ಭಟ್ಕಳ (Bhatkal) : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಮಾನವ ಸರಪಳಿ (human chain) ಕಾರ್ಯಕ್ರಮ ಭಟ್ಕಳ ತಾಲೂಕಿನಲ್ಲಿ ಅಸ್ತವ್ಯಸ್ತದಿಂದ ಕೂಡಿತ್ತು. ಮಕ್ಕಳು ಸುರಿಯುವ ಮಳೆಯಲ್ಲೇ ನಿಂತರೆ, ಮಾಹಿತಿ ಕೊರತೆಯಿಂದ ಬೆಳಗ್ಗೆ ೧೦ ಗಂಟೆ ನಂತರವೂ ಮಕ್ಕಳು ರಸ್ತೆಯಲ್ಲಿ ನಿಂತುಕೊಂಡೇ ಇದ್ದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಾನವ ಸರಪಳಿಯಲ್ಲಿ (human chain) ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ತಾಲೂಕಾಡಳಿತ ಸೂಚನೆ ನೀಡಿತ್ತು. ಅದರಂತೆ ಪುಟಾಣಿ ಮಕ್ಕಳು, ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಟ್ಕಳ ನಗರ ಭಾಗದಲ್ಲಿ ಮಳೆಯಲ್ಲೇ ನಿಂತು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದಕ್ಕೆ ವಿದ್ಯಾರ್ಥಿಗಳ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸೆ. ೨೩ರಿಂದ ಪರೀಕ್ಷೆ ಪ್ರಾರಂಭವಾಗುತ್ತಿದೆ. ಈ ರೀತಿ ಮಳೆಯಲ್ಲಿ ನಿಂತು ಜ್ವರ ಬಂದರೆ ಯಾರು ಹೊಣೆ? ಆಮೇಲೆ ಅಧಿಕಾರಿಗಳು ಬಂದು ಪರೀಕ್ಷೆ ಬರೆಯುತ್ತಾರೆ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಕಾಮುಕ ಶಿಕ್ಷಕ ಸಾದಿಕ್‌ ಅಮಾನತು

ಮಾಹಿತಿ ಕೊರತೆ: ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಮುಕ್ತಾಯ ಮಾಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಭಟ್ಕಳ ನಗರ ಭಾಗದಲ್ಲಿ ನಿಂತ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇಲಾಖೆ ಅಧಿಕಾರಿಗಳು 10 ಗಂಟೆ ನಂತರವೂ ಮಾನವ ಸರಪಳಿಯಲ್ಲೇ ನಿಂತುಕೊಂಡಿರುವುದು ಕಂಡು ಬಂತು. ಉಡುಪಿ ಜಿಲ್ಲೆಗೆ ಹೋಲಿಸಿದರೆ ಭಟ್ಕಳದಲ್ಲಿ ಕಾಟಾಚಾರಕ್ಕೆ ಕಾರ್ಯಕ್ರಮ ನಡೆಸಿದಂತೆ ಕಂಡುಬಂತು. ಶಿರೂರು ಸೇರಿದಂತೆ ಕುಂದಾಪುರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕ್ಯಾಪ್ ಹಾಗೂ ಸಿಹಿ ತಿಂಡಿ ವಿತರಿಸಿದ್ದಾರೆ. ಆದರೆ ಭಟ್ಕಳದಲ್ಲಿ ವಿದ್ಯಾರ್ಥಿಗಳು ಮಳೆಯಲ್ಲಿ ನಿಂತು ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ :  ಅರಣ್ಯದಲ್ಲಿ ಇಸ್ಪೀಟ್‌ ಆಡುತ್ತಿದ್ದಾಗ ಪೊಲೀಸ್‌ ದಾಳಿ

ಗೊಂಡರ ಧಕ್ಕೆ ಕುಣಿತ: ಆರಂಭದಲ್ಲಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಗರಾಜ ನಾಯ್ಕಡ ತಾಲೂಕಿನ ಬೈಲೂರಿನಲ್ಲಿ ದೀಪ ಬೆಳಗಿಸಿ, ಗಿಡ ವಿತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಹಾಗೂ ರಾಷ್ಟ್ರ ಗೀತೆ ಹೇಳಿದರು. ಕಾರ್ಯಕ್ರಮದಲ್ಲಿ ಗೊಂಡ ಸಮಾಜದ ಧಕ್ಕೆ ಕುಣಿತ ಎಲ್ಲರ ಗಮನ ಸೆಳೆಯಿತು. ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಟ್ಕಳ ಗಡಿ ಭಾಗದಿಂದ ಶಿರೂರು ಗಡಿ ತನಕ ಮಾನವ ಸರಪಳಿ ಕೊಂಡಿ ತಪ್ಪದಂತೆ ಸಮಾಜದ ಎಲ್ಲಾ ವರ್ಗದ ಜನರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ ಕೈ ಹಿಡಿದು ಮಾನವ ಸರಪಳಿ ಮಾಡಿರುವುದು ವಿಶೇಷವಾಗಿತ್ತು.

ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌  ನಲ್ಲಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ : ಟಿಪ್ಪರ್‌ ಡಿಕ್ಕಿ: ಮುರ್ಡೇಶ್ವರದ ಕಾರು ಚಾಲಕಗೆ ಗಾಯ