ಕಾರವಾರ (Karwar) : ಮೂರ್ಛೆರೋಗದ (Epilepsy)ಕುರಿತು ಯುವಜನರು ಅರಿತುಕೊಂಡು,ಮೌಢ್ಯ ಹಾಗೂ ಮಿಥ್ಯಗಳಿಂದ ಹೊರಬರಬೇಕಿದೆ ಎಂದು ಕಿಮ್ಸ್ ಆಸ್ಪತ್ರೆಯ (KIMS Hospital) ವೈದ್ಯ ಡಾ. ಅಮಿತ ಕಾಮತ ಅಭಿಪ್ರಾಯ ಪಟ್ಟರು. ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು (Polytechnic College) ಸಭಾಂಗಣದಲ್ಲಿ ಏರ್ಪಡಿಸಿದ ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ (Epilepsy day) ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೆದುಳು ಆರೋಗ್ಯ ಉಪಕ್ರಮ, ಜಿಲ್ಲಾ ಆಸ್ಪತ್ರೆ, ಕ್ರಿಮ್ಸ್ ಕಾರವಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮೂರ್ಛೆರೋಗವು (Epilepsy) ಚಿಕಿತ್ಸೆ ನೀಡಬಹುದಾದ ಕಾಯಿಲೆ. ಸರಿಯಾದ ಔಷಧ ತೆಗೆದುಕೊಳ್ಳುವುದರಿಂದ ಗುಣಪಡಿಸಲು ಸಾಧ್ಯ. ಮೂರ್ಛೆ ಬಂದಾಗ ರೋಗಿಯ ಕೈಯಲ್ಲಿ ಬೀಗದ ಕೈ ಇರಿಸುವುದು, ಈರುಳ್ಳಿ ಇಲ್ಲವೇ ಕೊಳಕು ಚಪ್ಪಲಿ ಅಥವಾ ಶೂ ಮೂಸುವಂತೆ ಮಾಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಾಸುದೇವ ಗೌಡ, ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕುಷ್ಠರೋಗ (leprosy) ನಿವಾರಣಾಧಿಕಾರಿ ಡಾ.ಶಂಕರರಾವ್, ಯುವಜನತೆ ಮೆದುಳಿನ ಕಾಯಿಲೆಗಳನ್ನು ತಾವು ಅರಿತುಕೊಂಡು ಆ ಜ್ಞಾನವನ್ನು ತಮ್ಮ ಸಮುದಾಯಕ್ಕೆ ಹಂಚಿ ಮೆದುಳು ಕಾಯಿಲೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯನ ಮೆದುಳು ಸಮಗ್ರ ಆರೋಗ್ಯದ ಕೀಲಿ ಕೈ ಆಗಿದೆ. ಮೆದುಳಿಗೆ ಸ್ವಲ್ಪಮಟ್ಟಿನ ಏರುಪೇರು ಅನೇಕ ಕಷ್ಟವನ್ನು ವ್ಯಕ್ತಿ ಅನುಭವಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮೆದುಳು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (KABHI) ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಸೌಲಭ್ಯ ಲಭ್ಯವಿದೆ. ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಈ ಮಾಹಿತಿಯನ್ನು ನೀಡುವ ಮೂಲಕ ಇತರಿಗೆ ಮಾದರಿಯಾಗಬೇಕೆಂದು ಕಭಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಕಿರಣಕುಮಾರ ಮಹಾಲೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ : Child death/ ಜೆಸಿಬಿ ಅಡಿಯಲ್ಲಿ ೨ ವರ್ಷದ ಮಗು ಕೊನೆಯುಸಿರು
ಈ ಕಾರ್ಯಕ್ರಮದಲ್ಲಿ ಕಭಿ ಕ್ಲಿನಿಕಲ್ ಮನಶಾಸ್ತ್ರಜ್ಞ (Psychologist) ಮದನ ಕೆ. ಗೌಡ, ಫಿಸಿಯೋಥೆರಪಿಸ್ಟ್ (physiotherapy) ಸಹನಾ ಕೆ., ವಾಕ್ ಭಾಷಾ (speech language) ತಜ್ಞೆ ಸಹನಾ ಪ್ರಭು, ಮೆಡಿಸಿನ್ (Medicine) ವಿಭಾಗದ ಪಿಜಿ ವೈದ್ಯ ಡಾ. ರಾಹುಲ್ ಜೋಶಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ (Polytechnic college) ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಉಪನ್ಯಾಸಕಿ ವಾಸವಿ ನಾಯಕ ನಿರೂಪಿಸಿ, ವಂದಿಸಿದರು.
ಇದನ್ನೂ ಓದಿ : Accident/ ಅಪಘಾತದಲ್ಲಿ ತಂದೆ-ತಾಯಿ, ಮಗು ದುರ್ಮರಣ