ಭಟ್ಕಳ (Bhatkal) : ಭಟ್ಕಳದ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯನ್ನು (media cup) ಆಯೋಜಿಸಿ ಉತ್ತರ ಕನ್ನಡ (Uttara Kannada) ಮತ್ತು ಉಡುಪಿ (Udupi) ಜಿಲ್ಲೆಯಿಂದ ಪತ್ರಕರ್ತರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಪತ್ರಕರ್ತರಲ್ಲಿ ಉತ್ತಮ ಬಾಂಧವ್ಯ, ಪ್ರೀತಿ, ವಿಶ್ವಾಸ ಮೂಡಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಸುಬ್ರಾಯ ಭಟ್ಟ ಬಕ್ಕಳ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಎರಡು ದಿನಗಳ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಭಟ್ಕಳ ಮೇಡಿಯಾ ಕಪ್ ಗೆ (media cup) ಚಾಲನೆ ನೀಡಿ ಮಾತನಾಡಿದರು. ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಧ್ಯೇಯೋದ್ಧೇಶಗಳು ರಾಜ್ಯದಲ್ಲೇ ಮಾದರಿಯಾಗಿದೆ ಎಂದರು.
ಇದನ್ನೂ ಓದಿ : Pakistani women/ ಭಟ್ಕಳ ಪುರುಷರನ್ನು ಮದುವೆಯಾದ ಪಾಕಿಸ್ತಾನಿ ಮಹಿಳೆಯರ ಭವಿಷ್ಯ ಅನಿಶ್ಚಿತ!
ಮುಖ್ಯ ಅತಿಥಿಯಾಗಿದ್ದ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಅಪ್ಸಾ ಹುಜೈಪಾ ಪಂದ್ಯಾವಳಿಗೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ, ಭಟ್ಕಳ ಪತ್ರಕರ್ತರ (Journalist) ಕ್ಷೇಮಾಭಿವೃದ್ಧಿಗೋಸ್ಕರ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಿಕೊಂಡು ಅದರಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಭಟ್ಕಳದಲ್ಲಿ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ (cricket tournament) ನಡೆಯುತ್ತಿರುವುದು ಪತ್ರಕರ್ತರ ಮಧ್ಯೆ ಪ್ರೀತಿ, ವಿಶ್ವಾಸ, ಬಾಂಧವ್ಯ ಹೆಚ್ಚಿಸಿದೆ. ತಾಲೂಕು ಮಟ್ಟದ ಪತ್ರಕರ್ತರಿಗೆ ಸರಕಾರದಿಂದ ಸೌಲಭ್ಯ ಸಿಗಬೇಕು ಎಂದರು.
ಇದನ್ನೂ ಓದಿ : assaulted/ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಹಲ್ಲೆ
ವೇದಿಕೆಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಉಪಾಧ್ಯಕ್ಷ ವಿಷ್ಣು ದೇವಡಿಗ, ಜಾಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಘವೇಂದ್ರ ಭಟ್ಟ, ಹಿರಿಯ ಪತ್ರಕರ್ತರಾದ ಸತೀಶಕುಮಾರ ನಾಯ್ಕ, ಶೇಷಗಿರಿ ಮುಂಡಳ್ಳಿ, ಭಟ್ಕಳ ಸ್ಪೋರ್ಟ್ಸನ ವಸೀಮ್, ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕ ಕೃಷ್ಣ ಮೊಗೇರ ಮುಂತಾದವರಿದ್ದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರು. ಸದಸ್ಯ ಭಾಸ್ಕರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಮೊಗೇರ, ಸಂಜನಾ ನಿರೂಪಿಸಿದರು. ಖಜಾಂಚಿ ಮೋಹನ ನಾಯ್ಕ ವಂದಿಸಿದರು. ಪಂದ್ಯಾವಳಿಯಲ್ಲಿ ಆರು ಪತ್ರಕರ್ತರ ತಂಡಗಳು ಪಾಲ್ಗೊಂಡಿದ್ದವು.
ಇದನ್ನೂ ಓದಿ : Pahalgam attack/ ಉತ್ತರ ಕನ್ನಡ ಜಿಲ್ಲೆಯ ೩೨ ಪ್ರವಾಸಿಗರು ಸುರಕ್ಷಿತ