ಚಿಕ್ಕೋಡಿ : ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೃಷ್ಣಾ ನದಿ(Krishna river) ಉಕ್ಕಿ ಹರಿಯುತ್ತಿದ್ದು(flood), ಮಹಾರಾಷ್ಟ್ರ – ಕರ್ನಾಟಕ ಸಂಪರ್ಕ ಸೇತುವೆ ಬಂದ್ ಆಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ- ಉಗಾರಖುರ್ದ್ ಮಧ್ಯ ಸಂಪರ್ಕ ಕಲ್ಪಿಸುವ ಬೃಹತ್ ಸಂಪೂರ್ಣ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿದೆ. ಕೃಷ್ಣಾ ನದಿ(Krishna river) ಅಬ್ಬರಕ್ಕೆ ಸೇತುವೆ ಮೇಲೆ ನದಿ ನೀರು ಹರಿಯುತ್ತಿದೆ.
ಸದ್ಯ 1 ಲಕ್ಷ 50 ಸಾವಿರ ಕ್ಯೂಸೇಕ್ನಷ್ಟು ಕೃಷ್ಣೆಗೆ ಒಳಹರಿವು ಇದೆ. ಸೇತುವೆ ಮುಳುಗಡೆಯಾಗಿ ಕರ್ನಾಟಕ ಮಹಾ ಸಂಪರ್ಕ ಬಂದ್ ಆಗಿದೆ.
ಇದನ್ನೂ ಓದಿ : ಮಕ್ಕಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ
ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಕುಡಚಿ ಠಾಣಾ ಪೊಲೀಸರಿಂದ ಸೇತುವೆಗೆ ಬ್ಯಾರಿಕೇಡ್ ಅಳವಡಿಸಿದ್ದಾರೆ.