ಭಟ್ಕಳ (Bhatkal) : ಜನಸಾಗರ, ಮೈ ಜುಮ್ಮೆನ್ನಿಸುವ ವಿವಿಧ ಪೌರಾಣಿಕ ಸ್ತಬ್ಧ ಚಿತ್ರಗಳು, ಭಜನೆ, ಕುಣಿತ ಸಂಭ್ರಮ, ಸಡಗರಗಳ ಸಂಗಮದೊಂದಿಗೆ ಮಾರಿ ದೇವಿಯ ವಿಸರ್ಜನಾ ಮೆರವಣಿಗೆ (Mari Jathre) ಸಂಪನ್ನಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎರಡು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಅಳಿವೆಕೋಡಿ ಮಾರಿ ದೇವಿ ಜಾತ್ರೆಯ (Mari Jathre) ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಬುಧವಾರದಂದು ಅದ್ದೂರಿ ದೇವಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆಯಲ್ಲಿ ಸಾಗಿತು. ಇಲ್ಲಿನ ವೆಂಕಟಾಪುರ ನದಿಯಲ್ಲಿ ವಿಸರ್ಜನೆ ಮಾಡುವ ಮೂಲಕ ಅದ್ದೂರಿ ಮಾರಿ ಜಾತ್ರೆಗೆ  ತೆರೆಬಿದ್ದಿತು.

ಇದನ್ನು ಓದಿ : ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಸಾಧನೆ

ಎರಡು ದಿನಗಳ ಕಾಲ ನಡೆದ ಈ ಜಾತ್ರೆಯಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಬಂದು ಹರಕೆ ಸೇವೆ ಸಲ್ಲಿಸುವುದರ ಮೂಲಕ ಶ್ರೀ ಮಾರಿ ದೇವಿಯ ದರ್ಶನ ಪಡೆದುಕೊಂಡರು. ಬುಧವಾರ ಸಂಜೆ ೫ ಗಂಟೆಯ ಸುಮಾರಿಗೆ ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಾರಿಗೆ ವಿಶೇಷ ಪೂಜೆ ಸಲ್ಲಿಸಿ ಮಾರಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ : ಸರಕಾರಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

ಅಳ್ವೆಕೋಡಿಯಿಂದ ಹೊರಟ ಮೆರವಣಿಗೆಯು ಸಣಬಾವಿ, ಉಲ್ಮಣ್ಣು, ಯಕ್ಷೆಮನೆ, ಮಾವಿನಕಟ್ಟೆ, ಸಾರದಹೊಳೆ. ಶಿರಾಲಿ ಮಾರ್ಗವಾಗಿ ವೆಂಕಟಾಪುರದ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ನಿವೇಶನದಲ್ಲಿ ಸುಸಂಪನ್ನಗೊಂಡಿತು. ಅಲ್ಲಿ ಮಾರಿಯನ್ನು ಕುಳ್ಳರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀ ದುರ್ಗಾಪರಮೇಶ್ವರಿಯ ವಿಸರ್ಜನೆ ಸಹಸ್ರಾರು ಭಕ್ತರ ಹರ್ಷೋದ್ಧಾರದೊಂದಿಗೆ ವಿದ್ಯುಕ್ತವಾಗಿ ನೆರವೇರಿತು.

ಇದನ್ನೂ ಓದಿ : ಶೇಡಿ ಮರ ಏರಿದ ಸಹಸ್ರಾರು ಭಕ್ತರು

ಮೆರವಣಿಗೆಯುದ್ದಕ್ಕೂ ಸರಸ್ವತಿ, ದೇವಲೋಕದಲ್ಲಿ ಸಂಚರಿಸುವ ಶಿವ, ತಟ್ಟಿರಾಯ, ಗೊಂಬೆ, ಹುಲಿ, ಗೋರಿಲ್ಲಾ ಸೇರಿದಂತೆ ಅತ್ಯದ್ಭುತವಾದ ಸ್ತಬ್ಧಚಿತ್ರಗಳು, ವಿವಿಧ ಮಹಿಳಾ ಸ್ವಯಂಸೇವಕ ಸಂಘಗಳ ಸದಸ್ಯರ ಭಜನಾ ಕುಣಿತ, ಅಳ್ವೆಕೋಡಿ ಭಜನಾ ತಂಡದ ಭಕ್ತಿಗೀತೆಗಳು ನೋಡುಗರ ಕಣ್ಮನ ಸೆಳೆದವು. ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ನಿಂತು ಮಾರಿ ಮೆರವಣಿಗೆಯನ್ನು ಕಣ್ತುಂಬಿಸಿಕೊಂಡರು.

ಇದನ್ನೂ ಓದಿ:  ‘ಶಿರಾಲಿಯ ಶಕ್ತಿ – ಶ್ರೀ ಹಾದಿ ಮಾಸ್ತಿ’ ಪುಸ್ತಕ ಲೋಕಾರ್ಪಣೆ

ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಧರ್ಮದರ್ಶಿಗಳಾದ ನಾರಾಯಣ ದೈಮನೆ, ಅರವಿಂದ ಪೈ, ಹನುಮಂತ ನಾಯ್ಕ, ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ವಿಠಲ ದೈಮನೆ, ಉದ್ಯಮಿ ಬಾಬು ಮೊಗೇರ, ಯಾದವ ಮೊಗೇರ ಸೇರಿದಂತೆ ಹಲವಾರು ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Readers letter/ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ತಾತ್ಸಾರವೇಕೆ?

ಸಾರದಹೊಳೆ ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನ ಸೇರಿದಂತೆ ಅಲ್ಲಲ್ಲಿ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ವಿಶಿಷ್ಟ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸುವ ಮೂಲಕ ಮತ್ತೊಮ್ಮೆ ಇತಿಹಾಸ ಸೃಷ್ಟಿಯಾಯಿತು. ಡಿವೈಎಸ್ಪಿ ಮಹೇಶ, ಸಿಪಿಐ ಚಂದನ್, ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಮೆರವಣಿಗೆಯುದ್ದಕ್ಕೂ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಸುದ್ದಿಯ ವಿಡಿಯೋವನ್ನು  ಯೂಟ್ಯೂಬ್ಇನ್ಸ್ಟಾಗ್ರಾಂ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.