ಕಾರವಾರ (Karwar) : ಮಹಾ ಶಿವರಾತ್ರಿ (Maha Shivaratri) ನಿಮಿತ್ತ ಕಾರವಾರ ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ (Shejjeshwar) ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.೨೬ ಬುಧವಾರದಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫೆ.೨೬ರಂದು ಬುಧವಾರ ಬೆಳಿಗ್ಗೆಯಿಂದ ಸಂಜೆ ೬ ಗಂಟೆಯವರೆಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ೭ ಗಂಟೆಯಿಂದ ಲೋಕ ಕಲ್ಯಾಣಾರ್ಥಕ್ಕಾಗಿ ಶತರುದ್ರಾಭಿಷೇಕ ನಡೆಯಲಿದೆ. ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಜಿಲ್ಲಾಧಿಕಾರಿ ಕಾರ್ಯಾಲಯದ ಆದೇಶದ ಪ್ರಕಾರ ಮಹಾ ಶಿವರಾತ್ರಿಯ ದಿನ ಪೂರ್ತಿ ರಾತ್ರಿ ಶ್ರೀ ಶೆಜ್ಜೇಶ್ವರ (Shejjeshwar) ದೇವಸ್ಥಾನವನ್ನು ತೆರೆದಿಟ್ಟು ಜಾಗರಣೆ ಮಾಡಲಾಗುತ್ತದೆ. ಫೆ.೨೭ ರಂದು ಗುರುವಾರ ಬೆಳಿಗ್ಗೆ ೭ ಗಂಟೆಗೆ ಸಮುದ್ರ ಸ್ನಾನಕ್ಕೆ ಪಲ್ಲಕ್ಕಿಯ ಮೂಲಕ ತೆರಳಲಿದೆ. ಮರಳಿದ ಬಳಿಕ ದೇವಾಲಯದಲ್ಲಿ ಮಧ್ಯಾಹ್ನ ಪೂಜೆ, ರಾತ್ರಿ ಶ್ರೀ ದೇವರ ಪಲ್ಲಕ್ಕಿ ಮೆರವಣಿಗೆ, ರಂಗ ಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿವೆ.
ಇದನ್ನೂ ಓದಿ : Gokarna Jathra/ ಶಿವರಾತ್ರಿಗೆ ಗೋಕರ್ಣ ಹೋಗಬೇಕಾ? ಇಲ್ಲಿದೆ ಸಾರಿಗೆ ವ್ಯವಸ್ಥೆ
ಫೆ.೨೮ ಶುಕ್ರವಾರದಂದು ಮಧ್ಯಾಹ್ನ ೧:೩೦ ಗಂಟೆಗೆ ಹೋಮ-ಹವನ, ಸಾಯಂಕಾಲ ೫ ಘಂಟೆಗೆ ರಥಾರೋಹಣ, ಶ್ರೀ ದೇವರಿಗೆ ಹಣ್ಣು ಕಾಯಿ ಸೇವೆ, ದರ್ಶನ, ಕಾಣಿಕೆ ಸಲ್ಲಿಸುವುದು ಇತ್ಯಾದಿ ಜರುಗಲಿದೆ. ಸಾಯಂಕಾಲ ೭:೩೦ ರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ ೧೦ ಗಂಟೆಗೆ ದೇವಸ್ಥಾನದ ಪಂಚವಾದ್ಯದೊಂದಿಗೆ ಹಿಲಾಮತಿ ಮೆರವಣಿಗೆ ನಡೆಯಲಿದೆ. ನಂತರ ಶ್ರೀ ದೇವರ ಫಲಪುಷ್ಪ ಲೀಲಾವು ಇರುವುದು.
ಇದನ್ನೂ ಓದಿ : Special Buses/ ಶಿವರಾತ್ರಿ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ
ಇದಾದ ನಂತರ ಕಾರವಾರದ ನಂತರ ನಾಟ್ಯ ರಾಣಿ ಭರತ ನಾಟ್ಯ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಯವರಿಂದ ಭರತ ನಾಟ್ಯ, ರಾತ್ರಿ ೧೧:೩೦ ಗಂಟೆಗೆ ಶೇಜವಾಡದ ಅಭಿನವ ನಾಟ್ಯ ಸಮಾಜ ಅರ್ಪಿಸುವ ಕಿನ್ನರದ ಪ್ರದೀಪ ಗುರುನಾಥ ಕೋಠಾರಕರ ವಿರಚಿತ ಸಾಮಾಜಿಕ ಕೊಂಕಣಿ ನಾಟಕ ‘ಶಪಥ ತುಕಾ ಹ್ಯಾ ಮಂಗಳ ಸೂತ್ರಾಚೆ’ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನ ಮುಗಿಯುತ್ತಿದ್ದಂತೆ ಮಾ.೧ ಶನಿವಾರ ದಂದು ಬೆಳಿಗ್ಗೆ ೪ ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ ೪ ಗಂಟೆಗೆ ಶ್ರೀ ದೇವರ ಅವಭೃತ ಸ್ನಾನ (ಓಕುಳಿ), ಪಲ್ಲಕ್ಕಿ ಮೆರವಣಿಗೆ, ಪೂಜೆ, ಪ್ರಸಾದ ವಿತರಣೆಗೆ ಜರುಗುವುದು.
ಇದನ್ನೂ ಓದಿ : Bhajane/ ಸಪ್ತ ಪ್ರಹರ ಭಜನಾ ಕಾರ್ಯಕ್ರಮ