗವತ್, ವೆಂಕಟಯ್ಯ ದೇವಾಡಿಗ, ತ್ರಿವೇಣಿ ಹೆಗಡೆ ಮುಂತಾದವರು ಮಾತನಾಡಿದರು. ಶ್ರೀಕಾಂತ ಹೆಗಡೆ ಸನ್ಮಾನ ಪತ್ರ ವಾಚಿಸಿದರು.
ಇದನ್ನೂ ಓದಿ : ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಮತ್ತೊಂದು ರ‍್ಯಾಂಕ್
ಕಾರ್ಯಕ್ರಮದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ (KVG Bank) ಸಿಬ್ಬಂದಿ ಪೂರ್ಣಾನಂದ ವಾರಂಬಳ್ಳಿ, ವೆಂಕಟಯ್ಯ ದೇವಾಡಿಗ, ನಾರಾಯಣ ಗಾಣಿಗ, ಪಿ.ಎನ್. ಹೆಗಡೆ, ನಾಗರಾಜ ಯಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ತ್ರಿವೇಣಿ ಹೆಗಡೆ ಹಾಗೂ ವಿದ್ಯಾ ಭಟ್ಟ ಪ್ರಾರ್ಥಿಸಿದರು, ವರದಾ ಬಳಗದ ತಿಮ್ಮಣ್ಣ ಭಾಗವತ ಸ್ವಾಗತಿಸಿದರು, ಶ್ರೀಕಾಂತ ಹೊಳ್ಳ ನಿರೂಪಿಸಿದರು. ವಿಶ್ವೇಶ್ವರ ಯಾಜಿ ವಂದಿಸಿದರು.