ಭಟ್ಕಳ: ರಾಜ್ಯ ಮಟ್ಟದ ಜಾವಲಿನ್ ಎಸೆತ (javelin throw) ಸ್ಪರ್ಧೆಯಲ್ಲಿ ತಾಲೂಕಿನ ಶಿರಾಲಿಯ ಕವೀಶ್ ಕೃಷ್ಣ ನಾಯ್ಕ ತೃತೀಯ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಹಾಗೂ ತಾಲೂಕಿಗೆ ಗೌರವ ತಂದಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕರ್ನಾಟಕ ಅಥ್ಲೆಟಿಕ್ ಅಸೋಶಿಯೇಶನ್ ಬೆಂಗಳೂರು ಕಂಠೀರವ ಸ್ಟೇಡಿಮ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜ್ಯೂನಿಯ‌ರ್ ಅಥ್ಲೆಟಿಕ್ ಕ್ರೀಡಾಕೂಟದದಲ್ಲಿ ಶಿರಾಲಿಯ ಕವೀಶ್ ಕೃಷ್ಣ ನಾಯ್ಕ ಜಾವೆಲಿನ ಎಸೆತ (javelin through) ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾನೆ.‌ ಮೂಲತಃ ಬೈಲೂರು ನಿವಾಸಿಯಾಗಿರುವ ಈತ ಪ್ರಸ್ತುತ ಶಿರಾಲಿಯಲ್ಲಿ ನೆಲೆಸಿದ್ದಾನೆ. ಇಲ್ಲಿನ ಶಿರಾಲಿ ಚಿತ್ರಾಪುರ ಶ್ರೀವಲ್ಲಿ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಶಿರಾಲಿಯ ಪ್ರೀತಿ ಸ್ಪೋರ್ಟ್ಸ್ ಕ್ಲಬ್ಬಿನ ಸದಸ್ಯನಾಗಿರುವ ಈತನ ಈ ಸಾಧನೆಗೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಕ್ರೀಡಾಪ್ರೇಮಿಗಳು ಅಭಿನಂದಿಸಿದ್ದಾರೆ.

ಇದನ್ನೂ ಓದಿ :  ಭೂ ಕುಸಿತ ಅಪಾಯ ತಪ್ಪಿಸಲು ಸ್ಪಾಟರ್ಸ್ ನೇಮಕ