ಭಟ್ಕಳ: ಜನರ ಸಮಸ್ಯೆಗೆ ಸ್ಪಂದಿಸಲು ಹಾಗೂ ಅವರ ಕಷ್ಟವನ್ನು ಪರಿಹರಿಸುವ ಉದ್ದೇಶದಿಂದ ಜನಸ್ಪಂದನ (janaspandana) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ತಾಲೂಕಿನ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ರವಿವಾರದಂದು ಭಟ್ಕಳದ ಸಚಿವರ ಕಾರ್ಯಾಲಯದಲ್ಲಿ ನಡೆದ ಜನಸ್ಪಂದನ (janaspandana) ಕಾರ್ಯಕ್ರಮ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಸಾರ್ವಜನಿಕರ ಕೆಲಸ ಮಾಡಲು ಕಚೇರಿ ತೆರೆದರೂ ಅವರು ಬರುತ್ತಿಲ್ಲ. ಎಲ್ಲರಿಗೂ ನನ್ನ ವಿನಂತಿ ಮಾಡಿಕೊಳ್ಳುತ್ತೇನೆ. ನನ್ನ ಭಟ್ಕಳ ಕಚೇರಿಯಾಗಲಿ, ಮನೆಯಾಗಲಿ, ಹೊನ್ನಾವರ, ಕಾರವಾರ ಅಥವಾ ಬೆಂಗಳೂರಿನ ಕಛೇರಿಯಲ್ಲಿ ನಿಮ್ಮ ಕೆಲಸ ಆಗುತ್ತದೆ. ಅಲ್ಲಿ ಆಗದೇ ಇರುವ ಕೆಲಸಕ್ಕೆ ನನ್ನ ಬಳಿ ಬನ್ನಿ. ಪ್ರತಿ ದಿನ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯ ತನಕ ನಮ್ಮ ಕಚೇರಿಯಲ್ಲಿ ನಮ್ಮ ಪಿ.ಎ. ನಿಮ್ಮ ಕೆಲಸ ಮಾಡಿಕೊಡುತ್ತಾರೆ. ಅಲ್ಲಿ ಆಗದೆ ಇದ್ದಲ್ಲಿ ನನ್ನ ಬಳಿ ಬನ್ನಿ. ನಾನು ಜನರೊಂದಿಗೆ ಇರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಿದ್ದೇನೆ. ಇದು ನಿರಂತರವಾಗಿ ನಡೆಯುತ್ತದೆ ಎಂದರು.
ಇದನ್ನೂ ಓದಿ : ’ಬೆಂಗಳೂರು ಚಲೋ’ ಗೆ ಐಟಾ ಬೆಂಬಲ
ಇದಕ್ಕೂ ಪೂರ್ವ ತಮ್ಮ ಕಚೇರಿಗೆ ಬಂದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗೆ ಸ್ಪಂದಿಸಿದರು. ವೃದ್ದರೋರ್ವರನ್ನು ತಮ್ಮ ಬಳಿ ಕುಳ್ಳರಿಸಿಕೊಂಡು ಅವರ ಆರೋಗ್ಯ ವಿಚಾರಿಸಿದ ಸಚಿವರು ಅವರ ಅವರ ಸಮಸ್ಯೆಗೆ ಸ್ಪಂದಿಸಿದರು.