ಭಟ್ಕಳ: ಇಲ್ಲಿನ ಪ್ರಸಿದ್ಧ ಮಾರಿ ಜಾತ್ರೆ ಸಿದ್ಧತೆ ಹಾಗೂ ಮೂರ್ತಿ ತಯಾರಿ ಕಾರ್ಯ ಭರದಿಂದ ನಡೆಯುತ್ತಿದ್ದು, ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ(Mari Jathre Countdown).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸದ್ಯ ಇಲ್ಲಿನ ಮಣ್ಕುಳಿಯ ವಿಶ್ವಕರ್ಮ ಸಮಾಜದವರಾದ (ದೇವಿಯ ತವರು ಮನೆ) ಮಾರುತಿ ಆಚಾರ್ಯ ಮನೆಯಲ್ಲಿ ದೇವಿಯ ಮೂರ್ತಿ ಕೆತ್ತನೆ ಕಾರ್ಯ ಒಂದು ಹಂತಕ್ಕೆ ಬಂದಿದ್ದು, ಮಾರಿಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ದೇವಿಗೆ ಬಣ್ಣ ಬಳಿದು ಇಂದು ರಾತ್ರಿ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ.
ಇದನ್ನೂ ಓದಿ : ಕಾಲೇಜಿಗೆಂದು ಹೋದ ಯುವಕ ನಾಪತ್ತೆ
ವಿಶ್ವಕರ್ಮ ಸಮಾಜದವರಿಂದ ತವರು ಮನೆಯ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಆ ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆಯೂ ಸಹ ನಡೆಸಲಾಗುವುದು. ಪೂಜಾ ಸಮಯದಲ್ಲಿ ಅವರ ಸಮಾಜದ ಮಹಿಳೆಯರೊಬ್ಬರ ಮೇಲೆ ಮಾರಿ ದೇವಿ ಬರುರುತ್ತಾಳೆಂಬ ನಂಬಿಕೆ ಇದೆ. ನಂಬಿಕೆಯಂತೆ ಪೂಜೆಯ ವೇಳೆ ಮೈ ದರ್ಶನ ನಡೆಯುತ್ತದೆ. ನಂತರ ಮಹಾ ಮಂಗಳಾರತಿ ನಡೆಯುತ್ತದೆ.
ಇದನ್ನೂ ಓದಿ : ಚಿಂತೆ ಬೇಡ, ಬೆಂಗಳೂರಿಗೆ ವಿಶೇಷ ರೈಲು ಸಂಚಾರ!
ಬುಧವಾರದಂದು ಮುಂಜಾನೆ ೫.೩೦ ಗಂಟೆಗೆ ಮಾರಿ ದೇವಿಯನ್ನು ಭಕ್ತರು ಅದ್ದೂರಿ ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಕರೆದೊಯ್ಯಲಾಗುತ್ತದೆ. ಸಕಲ ಸಂಭ್ರಮದಿಂದ ವಿಶೇಷ ಆಕರ್ಷಣೆ, ಚಂಡೆ ವಾದ್ಯ, ನೃತ್ಯ ಕುಣಿತದೊಂದಿಗೆ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ : ಭಟ್ಕಳದಲ್ಲಿ ಶಾಂತಿ ಸಭೆ ನಡೆಯುತ್ತಿದೆಯೆ?
ಕಳೆದ ಮಂಗಳವಾರದಂದು ಮಾರಿ ದೇವಿ ಮೂರ್ತಿಯ ಮರವನ್ನು ಬೆಳೆಕೆ ಗರಡಿ ಹಿತ್ಲುವಿನಲ್ಲಿ ದೇವಸ್ಥಾನದ ಆಡಳಿತ ಕಮಿಟಿ ಮುಖ್ಯಸ್ಥರನ್ನು ಒಳಗೊಂಡಂತೆ ಸ್ಥಳೀಯರು ಮತ್ತು ಹರಕೆಯಲ್ಲಿ ಮಾರಿ ಮೂರ್ತಿ ಮರವನ್ನು ನೀಡಿದ ಕುಟುಂಬದವರು ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಊರಿನ ಮುತೈದೆಯರು ಮೂರ್ತಿಗೆ ಉಡಿ ತುಂಬಿ ಸಂಪ್ರದಾಯಬದ್ದವಾಗಿ ಮಾರಿ ಮೂರ್ತಿ ತಯಾರಿಗೆ ಚಾಲನೆ ನೀಡಿದ್ದರು. ನಂತರ ಮೂರ್ತಿ ತಯಾರಿಕೆ ಕೆಲಸವನ್ನು ಆಚಾರ್ಯರ ಮನೆಯಲ್ಲಿ ಆರಂಭಗೊಂಡಿತು.
ಇದನ್ನೂ ಓದಿ : ಅತಿ ವೇಗದಿಂದ ವಾಹನ ಚಲಾಯಿಸಿದರೆ ದಂಡ ಪಕ್ಕಾ!
ಮಾರಿ ದೇವಿಯ ಮೂರ್ತಿಯನ್ನು ತಲೆತಲಾಂತರದಿಂದ ಇಲ್ಲಿನ ವಿಶ್ವಕರ್ಮ ಸಮಾಜದ ಕುಟುಂಬದವರು ತಯಾರಿಸುತ್ತಾ ಬಂದಿದ್ದಾರೆ. ವಿಶ್ವ ಕರ್ಮ ಸಮಾಜದ ಮೂರನೇ ತಲೆಮಾರಿನವರಾದ ಮಣ್ಕುಳಿಯ ಮಾರುತಿ ಆಚಾರ್ಯ ಅವರು ಮಾರಿದೇವಿಯ ಮೂರ್ತಿಯನ್ನು ನಿರ್ಮಾಣ ಮಾಡುತ್ತಾ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ : ಇಂದು ಮತ್ತೆ ಮಳೆಯಬ್ಬರ ಸಾಧ್ಯತೆ
ಈ ವಿಶೇಷ ಮಾರಿ ಜಾತ್ರೆಯೂ ಇಲ್ಲಿನ ಜನರ ಅತೀದೊಡ್ಡ ಹಬ್ಬವಾಗಿದ್ದು, ಅದು ಊರಿಗೆ ಊರೇ ಹಬ್ಬದ ಸಂಭ್ರಮವಾಗಿರುತ್ತದೆ. ಈ ಮಾರಿ ದೇವಿಯು ರೋಗ ರುಜಿನಗಳಿಂದ ಗ್ರಾಮವನ್ನು ರಕ್ಷಿಸುತ್ತಾಳೆಂಬ ನಂಬಿಕೆಯಿದೆ. ಅದ್ದೂರಿಯಾಗಿ ಕರೆತರಲಾದ ಮಾರಿ ದೇವಿಯ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೌಂಕರ್ಯಗಳನ್ನು ನಡೆಸಲಾಗುವದು. ಆ ಮೂಲಕ ಎರಡು ದಿನಗಳ ಮಾರಿ ಜಾತ್ರಾ ಮಹೋತ್ಸವ ಮಾರಿಗದ್ದುಗೆಯಲ್ಲಿ ಮಾರಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆಗೊಳ್ಳಲಿದೆ.
ಇದನ್ನೂ ಓದಿ : ಮಾರಿ ಮೂರ್ತಿ ಬಿಂಬ ಪೂರ್ಣ
ಸಾಕಷ್ಟು ವರ್ಷಗಳ ಹಿಂದೆ ಗ್ರಾಮಕ್ಕೆ ಯಾವುದೇ ಭೀಕರ ರೋಗ, ರುಜನಿಗಳು ಬಾರದಿರಲಿ ಎಂಬ ಹಿನ್ನೆಲೆಯಲ್ಲಿ ಹಿರಿಯರೆಲ್ಲರೂ ಮಾರಿದೇವಿಯನ್ನು ಸ್ಥಾಪಿಸಿ ಅದರ ಜಾತ್ರಾ ಮಹೋತ್ಸವವನ್ನು ಮಾಡುವ ಪದ್ದತಿಯೂ ರೂಡಿಯಲ್ಲಿದೆ. ಈ ಹಿಂದೆ ಹಿರಿಯರು ಹೇಳುವಂತೆ 1951-52ನೇ ಇಸವಿಯಲ್ಲಿ ಗ್ರಾಮಕ್ಕೆ ಪ್ಲೇಗ್ (ಇಲಿರೋಗ) ಬಂದಿದ್ದು, ಇಲಿಗಳು ಎಲ್ಲೆಂದರಲ್ಲಿ ಸಾವನ್ನಪ್ಪಿದ್ದರಿಂದ ಜನರು ಭಯಭೀತರಾಗಿದ್ದು ಬಿಟ್ಟರೆ ಅಂದಿನಿಂದ ಇಂದಿನ ತನಕ ಗ್ರಾಮಕ್ಕೆ, ಊರಿಗೆ ಯಾವುದೇ ಭಯಾನಕ ರೋಗ ಬಂದಿರುವ ಉದಾರಹಣೆ ಇಲ್ಲ ಎನ್ನುತ್ತಾರೆ ಹಿರಿಯರು.
ಇದನ್ನೂ ಓದಿ : ಮಾರಿ ಜಾತ್ರೆ ನಿಮಿತ್ತ ಮೂರ್ತಿ ಕೆತ್ತನೆಗೆ ಚಾಲನೆ
ವರ್ಷಂಪ್ರತಿ ಮಾರಿ ಹಬ್ಬದ ಪ್ರಯುಕ್ತ ಭಟ್ಕಳದ ಮನೆ ಮನೆಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಕುಳಿಯಲ್ಲಿನ ಮಾರುತಿ ಆಚಾರಿ ಅವರ ಮನೆಯವರು ಒಂದು ವಾರದಿಂದ ತಮ್ಮ ಮನೆಯಲ್ಲಿಯೇ ಆಮಟೆ ಮರದಿಂದ ಸುಂದರ ಮಾರಿ ಮೂರ್ತಿಯನ್ನು ಕೆತ್ತಿ ಮಾರಿಜಾತ್ರೆಯ ಹಿಂದಿನ ದಿನ ಅತಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ ನಂತರ ಮಾರಿ ಮೂರ್ತಿಯನ್ನು ಮಾರನೇ ದಿನ ಬೆಳಗಿನ ಜಾವ ಸಂಬಂಧಪಟ್ಟವರಿಗೆ ಬಿಟ್ಟುಕೊಟ್ಟ ನಂತರ ಮಾರಿ ಜಾತ್ರೆಗೆ ಅಧಿಕೃತ ಚಾಲನೆ ದೊರೆಯುವ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.
– ಮಾರುತಿ ಆಚಾರ್ಯ, ಮೂರ್ತಿ ಕಲಾವಿದ.
ಇದನ್ನೂ ಓದಿ : ಮಾರಿಜಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಆಡಳಿತ ಸಮಿತಿ