ಬರಹ – ರಘು ಆರ್., ಅಪ್ರೆಂಟಿಸ್, ವಾರ್ತಾ ಇಲಾಖೆ.
ಭಾರತದ ಹಾಕಿ (hockey) ದಂತಕತೆ, ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ (Major Dhyan Chand) ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ ೨೯ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು (National Sports Day) ಆಚರಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದಲ್ಲಿ ಮೊದಲ ಬಾರಿಗೆ ೨೦೧೨ರಲ್ಲಿ ಆಚರಿಸಲಾಯಿತು. ಅದೇ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ದಿನಗಳ ಪಟ್ಟಿಗೆ ಸೇರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೇಜರ್ ಧ್ಯಾನ್ ಚಂದ್ ಆಗಸ್ಟ್ ೨೯, ೧೯೦೫ರಲ್ಲಿ ಅಹಮದಾಬಾದ್ನಲ್ಲಿ ಜನಿಸಿದರು. ವಿಶ್ವಕಂಡ ಅಪರೂಪದ, ಅತ್ಯತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಧ್ಯಾನ್ ಚಂದ್ ಪಾತ್ರರಾಗಿದ್ದರು. ಇವರ ಹುಟ್ಟುಹಬ್ಬವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮೇಜರ್ ಧ್ಯಾನ್ ಚಂದ್ ಸಿಂಗ್ (೧೯೦೫-೧೯೭೯) ಅವರು ತಮ್ಮ ವಿಶಿಷ್ಟ ಸಾಧನೆಗಳೊಂದಿಗೆ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರ ಎನಿಸಿಕೊಂಡವರು. ಗಾಲ್ಫ್ ಆಟದಲ್ಲೂ ಅಸಾಧಾರಣ ಕೌಶಲ್ಯಗಳೊಂದಿಗೆ ದಶಕಗಳವರೆಗೆ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಅವರು ೧೯೨೮, ೧೯೩೨ ಮತ್ತು ೧೯೩೬ರಲ್ಲಿ ಸತತ ಮೂರು ಒಲಿಂಪಿಕ್ (Olympic) ಚಿನ್ನದ ಪದಕಗಳನ್ನು (gold medal) ಗಳಿಸಿದ ಭಾರತೀಯ ಹಾಕಿ ತಂಡದ ನಾಯಕರಾಗಿದ್ದರು. ಮೈದಾನದಲ್ಲಿನ ಅವರ ಕ್ರೀಡಾ ಕೌಶಲ್ಯಕ್ಕೆ ಅವರಿಗೆ “ಹಾಕಿ ಮಾಂತ್ರಿಕ” ಎಂಬ ಹೆಸರು ತಂದುಕೊಟ್ಟಿತ್ತು. ಅವರ ಕ್ರೀಡಾ ಕೌಶಲ್ಯ ಭಾರತದಾದ್ಯಂತ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಿದೆ.
೮ ಬಾರಿ ಚಿನ್ನ ಗೆದ್ದ ಭಾರತ:
ಒಲಿಂಪಿಕ್ಸ್ ನಲ್ಲಿ ಭಾರತ ತಂಡವು (Indian Team) ಇದುವರೆಗೂ 8 ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಹಾಕಿ ಕ್ರೀಡಾ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಿದೆ.
ಚಿನ್ನದ ಪದಕ ಪಡೆದ ವಿವರ – 1928 (ಆಂಸ್ಟರ್ಡ್ಯಾಮ್), 1932 (ಲಾಸ್ ಏಂಜಲೀಸ್), 1936 (ಬರ್ಲಿನ್), 1948 (ಲಂಡನ್), 1952 (ಹೆಲ್ಸಿಂಕಿ), 1956 (ಮೆಲ್ಬೋರ್ನ್), 1964 (ಟೋಕಿಯೋ), 1980 (ಮಾಸ್ಕೋ).
ಬೆಳ್ಳಿ ಪದಕ – 1960 (ರೋಮ್).
ಕಂಚಿನ ಪದಕ – 1968 (ಮೆಕ್ಸಿಕೋ ಸಿಟಿ), 1972 (ಮ್ಯೂನಿಚ್), 2020 (ಟೋಕಿಯೊ), 2024 (ಪ್ಯಾರಿಸ್).
ಇದನ್ನೂ ಓದಿ : ಆಗಸ್ಟ್ ೨೮ರಂದು ವಿವಿಧೆಡೆ ಅಡಿಕೆ ಧಾರಣೆ