ಭಟ್ಕಳ: ನಾನು ಸೇವೆಯಿಂದ ನಿವೃತ್ತನಾಗಿದ್ದೇನೆಯೇ ಹೊರತು ದಣಿದಿಲ್ಲ (I am retired but not tired) ಎಂದು ಉತ್ತರ ಕನ್ನಡ (uttara kannada) ಜಿಲ್ಲೆಯ ದಾಂಡೇಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೪೦ ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿ, ೨೦೦೦ನೇ ಇಸ್ವಿಯಲ್ಲಿ ನಿವೃತ್ತರಾಗಿರುವ ಅಂಕೋಲಾದ (Ankola) ಬಬ್ರುವಾಡ ನಿವಾಸಿ ಶೇಖ್ ಅಲಿ ಮುಹಮ್ಮದ್ ಸ್ವಾಲೇಹ್ ಹೇಳಿದರು. ಅವರು ಗುರುವಾರ ಸೆ.೫ರಂದು ಆಲ್ ಇಂಡಿಯಾ ಐಡಿಯಲ್ ಟೇಚರ್ಸ್ ಅಸೋಸಿಯೇಶನ್ ಜಿಲ್ಲಾ ಶಾಖೆ ತಮ್ಮ ಜೀವಮಾನದ ಸಾಧನೆಗಾಗಿ ಕೊಡಮಾಡಿದ ಲೈಫ್ ಟೈಮ್ ಅಚೀವ್ಮೆಂಟ್ ಐಡಿಯಲ್ ಟೀಚರ್ ಅವಾರ್ಡ (Ideal Teacher Award)-೨೦೨೪ ಸ್ವೀಕರಿಸಿ ಮಾತನಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಉತ್ತರಕನ್ನಡ ಜಿಲ್ಲಾ ಪದಾಧಿಕಾರಿಗಳು ವಿಶಿಷ್ಟ ರೀತಿಯಲ್ಲಿ ಶಿಕ್ಷಕರ ದಿನ ಆಚರಿಸಿದರು. ಜಿಲ್ಲೆಯ ಇಬ್ಬರು ನಿವೃತ್ತ ಶಿಕ್ಷಕರಾದ ಶೇಕ್ ಅಲಿ ಮುಹಮ್ಮದ್ ಸ್ವಾಲೇಹ್ ಹಾಗೂ ಕುಮಟಾ ತಾಲೂಕಿನ ಗುಡ್ ಕಾಗಲ್ ನ ನಿವೃತ್ತ ಶಿಕ್ಷಕ ಅಲ್ ದಾಮಕರ್ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರ ನಡುವೆ ಅವರನ್ನು ಸನ್ಮಾನಿಸಿದರು. ಅವರ ಜೀವಮಾನ ಸಾಧನೆಗಾಗಿ ಐಡಿಯಲ್ ಟೀಚರ್ (Ideal Teacher Award) ಅವಾರ್ಡ್ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : Raghaveshwar Shri/ ಜ್ಯೋತಿಷ್ಯಕ್ಕೆ ಅನೇಕ ಆಯಾಮ
ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆ ನೀಡಿ, ಗೌರವಿಸಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ, ಶಿಕ್ಷಕರು ಸಮಾಜದ ನಿರ್ಮಾಪಕರಾಗಿದ್ದಾರೆ. ಅವರ ಸೇವೆಯನ್ನು ಸ್ಮರಿಸುವುದು, ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದೆ. ಉ.ಕ. ಜಿಲ್ಲೆಯ ಇಬ್ಬರು ಮಹಾನುಭಾವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.
ಇದನ್ನೂ ಓದಿ : ಶಿಕ್ಷಕರ ಪರಿಶ್ರಮ ಸ್ಮರಿಸಿದ ಉಸ್ತುವಾರಿ ಸಚಿವ
ಸಮುದಾಯದೊಂದಿಗೆ ಅತ್ಯಂತ ನಿಕಟವಾಗಿದ್ದ ಶೇಖ ಅಲಿಯವರು ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನೂರಾರು ಶಿಕ್ಷಕರನ್ನು, ವೈದ್ಯರನ್ನು ಇಂಜಿನೀಯರ್ ಗಳನ್ನು ಇವರು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮುಸ್ಲಿಮ್ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕುರಿತು ವಿಶೇಷ ಕಾಳಜಿ ವಹಿಸಿದ್ದರು ಎಂದರು.
ಇದನ್ನೂ ಓದಿ : ಕವನ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಈ ಸಂದರ್ಭದಲ್ಲಿ ಐಟಾ ರಾಜ್ಯ ಕಾರ್ಯದರ್ಶಿ ಯಾಸೀನ್ ಭಿಕ್ಬಾ, ಉ.ಕ. ಜಿಲ್ಲಾಧ್ಯಕ್ಷ ಅಲಿ ಮನೆಗಾರ, ಜಿಲ್ಲಾ ಕಾರ್ಯದಶಿ ಇಸ್ಮಾಯಿಲ್ ಮುಜಾವರ್, ಕುಮಟಾ ಶಾಖೆಯ ಅಧ್ಯಕ್ಷ ಮುಹಮ್ಮದ್ ಶಫಿ ಮೊನ್ನಾ ಉಪಸ್ಥಿತರಿದ್ದರು.
ಇದನ್ನೂ ಓದಿ : ಸತ್ತ ಹುಂಜ ವಶಕ್ಕೆ ಪಡೆದ ಪೊಲೀಸರು !