ಬೆಳಗಾವಿ : ಮಾಟ ಮಂತ್ರಕ್ಕೆ ಆಕರ್ಷಿತನಾಗಿ ಮಕ್ಕಳ ಕೊಂದ ತಂದೆಗೆ ಬೆಳಗಾವಿಯ ೬ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ೨೦ ಸಾ.ರೂ. ದಂಡ ವಿಧಿಸಿ ಆದೇಶ (judgement) ಹೊರಡಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬೆಳಗಾವಿಯ ಕಂಗ್ರಾಳಿ ಕೆಎಚ್ ಗ್ರಾಮದ ರಾಮನಗರ ೨ನೇ ಕ್ರಾಸ್ ನಿವಾಸಿ ಅನಿಲ ಚಂದ್ರಕಾಂತ ಬಾಂದೇಕರ ಶಿಕ್ಷೆಗೊಳಗಾದ ಅಪರಾಧಿ. ಜುಲೈ ೨೦೨೧ ರಲ್ಲಿ ಅನಿಲ ಅವರ ಮನೆಯ ಮುಂದೆ ಯಾರೋ ಮಾಟಮಂತ್ರ ಮಾಡಿಸಿ ಇಟ್ಟಿದ್ದರು. ಇದರಿಂದ ಆಕರ್ಷಿತನಾದ ಆತ ತನ್ನಿಬ್ಬರು ಮಕ್ಕಳಾದ ಅಂಜಲಿ(8) ಮತ್ತು ಅನನ್ಯ(4) ಎಂಬ ಎರಡೂ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಕೊಲೆಗೈದಿದ್ದ. ಈ ಬಗ್ಗೆ ಆತನ ವಿರುದ್ಧ ಅವನ ಹೆಂಡತಿ ಜಯಾ ಬಾಂದೇಕರ ದೂರು ನೀಡಿದ್ದರು. ದೂರನ್ನು ಆಧರಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಭೀಕರ ಅಪಘಾತದಲ್ಲಿ ಕ್ರೈಸ್ತ ಧರ್ಮಗುರು ಸಾವು
ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಹಿರೇಮಠ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ನಸ್ರೀನ್ ಬಂಕಾಪುರೆ ವಾದ ಮಂಡಿಸಿದ್ದರು.
ಇದನ್ನೂ ಓದಿ : ಮಾರಿ ಜಾತ್ರೆ ನಿಮಿತ್ತ ಮೂರ್ತಿ ಕೆತ್ತನೆಗೆ ಚಾಲನೆ
ಪ್ರಕರಣದ ಹಿನ್ನೆಲೆ:
ಅನಿಲ ಬಾಂದೇಕರ ತನ್ನ ಮನೆ ಮಾರಾಟ ಮಾಡಲು ಮುಂದಾಗಿದ್ದ. ಆದರೆ ಖರೀದಿಗೆ ಯಾರೂ ಬರದ ಕಾರಣ ಬೇಜಾರು ಮಾಡಿಕೊಂಡಿದ್ದ. ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಕೊಂದು ತನ್ನ ರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ಮನೆ ಮಾರಾಟ ಆಗುತ್ತದೆ. ಎಲ್ಲ ಕೆಲಸದಲ್ಲಿ ಯಶಸ್ಸು ಆಗುತ್ತದೆ ಅಂತ ಆತನಿಗೆ ರಾತ್ರಿ ಕನಸು ಬೀಳುತ್ತಿತ್ತು. ಇದನ್ನು ನಂಬಿಕೊಂಡು ತನ್ನ ಮಕ್ಕಳಿಗೆ ಫಿನಾಯಿಲ್ ಕುಡಿಸಿ, ಬಾಯಿ ಒತ್ತಿ ಹಿಡಿದು ಕೊಲೆ ಮಾಡಿದ್ದ. ನಂತರ ಬ್ಲೇಡಿನಿಂದ ತನ್ನ ರಕ್ತವನ್ನು ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಹಾಕಿದ್ದ.
ಇದನ್ನೂ ಓದಿ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಆರೋಪಿತನ ವಿರುದ್ಧ ಮಾಡಲಾಗಿದ್ದ ಆರೋಪ ಕಲಂ 302 ಅಡಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶ ಎಚ್. ಎಸ್. ಮಂಜುನಾಥ ತೀರ್ಪು(judgement) ನೀಡಿದ್ದರು.